ಶಕ್ತಿನಗರದ ಶಕ್ತಿ ಗೋಪಾಲಕೃಷ್ಣ ದೇವಸ್ಥಾನಕ್ಕೆ ಇಂದು ಆಯೋದ್ಯಯ ಶ್ರೀ ರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವತಿಯಿಂದ ಜನವರಿ 22 ರಂದು ಲೋಕಾರ್ಪಣೆಗೊಳ್ಳಲಿರುವ ಶ್ರೀರಾಮನ ಭವ್ಯಮಂದಿರದ ಪವಿತ್ರ ಮಂತ್ರಾಕ್ಷತೆಯು ಪೂರ್ಣ ಕುಂಭದ ಸ್ವಾಗತದೊಂದಿಗೆ ತರಲಾಯಿತು.



ನಗರದ ವೆಂಕಟ್ರಮಣ ದೇವಸ್ಥಾನ, ಶರವು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಶಕ್ತಿನಗರ, ಬಿಕರ್ಣಕಟ್ಟೆ, ವಾಮಂಜೂರು, ಮೂಡುಶೆಡ್ಡೆ ಪ್ರದೇಶಗಳ ಮನೆಗಳಿಗೆ ವಿತರಿಸುವ ಮಂತ್ರಾಕ್ಷತೆಯನ್ನು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿರಿಸಿ ಅದಕ್ಕೆ ಪೂಜೆಯನ್ನು ಸಲ್ಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಕೆ. ಸಿ. ನಾೖಕ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅದ್ಯಕ್ಷರಾದ ಹೆಚ್. ಕೆ. ಪುರುಷೋತ್ತಮ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಕ್ತಿನಗರದ ಸಂಘಚಾಲಕರಾದ ಜಯರಾಮ, ಹಿಂದೂ ಜಾಗರಣ ವೇದಿಕೆ ಪ್ರಾಂತ ಪ್ರಮುಖರಾದ ಹರೀಶ, ಬಜರಂಗದಳದ ಜಿಲ್ಲಾ ಸೇವಾ ಪ್ರಮುಖ ದೀಪಕ್ ಮರೋಳಿ, ಶಕ್ತಿ ಎಜ್ಯುಕೇಶನ್ ಟ್ರಸ್ಟ್ ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ಪಪೂ ಪ್ರಾಂಶುಪಾಲರಾದ ವೆಂಕಟೇಶ್‌ಮೂರ್ತಿ ಹೆಚ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲ ರವಿಶಂಕರ್ ಹೆಗಡೆ, ಸ್ಥಳೀಯ ಕಾರ್ಪೋರೇಟರ್ ಕಿಶೋರ ಕೊಟ್ಟಾರಿ, ವನಿತಾ ಪ್ರಸಾದ್, ಶ್ರೀ ಗೋಪಾಲಕೃಷ್ಣಹಿಂದೂ ಜಾಗರಣ ವೇದಿಕೆ ಸಂತೋಷ, ಆಡಳಿತಾಧಿಕಾರಿ ಆದೀಶ ಕೆ., ಮಂತ್ರಾಕ್ಷತೆ ಪ್ರಮುಖರಾದ ಶಿವರಾಜ ಉಪಸ್ಥಿತರಿದ್ದರು.