Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

Inauguration of National Cadet Corps (NCC) at Shakthi PU College

National Cadet Corps (NCC) Unit, Army wing was officially inaugurated on 11th November 2026 at Shakthi PU College, Shakthinagar, Mangaluru.

The Chief Guest, Lieutenant Colonel Rohit Prakash Rai, Commanding Officer, 18 Karnataka Battalion NCC, formally inaugurated the unit by unveiling the NCC plaque. Another eminent guest Nq. sub N.B Patil, PI Staff, Karnataka Batallion NCC was also present on the occasion.

The ceremony was presided over by Dr. K. C. Naik, Administrator, Shakthi Education Trust. The dignitaries present included Mr. Sanjith Naik, Secretary, Shakthi Education Trust; Mr. Ramesh K., Chief Advisor; Mr. Pradeep Kumar Shetty, Principal, Shakthi PU College; Dr. Surekha Bhat, Principal, Shakthi Residential School; and Mr. Suryanarayana Bhat, Caretaker Officer (CTO).

In his keynote address, Lt. Col. Rohit Prakash Rai appreciated the exemplary discipline displayed by the students and highlighted that this spirit of discipline forms the very foundation of the NCC. He also congratulated the college management and motivated the newly enrolled cadets to uphold the NCC motto, “Unity and Discipline.”

Addressing the gathering, Mr. Sanjith Naik conveyed his best wishes and encouraged the cadets to utilize this platform to promote national integration, social responsibility, and selfless service.

The NCC pledge was administered to the cadets by Mr. Suryanarayana Bhat, CTO. The programme was compered by Ms. Ashwini, Lecturer, and the welcome address was delivered by Mr. Suryanarayana Bhat (CTO) of the NCC Unit.

ಶಕ್ತಿ ಪಿಯು ಕಾಲೇಜಿನಲ್ಲಿ ನ್ಯಾಷನಲ್ ಕೆಡೆಟ್ ಕಾರ್ಪ್ಸ್ (NCC) ಉದ್ಘಾಟನೆ

ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ಪಿಯು ಕಾಲೇಜಿನಲ್ಲಿ 2026 ರ ನವೆಂಬರ್ 11 ರಂದು ನ್ಯಾಷನಲ್ ಕೆಡೆಟ್ ಕಾರ್ಪ್ಸ್ (NCC) ನ ’ಆರ್ಮಿ ವಿಂಗ್’ (ಸೇನಾ ವಿಭಾಗ) ಘಟಕವನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.

ಮುಖ್ಯ ಅತಿಥಿಗಳಾದ 18 ನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿಯ ಕಮಾಂಡಿಂಗ್ ಆಫೀಸರ್, ಲೆಫ್ಟಿನೆಂಟ್ ಕರ್ನಲ್ ರೋಹಿತ್ ಪ್ರಕಾಶ್ ರೈ ಅವರು ಎನ್‌ಸಿಸಿ ಫಲಕವನ್ನು ಅನಾವರಣಗೊಳಿಸುವ ಮೂಲಕ ಈ ಘಟಕವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿಯ ಪಿಐ (PI) ಸಿಬ್ಬಂದಿ, ನಾಯಬ್ ಸುಬೇದಾರ್ ಎನ್. ಬಿ. ಪಾಟೀಲ್ ಅವರು ಕೂಡ ಉಪಸ್ಥಿತರಿದ್ದರು.

ಶಕ್ತಿ ಎಜುಕೇಶನ್ ಟ್ರಸ್ಟ್‌ನ ಆಡಳಿತಾಧಿಕಾರಿಯವರಾದ ಡಾ. ಕೆ. ಸಿ. ನಾೖಕ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಕ್ತಿ ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿಯವರಾದ ಸಂಜಿತ್ ನಾೖಕ್, ಮುಖ್ಯ ಸಲಹೆಗಾರರಾದ ರಮೇಶ್ ಕೆ., ಶಕ್ತಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ಡಾ. ಸುರೇಖಾ ಭಟ್ ಹಾಗೂ ಕೇರ್‌ಟೇಕರ್ ಆಫೀಸರ್ (CTO) ಸೂರ್ಯನಾರಾಯಣ ಭಟ್ ಉಪಸ್ಥಿತರಿದ್ದರು.

ತಮ್ಮ ಮುಖ್ಯ ಭಾಷಣದಲ್ಲಿ, ಲೆಫ್ಟಿನೆಂಟ್ ಕರ್ನಲ್ ರೋಹಿತ್ ಪ್ರಕಾಶ್ ರೈ ಅವರು ವಿದ್ಯಾರ್ಥಿಗಳು ಪ್ರದರ್ಶಿಸಿದ ಶಿಸ್ತನ್ನು ಶ್ಲಾಘಿಸಿದರು ಮತ್ತು ಈ ಶಿಸ್ತಿನ ಮನೋಭಾವವೇ ಎನ್‌ಸಿಸಿ (NCC) ಯ ಅಡಿಪಾಯವಾಗಿದೆ ಎಂದು ಒತ್ತಿ ಹೇಳಿದರು. ಅವರು ಕಾಲೇಜು ಆಡಳಿತ ಮಂಡಳಿಯನ್ನು ಅಭಿನಂದಿಸಿದರು ಹಾಗೂ ಹೊಸದಾಗಿ ಸೇರ್ಪಡೆಗೊಂಡ ಕೆಡೆಟ್‌ಗಳಿಗೆ, ಎನ್‌ಸಿಸಿಯ ಧ್ಯೇಯವಾಕ್ಯವಾದ “ಏಕತೆ ಮತ್ತು ಶಿಸ್ತು” (Unity and Discipline) ಅನ್ನು ಎತ್ತಿಹಿಡಿಯುವಂತೆ ಪ್ರೇರೇಪಿಸಿದರು.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಸಂಜಿತ್ ನಾೖಕ್ ಅವರು, ಶುಭಾಶಯಗಳನ್ನು ಕೋರುವುದರ ಜೊತೆಗೆ, ರಾಷ್ಟ್ರೀಯ ಭಾವೈಕ್ಯತೆ, ಸಾಮಾಜಿಕ ಜವಾಬ್ದಾರಿ ಮತ್ತು ನಿಸ್ವಾರ್ಥ ಸೇವೆಯನ್ನು ಉತ್ತೇಜಿಸಲು ಈ ವೇದಿಕೆಯನ್ನು ಬಳಸಿಕೊಳ್ಳುವಂತೆ ಕೆಡೆಟ್‌ಗಳಿಗೆ ಕರೆ ನೀಡಿದರು. ಸಿಟಿಒ (CTI) ಸೂರ್ಯನಾರಾಯಣ ಭಟ್ ಅವರು ಕೆಡೆಟ್‌ಗಳಿಗೆ ಎನ್‌ಸಿಸಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ನಂತರ ನ್ಯಾಷನಲ್ ಕೆಡೆಟ್ ಕಾರ್ಪ್ಸ್ (NCC) ನ ’ಆರ್ಮಿ ವಿಂಗ್’ (ಸೇನಾ ವಿಭಾಗ) ಕಛೇರಿಯನ್ನು ರಿಬ್ಬನ್ ಕತ್ತರಿಸುವ ಮೂಲಕ ಅತಿಥಿಗಳು ಉದ್ಘಾಟಿಸಿದರು. ಉಪನ್ಯಾಸಕಿ ಅಶ್ವಿನಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಸೂರ್ಯನಾರಾಯಣ ಭಟ್ ಅವರು ಸ್ವಾಗತ ಭಾ?ಣ ಮಾಡಿದರು.