ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಯಲ್ಲಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆಯ ನಿಮಿತ್ತ ಕಲಾ ಸಾಧನಾ ಮ್ಯೂಸಿಕ್ ಸ್ಕೂಲ್‌ನ ವಿಭಾ.ಎಸ್.ನಾಯಕ್ ಮತ್ತು ತಂಡದವರಿಂದ ಶ್ರೀರಾಮ ವೈಭವ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ನಗರದ ಖ್ಯಾತ ಲೆಕ್ಕಪರಿಶೋಧಕ ಮತ್ತು ರೇಡ್‌ಕ್ರಾಸ್‌ನ ಅಧ್ಯಕ್ಷರಾದ ಸಿ.ಎ.ಶಾಂತಾರಾಮ ಶೆಟ್ಟಿ ಉದ್ಘಾಟಿಸಿದರು.





ನಂತರ ಮಾತನಾಡಿದ ಅವರು ಶ್ರೀರಾಮ ಭಾರತದ ಅಸ್ಮಿತೆಯ ಪ್ರತೀಕಾ. ನಾವು ಶ್ರೀರಾಮನ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸುಂದರವಾಗುತ್ತದೆ. ಈ ಮೂಲಕ ಭಾರತವು ರಾಮ ರಾಜ್ಯವಾಗಲು ಸಾಧ್ಯ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ ಭಾರತ ಬಹಳ ವರ್ಷದಿಂದ ಕಾತುರದಿಂದ ಕಾಯುತ್ತಿದ್ದ ದಿನ ಇಂದು ಒದಗಿ ಬಂದಿದೆ. ನಾವು ಈ ದಿನವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಜಗತ್ತಿಗೆ ಶ್ರೀರಾಮನ ಬದುಕು ಆದರ್ಶವಾಗಿದೆ. ಭಾರತ ಮಾತ್ರವಲ್ಲದೆ ಜಗತ್ತಿನ ಅನೇಕ ದೇಶದ ಜನರು ಈ ದಿನವನ್ನು ಸ್ಮರಿಸುತ್ತಾರೆ.
1992 ರ ಅಯೋಧ್ಯೆಯ ಕರಸೇವೆಗೋಸ್ಕರ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮಿಜಿಗಳಿಗೆ ಅಯೋಧ್ಯೆಗೆ ತೆರಳಲು ಬಸ್ ವ್ಯವಸ್ಥೆಯನ್ನು ಕಲ್ಪಿಸಿರುವುದಕ್ಕೆ ಡಾ.ಕೆ.ಸಿ. ನಾೖಕ್‌ರನ್ನು ಅತಿಥಿಗಳು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಯುತರು 500 ವರ್ಷಗಳಿಂದ ರಾಮ ಮಂದಿರಕೋಸ್ಕರ ಕಾಯುತ್ತಿದ್ದ ಕೋಟಿಯಂತರ ಜನರ ಜೀವನವು ಪಾವನವಾಯಿತು. ನನಗೆ ಶ್ರೀರಾಮನ ಪ್ರಾಣ ಪ್ರತಿಷ್ಠೆಯನ್ನು ನೋಡುವ ಅವಕಾಶ ಲಭಿಸಿರುವುದು ನನ್ನ ಸೌಭಾಗ್ಯ. ನನ್ನನು ಸನ್ಮಾನಿಸಿರುವುದನ್ನು ರಾಮನ ಪ್ರಸಾದ ಯೆಂದು ಭಾವಿಸುತ್ತೇನೆ.
ಈ ವೇದಿಕೆಯಲ್ಲಿ ಸ್ಥಳೀಯ ಕಾರ್ಪೋರೇಟರಾದ ವನಿತಾ ಪ್ರಸಾದ್ ಮತ್ತು ಕಿಶೋರ್ ಕೊಟ್ಟಾರಿ, ಪ್ರಧಾನ ಸಲಹೆಗಾರ ರಮೇಶ್.ಕೆ, ಶಕ್ತಿ ಪಪೂ ಪ್ರಾಂಶುಪಾಲರಾದ ವೆಂಕಟೇಶ್ ಮೂರ್ತಿ ಉಪಸ್ಥಿತರಿದ್ದರು.
ಸುಮಾರು ಒಂದು ಗಂಟೆಗಳ ಕಾಲ ಶ್ರೀರಾಮ ವೈಭವದಲ್ಲಿ ಶ್ರೀರಾಮನ ಕುರಿತಂತೆ ಸಂಗೀತ ಕಾರ್ಯಕ್ರಮದಲ್ಲಿ ಧ್ವನಿಗೂಡಿಸಿದರು. ಸಂಗೀತ ಕಾರ್ಯಕ್ರಮದ ನಂತರ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ನೇರಪ್ರಸಾರ ನಡೆಯಿತು. ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಇಂದಾಜೆ ಸ್ವಾಗತಿಸಿದರು, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲರಾದ ರವಿಶಂಕರ ಹೆಗಡೆ ನಿರೂಪಿಸಿದರು.
ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಅದ್ದೂರಿ ಕಾರ್ಯಕ್ರಮ
ಇಂದು ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ಶ್ರೀಕೃಷ್ಣನ ದರ್ಶನ ಪಡೆದು ಭಜನೆಯಲ್ಲಿ ಪಾಲ್ಗೊಂಡರು. ನಂತರ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ನೇರಪ್ರಸಾರ ಕಾರ್ಯಕ್ರಮವು ನಡೆಯಿತು. ಶ್ರೀದೇವರ ಪ್ರಾಣ ಪ್ರತಿಷ್ಠೆಯ ನಂತರ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ವಿಶೇಷ ಕಾರ್ತಿಕ ಪೂಜೆ, ಸಹಸ್ರ ತುಳಸಿ ಅರ್ಚನೆ, ಸೀಯಾಳಭಿಷೇಕ, ಭಜನಾ ನಾಮ ಸಂಕೀರ್ತನೆ, ಮಹಾ ಪೂಜೆ ನಡೆಯಿತು. ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತಾ ಮೋಕ್ತೇಸರರಾದ ಡಾ.ಕೆ.ಸಿ.ನಾೖಕ್, ಟ್ರಸ್ಟಿ ಸಗುಣಾ ಸಿ. ನಾೖಕ್, ಮಾಜಿ ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಆಡಳಿತಾಧಿಕಾರಿ ಆದೀಶ್.ಕೆ ಉಪಸ್ಥಿತರಿದ್ದರು.