Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

Summer Camp at Shakti Vidya Institute : Shakti Can Create

A summer camp “Shakti Can Create” was inaugurated on April 5 at Shakti Vidyasirshana, Shakti Nagar. The guests inaugurated the program by bringing out a butterfly made of kraft paper from its nest.

Principal Bindusara Shetty of Sarojini Madusudana Kushe Vidyasinsha, who came as the inaugural speaker, said that Shakti Vidyasinsha has made its own special contribution. The founder of the institution Dr. KC Nayak is working hard for the development of the organization. Looking at the format of this program, the task of introducing Indian culture is very well organized.

Grandma’s house was our camp when we were young. All students and parents should take full advantage of this camp. He said that a golden bridge should be built between children, parents and teachers.

Ramesh K, principal advisor of Shakti Vidyasirshana said that the former administrator of Shakti Vidyasirshana. This summer camp is the dream of Baikadi Janardana Acharya. He started with the name “Shakti Can Create”. He said that he should be remembered on this occasion.

Such camps complement the National Education Policy. He said that students and parents should follow the rules of the camp.

The students are divided into two sections in this camp which is held for 11 days, informing the students of the Teacher Chetana Camp.

A bunch of five special activities are organized for each team. In the “Culture” section – Yakshagana, Kathak, Kunita Bhajan, Dance metaphor, folk song and lyric, performance song and chanting of Bhagavad Gita. Volleyball, Kabaddi, Shuttle Badminton, Karate, Yoga, Zumba and Indian sports are organized in “Udyatham” section.

“Kala Kaushalam” – Section includes Bird Feeder, Rock Painting, Doll Making, Bottle Art, Mandala and Worli Art, 3D Craft, Wall Hanging, Clay Art, Rangoli and Painting. “Spectacular Soirees” – section organized “Puppet Theatre, Pet Awareness, Nature Walk, Gardening, Field Trip, Treasure Hunt, Talent Show, Traditional Day, Cooking Without Fire and Movie Time.

“Gen G” – Section includes Public Speaking, Vedic Mathematics, Artificial Intelligence, Web Designing, Beauty & Wellness, Street Play, Story Telling, Science Experiments. He said that every day food, drink and bus system has been arranged from fixed places.

In the program, Dr. K., the founder of Shakti Vidyasirshana. C. NAAC, Shakti Undergraduate College Principal Venkatesh Murthy, Shakti Residential School Principal Babita Suraj were present. More than 100 students have registered to participate in the camp.

Teacher Sahana welcomed, Teacher Manasa Prabhu gave felicitations. Fellow teacher Tara narrated the program.

ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಬೇಸಿಗೆ ಶಿಬಿರ : ಶಕ್ತಿ ಕ್ಯಾನ್ ಕ್ರಿಯೇಟ್‌ನ ಉದ್ಘಾಟನಾ ಸಮಾರಂಭ

