ಶಕ್ತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಮೌಲ್ಯ ಕರುಣಾಕರ ಶೆಟ್ಟಿ 588 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಹಾಗೂ ವಾಣಿಜ್ಯ ವಿಭಾಗದಲ್ಲಿ ಶ್ರೀವಿಷ್ಣು 589 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ
ಶಕ್ತಿನಗರದ ಶಕ್ತಿ ಪಪೂ ಕಾಲೇಜಿನ ದ್ವಿತೀಯ ಪ ಪೂ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದ ಪಿಸಿಎಂಬಿ ಮತ್ತು ಪಿಸಿಎಂಸಿ ವಿಭಾಗದಲ್ಲಿ ಒಟ್ಟು 95 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇವರಲ್ಲಿ 37 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಾಣಿಜ್ಯ ವಿಭಾಗದ ಇಬಿಎಸಿ ಮತ್ತು ಇಬಿಎಎಸ್ನಲ್ಲಿ ಒಟ್ಟು 31 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇವರಲ್ಲಿ 14 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. ಪ್ರಥಮ ಶ್ರೇಣಿಯಲ್ಲಿ 13 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.

ವಿಜ್ಞಾನ ವಿಭಾಗದ ಪಿಸಿಎಮ್ಬಿಯಲ್ಲಿ ಶೆಟ್ಟಿ ಮೌಲ್ಯ ಕರುಣಾಕರ್ 588, ಪಿ.ಸಿ.ಎಂ.ಸಿ ಲಿಖಿತ್ ಗೌಡ ಎಸ್ ಡಿ 587, ಪಿ.ಸಿ.ಎಂ.ಬಿ ಚಿಂತನ ಪಿ.ಆರ್ 585, ಪಿ.ಸಿ.ಎಂ.ಬಿ ಚೈತನ್ಯ ಪ್ರಕಾಶ್ ಸಿ ಎಂ 577, ಪಿ.ಸಿ.ಎಂ.ಸಿ ಭೂಮಿಕ ರಾವ್ 576, ಪಿ.ಸಿ.ಎಂ.ಸಿ ಪ್ರಣವ್ ರಾಜ್ ಆರ್ಯನ್ 575 ಅಂಕಗಳಿಸಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಇ.ಬಿ.ಎ.ಸಿಯಲ್ಲಿ ಶ್ರೀವಿಷ್ಣು ಎ ಎಸ್ 589, ಇ.ಬಿ.ಎ.ಎಸ್ ಯಶವಂತ್ ಎ ಎಸ್ 586, ಇ.ಬಿ.ಎ.ಸಿ ಧೃತಿ ಕೋಟ್ಯಾನ್ 581, ಇ.ಬಿ.ಎ.ಸಿ ಮುಕೇಶ್ 581, ಇ.ಬಿ.ಎ.ಸಿ ದೀಪ್ತ ಎಂ.ಎಂ 579, ಇ.ಬಿ.ಎ.ಸಿ ಸುಷ್ಮ ಕೆ 578, ಇ.ಬಿ.ಎ.ಎಸ್ ಕೃತಿಕ ಕುಲಕರ್ಣಿ 575 ಅಂಕಗಳಿಸಿರುತ್ತಾರೆ.
ಶಕ್ತಿ ಪಪೂ ಕಾಲೇಜು ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರಿರುವುದನ್ನು ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾೖಕ್ ಅಭಿನಂದಿಸಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾೖಕ್, ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ಪಪೂ ಕಾಲೇಜು ಪ್ರಭಾರ ಪ್ರಾಂಶುಪಾಲರಾದ ಶ್ರೀ ಮಂಜುನಾಥ ಚಾವಡಿ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ಬಬಿತಾ ಸೂರಜ್ ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದ್ದಾರೆ.