Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಗೀತಾಜಯಂತಿ ಕಾರ್ಯಕ್ರಮ

ಡಿ. 1 ರಂದು ಮಂಗಳೂರಿನ ಶಕ್ತಿ ವಿದ್ಯಾಸಂಸ್ಥೆಯಲ್ಲಿ ಗೀತಾಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ಈ ಕಾರ್ಯಕ್ರಮಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆನರಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರೂ ಹಿರಿಯ ಸಂಸ್ಕೃತ ವಿದ್ವಾಂಸರಾದ ಡಾ. ಜಿ. ಎನ್ ಭಟ್ಟ ಮಾತನಾಡಿ ಭಗವದ್ಗೀತೆ ಮಾನಸಿಕ ಆರೋಗ್ಯ ಹಾಗೂ ಏಕಾಗ್ರತೆಗೆ ಸಹಕಾರಿ. ಭಗವದ್ಗೀತೆ ಎಲ್ಲವನ್ನೂ ಹೇಳಿದೆ. ಯುದ್ಧದಿಂದ ವಿಮುಖನಾದ ಅರ್ಜುನನಿಗೆ ರಣರಂಗದಲ್ಲಿ ಕೃಷ್ಣ ಉಪದೇಶಿಸಿದ ಭಗವದ್ಗೀತೆ ನಮ್ಮ ಜೀವನದ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ. ಓಂಕಾರ ಧ್ಯಾನದಿಂದ ಅನೇಕ ರೋಗಗಳು ನಿವಾರಣೆ ಆಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಕ್ತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀ ಸಂಜಿತ್ ನಾೖಕ್‌, ಪ್ರಧಾನ ಸಲಹೇಗಾರ ರಮೇಶ್ ಕೆ, ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಪೃಥ್ವಿರಾಜ ಹಾಗೂ ಶಕ್ತಿ ವಸತಿಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್.ಜಿ ಉಪಸ್ಥಿತರಿದ್ದರು. ಪದವಿಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ರವಿಶಂಕರ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.