Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಗ್ರಾಮ ವಿಕಾಸದಿಂದ ರಾಷ್ಟ್ರ ವಿಕಾಸವಾಗುತ್ತದೆ : ಡಾ. ವಸಂತಕುಮಾರ್ ಪೆರ್ಲ

ಮಂಗಳೂರು : ಶಕ್ತಿನಗರದ ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಇಂದು ಗಾಂಧಿ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿಜೀಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆಕಾಶವಾಣಿಯ ನಿವೃತ್ತ ನಿರ್ದೇಶಕರಾದ ಡಾ. ವಸಂತಕುಮಾರ್ ಪೆರ್ಲ ನಮನ ಸಲ್ಲಿಸಿದರು.

ನಂತರ ಮಾತನಾಡಿದ ಡಾ. ವಸಂತ ಕುಮಾರ್ ಪೆರ್ಲ ಅವರು, ಗಾಂಧೀಜಿಯ ಕಲ್ಪನೆ ಗ್ರಾಮ ವಿಕಾಸವಾಗಿತ್ತು ಯಾವ ಗ್ರಾಮ ವಿಕಾಸವಾಗುತ್ತದೆಯೋ ಅಲ್ಲಿಂದ ರಾಷ್ಟ್ರ ವಿಕಾಸವಾಗುತ್ತದೆ. ಆದರೆ ಇಂದು ಗ್ರಾಮ ವಿಕಾಸವಾಗದೆ ನಗರ ವಿಕಾಸವಾಗಿರುವುದರಿಂದ ಗ್ರಾಮೀಣ ಯುವಕರು ನಗರವನ್ನು ಅವಲಂಬಿತರಾಗಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿರುವ ಹಿರಿಯರು ಯುವಕರಿಗೆ ಮಾರ್ಗದರ್ಶನ ಮಾಡದ ಸ್ಥಿತಿ ನಿರ್ಮಾಣವಾಗಿದೆ. ಹಿರಿಯರು ವೃದ್ಧಾಶ್ರಮ ಸೇರುತ್ತಿದ್ದಾರೆ. ಈ ತರದ ಅಸಮತೋಲನ ಅಂತ್ಯವಾಗಬೇಕಾದರೆ ಗಾಂಧೀಜಿಯ ಕಲ್ಪನೆಯ ಗ್ರಾಮ ಸ್ವರಾಜ್ಯದ ನಿರ್ಮಾಣವಾಗಬೇಕು. ಎಲ್ಲಾ ಗ್ರಾ,ಮಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶಾಲೆ ಹಾಗೂ ಆಸ್ಪತ್ರೆಗಳ ನಿರ್ಮಾಣವಾಗಬೇಕು. ಸ್ವಚ್ಛ ಗ್ರಾಮದ ಕಲ್ಪನೆಯ ಭಾವನೆ ಬರಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರಭಾಕರ ಜಿ.ಎಸ್  ರೈತರು, ಬಡತನ ರೇಖೆಗಿಂತ ಕೆಳಗಿನವರ ಉನ್ನತಿಯೇ ಗಾಂಧೀಜಿಯ ಕಲ್ಪನೆ. ಶಿಕ್ಷಣಕ್ಕೆ ಮಹತ್ವ ನೀಡಿ ದೇಶದ ಬದಲಾವಣೆ ಮಾಡಿದಾಗ ಮಾತ್ರ ಗಾಂಧೀಜಿಯ ಕನಸು ನನಸು ಆಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ ನಾಯ್ಕ್, ಪ್ರಧಾನ ಸಲಹೆಗಾರ ರಮೇಶ್ ಕೆ., ಅಭಿವೃದ್ಧಿ ಅಧಿಕಾರಿ ನಸೀಮ್ ಬಾನು ಮತ್ತು ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಸಂಚಾಲಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ನಿರೂಪಣೆಯನ್ನು ಶಿಕ್ಷಕಿ ಪೂರ್ಣಿಮ ಮತ್ತು ವಂದನಾರ್ಪಣೆಯನ್ನು ಕಾಲೇಜಿನ ಉಪನ್ಯಾಸಕಿ ಶಿಲ್ಪಾ ನೆರೆವೇರಿಸಿದರು.