ಶಕ್ತಿ ನಗರದ ಶಕ್ತಿ ವಿದ್ಯಾಸಂಸ್ಥೆಯಲ್ಲಿ ಎಪ್ರಿಲ್ 5 ರಂದು ಬೇಸಿಗೆ ಶಿಬಿರ “ಶಕ್ತಿ ಕ್ಯಾನ್ ಕ್ರಿಯೇಟ್” ಅನ್ನು ಉದ್ಘಾಟಿಸಲಾಯಿತು. ಕ್ರಾಫ್ಚ್ ಪೇಪರ್‌ನಿಂದ ನಿರ್ಮಾಣವಾದ ಚಿಟ್ಟೆಯನ್ನು ತನ್ನ ಗೂಡಿನಿಂದ ಹೊರಗೆ ತರುವ ಮೂಲಕ ಅತಿಥಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಸರೋಜಿನಿ ಮದುಸೂದನ ಕುಶೆ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಬಿಂದುಸಾರ ಶೆಟ್ಟಿ ಮಾತನಾಡಿ ಶಕ್ತಿ ವಿದ್ಯಾಸಂಸ್ಥೆ ತನ್ನದೇ ಆದ ವಿಶೇಷವಾದ ಕೊಡುಗೆಯನ್ನು ನೀಡಿದೆ. ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಸಿ.ನಾಕ್ ರವರು ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಈ ಕಾರ್ಯಕ್ರಮದ ಸ್ವರೂಪವನ್ನು ನೋಡಿದರೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯ ಅತ್ಯಂತ ಸುಂದರವಾಗಿ ಆಯೋಜನೆ ಗೊಂಡಿದೆ. ನಾವು ಚಿಕ್ಕವರಿರುವಾಗ ಅಜ್ಜಿ ಮನೆಯೇ ನಮಗೆ ಶಿಬಿರವಾಗಿತ್ತು. ಈ ಶಿಬಿರದ ಪೂರ್ಣ ಪ್ರಯೋಜನವನ್ನು ಎಲ್ಲ ವಿದ್ಯಾರ್ಥಿಗಳು ಹಾಗೂ ಪಾಲಕರು ಪಡೆದುಕೊಳ್ಳಬೇಕು. ಮಕ್ಕಳ, ಪಾಲಕರ ಮತ್ತು ಶಿಕ್ಷಕರ ನಡುವೆ ಒಂದು ಸುವರ್ಣ ಸೇತುವೆ ನಿರ್ಮಾಣವಾಗಬೇಕು ಎಂದರು.

ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ ಮಾತನಾಡಿ ಶಕ್ತಿ ವಿದ್ಯಾಸಂಸ್ಥೆಯ ಹಿಂದಿನ ಅಡ್ಮಿನಿಸ್ಟ್ರೇಟರ್ ಆಗಿದ್ದ ದಿ. ಬೈಕಾಡಿ ಜನಾರ್ದನ ಆಚಾರ್ಯರ ಕನಸಿನ ಕೂಸು ಈ ಬೇಸಿಗೆ ಶಿಬಿರ. ಅವರೇ “ಶಕ್ತಿ ಕ್ಯಾನ್ ಕ್ರಿಯೇಟ್” ಎಂಬ ಹೆಸರು ನೀಡಿ ಆರಂಭಿಸಿದರು. ಅವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇ ಬೇಕು ಎಂದರು. ಇಂತಹ ಶಿಬಿರಗಳು ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿದೆ. ವಿದ್ಯಾರ್ಥಿಗಳು ಹಾಗೂ ಪಾಲಕರು ಶಿಬಿರದ ನಿಯಮವನ್ನು ಪಾಲಿಸಬೇಕು ಎಂದು ಹೇಳಿದರು.

