Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಬಲಿದಾನ ದಿವಸ್ ಟ್ರೋಪಿ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

ಮಂಗಳೂರಿನಲ್ಲಿ ಎಬಿವಿಪಿಯಿಂದ ಆಯೋಜಿಸಿದ ಬಲಿದಾನ ದಿವಸ್ ಟ್ರೋಪಿ ಕಬಡ್ಡಿ ಪಂದ್ಯಾಟದಲ್ಲಿ ಶಕ್ತಿ ಪ.ಪೂ. ಕಾಲೇಜು ಪ್ರಥಮ ಸ್ಥಾನದಲ್ಲಿ ಜಯ

ಮಂಗಳೂರು ಮಾ. 26 : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗವು ಮಂಗಳೂರಿನ ಮಿನಿ ಟೌನ್ ಹಾಲ್‌ನ ಒಳಾಂಗಣದಲ್ಲಿ ಆಯೋಜಿಸಿದ ಬಲಿದಾನದಿವಸ್ ಟ್ರೋಪಿ-2023ರ ಅಂತರ ಕಾಲೇಜು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಅಂತಿಮ ಸುತ್ತಿನಲ್ಲಿ ಪ್ರತಿಷ್ಠಿತ ಕೆಪಿಟಿ ಕಾಲೇಜು ಕಬಡ್ಡಿ ತಂಡದ ಎದುರುಗಡೆ ಶಕ್ತಿ ಪ. ಪೂ. ಕಾಲೇಜಿನ ಕಬಡ್ಡಿ ತಂಡವು ವಿಜಯಿಯಾಗುವುದರ ಮೂಲಕ ಪ್ರಥಮ ಸ್ಥಾನವನ್ನು ಪಡೆದಿರುತ್ತದೆ. ಈ ಸಂದರ್ಭದಲ್ಲಿ ಪ್ರಥಮ ಬಹುಮಾನವಾಗಿ ರೂ.7777/- ನಗದು ಹಾಗೂ ಟ್ರೋಪಿ ನೀಡಿ ತಂಡವನ್ನು ಪುರಸ್ಕರಿಸಲಾಯಿತು. ಶಕ್ತಿ ಪ. ಪೂ. ಕಾಲೇಜಿನ ಕಬಡ್ಡಿ ತಂಡದ ನಾಯಕರಾಗಿ ಹಾಗೂ ಉತ್ತಮ ದಾಳಿಗಾರನಾಗಿ ಶಿವರಾಜ್ ಮತ್ತು ಸಾರ್ವಂಗೀಣ ಆಟಗಾರನಾಗಿ ಜಾಬಿರ್ ಆಯ್ಕೆಯಾಗಿರುತ್ತಾರೆ. ಈ ಕಬಡ್ಡಿ ತಂಡಕ್ಕೆ ನಿರ್ದೇಶಕರಾಗಿ ಸಂಸ್ಥೆಯ ದೈಹಿಕ ನಿರ್ದೇಶಕರಾದ ಮನೋಹರ ಎಮ್.ಎಸ್ ಮಾರ್ಗದರ್ಶನ ನೀಡಿರುತ್ತಾರೆ.

ಸಂಸ್ಥೆಯ ಪರವಾಗಿ ಆಡಳಿತಾಧಿಕಾರಿ ಡಾ.ಕೆ. ಸಿ. ನಾೖಕ್‌, ಪ್ರಧಾನ ಸಲಹೆಗಾರ ರಮೇಶ್.ಕೆ, ಶಕ್ತಿ ಪಪೂ ಕಾಲೇಜು ಪ್ರಾಂಶುಪಾಲರಾದ ಪ್ರಥ್ವಿರಾಜ್ ಹಾಗೂ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ ಅಭಿನಂದಿಸಿರುತ್ತಾರೆ.