ಶಿಕ್ಷಕಿ ಚೇತನಾ ಶಿಬಿರದ ವಿವರಗಳನ್ನು ತಿಳಿಸುತ್ತಾ ಹನ್ನೊಂದು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಎರಡು ವಿಭಾಗಗಳಾಗಿ ವಿದ್ಯಾರ್ಥಿಗಳನ್ನು ವಿಭಾಗಿಸಲಾಗಿದೆ. ಪ್ರತಿ ತಂಡಗಳಿಗೆ ಐದು ವಿಶೇಷವಾದ ಚಟುವಟಿಕೆಗಳ ಗುಚ್ಛವನ್ನು ಆಯೋಜಿಲಾಗಿದೆ. “ಸಂಸ್ಕೃತಿ” ವಿಭಾಗದಲ್ಲಿ – ಯಕ್ಷಗಾನ, ಕಥಕ್, ಕುಣಿತ ಭಜನೆ, ನೃತ್ಯ ರೂಪಕ, ಜನಪದಗೀತೆ ಹಾಗೂ ಭಾವಗೀತೆ, ಅಭಿನಯಗೀತೆ ಮತ್ತು ಭಗವದ್ಗೀತಾ ಪಠಣ ಇರುತ್ತದೆ. “ಉದ್ಯತಮ್” – ವಿಭಾಗದಲ್ಲಿ ವಾಲೀಬಾಲ್, ಕಬ್ಬಡ್ಡಿ, ಶಟಲ್ ಬ್ಯಾಡ್ಮಿಂಟನ್, ಕರಾಟೆ, ಯೋಗ, ಝಂಬಾ ಹಾಗೂ ಭಾರತೀಯ ಕ್ರೀಡೆಗಳನ್ನು ಆಯೋಜಿಸಲಾಗಿದೆ. “ಕಲಾ ಕೌಶಲಮ್” – ವಿಭಾಗದಲ್ಲಿ ಬರ್ಡ್ ಫೀಡರ್, ರಾಕ್ ಪೇಂಟಿಂಗ್, ಡಾಲ್ ಮೇಕಿಂಗ್, ಬಾಟಲ್ ಆರ್ಟ್, ಮಂಡಲ ಮತ್ತು ವರ್ಲೀ ಆರ್ಟ್, ೩ಡಿ ಕ್ರಾಫ್ಟ್, ವಾಲ್ ಹಾಂಗಿಂಗ್, ಕ್ಲೇ ಆರ್ಟ್, ರಂಗೋಲೀ ಮತ್ತು ಚಿತ್ರಕಲೆಗಳು ಇರುತ್ತವೆ. “ಸ್ಪೆಕ್ಟಾಕ್ಯುಲರ್ ಸೊಯರೀಸ್” – ವಿಭಾಗದಲ್ಲಿ ” ಪಪೆಟ್ ಥಿಯೇಟರ್, ಪೆಟ್ ಅವೆರನೆಸ್, ನೇಚರ್ ವಾಕ್, ಗಾರ್ಡನಿಂಗ್, ಫೀಲ್ಡ್ ಟ್ರೀಪ್, ಟ್ರೆಜರ್ ಹಂಟ್, ಟ್ಯಾಲೆಂಟ್ ಶೋ, ಟ್ರೆಡಿಶನಲ್ ಡೇ, ಕುಕಿಂಗ್ ವಿದೌಂಟ್ ಫೈಯರ್ ಮತ್ತು ಮೂವಿ ಟೈಂ ಆಯೋಜಿಸಲಾಗಿದೆ. “ಜೆನ್ ಜಿ” – ವಿಭಾಗವು ಪಬ್ಲಿಕ್ ಸ್ಪೀಕಿಂಗ್, ವೇದ ಗಣಿತ, ಆರ್ಟಿಫಿಶಲ್ ಇಂಟಲಿಜೆನ್ಸ್, ವೆಬ್ ಡಿಸೈನಿಂಗ್, ಬ್ಯೂಟಿ ಎಂಡ್ ವೆಲ್ನೆಸ್, ಸ್ಟ್ರೀಟ್ ಪ್ಲೇ, ಸ್ಟೋರಿ ಟೆಲ್ಲಿಂಗ್, ಸೈನ್ಸ್ ಎಕ್ಸ್ಪರಿಮೆಂಟ್ಸ್ ಗಳನ್ನು ಒಳಗೊಂಡಿರುತ್ತದೆ. ಪ್ರತಿದಿನ ಊಟ, ಪಾನೀಯ ಹಾಗೂ ನಿಗದಿತ ಸ್ಥಳಗಳಿಂದ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಕ್ತಿ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಡಾ.ಕೆ.ಸಿ. ನಾಕ್, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ, ಶಕ್ತಿ ವಸತಿ ಶಾಲೆಯ ಪ್ರಾಶುಪಾಲೆ ಬಬಿತಾ ಸೂರಜ್ ಉಪಸ್ಥಿತರಿದ್ದರು. ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದಾರೆ.

ಶಿಕ್ಷಕಿ ಸಹನಾ ಸ್ವಾಗತಿಸಿದರು, ಶಿಕ್ಷಕಿ ಮಾನಸಾ ಪ್ರಭು ವಂದಿಸಿದರು ಹಾಗೂ ಸಹ ಶಿಕ್ಷಕಿ ತಾರಾ ಕಾರ್ಯಕ್ರಮ ನಿರೂಪಿಸಿದರು.