ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಶಕ್ತಿನಗರ, ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪಪೂ ಕಾಲೇಜು ವತಿಯಿಂದ ಜಿಲ್ಲಾ ಮಟ್ಟದ ಕೃಷ್ಟಮಯ – 2022 ಕೃಷ್ಣ ವೇಷ ಸ್ಪರ್ಧೆಯನ್ನು ದಿನಾಂಕ 16-08-2022 ರ ಮಂಗಳವಾರ ಪೂರ್ವಾಹ್ನ 9.30 ಕ್ಕೆ ಶಕ್ತಿ ವಸತಿ ಶಾಲೆ ಶಕ್ತಿನಗರದಲ್ಲಿ ಆಯೋಜಿಸಲಾಗಿದೆ.

ಸ್ಪರ್ಧೆಗಳ ವಿವರ
ವಿಭಾಗ 1 ರಲ್ಲಿ 3 ವರ್ಷ ತನಕದ ಮಕ್ಕಳಿಗೆ ಮುದ್ದುಕೃಷ್ಣ, 4 ರಿಂದ 5 ವರ್ಷ ತನಕದ ಮಕ್ಕಳಿಗೆ ಬೆಣ್ಣೆ ಕೃಷ್ಣ, 1 ರಿಂದ 4 ನೇ ತರಗತಿಯ ಮಕ್ಕಳಿಗೆ ಯಶೋದ ಕೃಷ್ಣ, 5 ರಿಂದ 7 ನೇ ತರಗತಿಯ ಮಕ್ಕಳಿಗೆ ದಾಸರ ಕೀರ್ತನೆಗಳು, 8 ರಿಂದ 10 ನೇ ತರಗತಿಯ ಮಕ್ಕಳಿಗೆ ಗೋಪಿಕಾ ಕೃಷ್ಣ. ಗೀತಾ ಕಂಠಪಾಠ ಸ್ಪರ್ಧೆಯಲ್ಲಿ, 1-5 ನೇ ತರಗತಿಯ ಮಕ್ಕಳಿಗೆ ಧ್ಯಾನ ಶ್ಲೋಕ, 6 ರಿಂದ 7 ನೇ ತರಗತಿಯ ಮಕ್ಕಳಿಗೆ ಅಧ್ಯಾಯ – 12 (1-10 ನೇ ಶ್ಲೋಕ) 8 ರಿಂದ 10 ನೇ ತರಗತಿಯ ಮಕ್ಕಳಿಗೆ ಅಧ್ಯಾಯ – 15, 1-10 ನೇ ಶ್ಲೋಕ. ಚಿತ್ರಕಲಾ ಸ್ಪರ್ಧೆ 8 ರಿಂದ 10 ಶ್ರೀ ಕೃಷ್ಣನ ಲೀಲೆಗಳು. ಕುಣಿತ ಭಜನೆ, 6 ರಿಂದ 10 ತರಗತಿ ಶ್ರೀ ಕೃಷ್ಣನ ಭಜನೆಗಳು 10 ಜನರ ತಂಡಕ್ಕೆ 4 ನಿಮಿಷ ಅವಕಾಶ ನೀಡಲಾಗಿದೆ.
ಒಂದು ಶಾಲೆಯಿಂದ ಎಷ್ಟು ತಂಡಗಳಿಗೂ ಭಾಗವಹಿಸುವ ಅವಕಾಶವಿದೆ. ವೆಬ್‌ಸೈಟ್ ನೋಂದಣಿಗೆ ಹಾಗೂ ಹೆಚ್ಚಿನ ಮಾಹಿತಿಗೋಸ್ಕರ Shakthi.edu.in ಮತ್ತು ದೂರವಾಣಿ ಸಂಖ್ಯೆ 0824-2231452/9980437225 ಕ್ಕೆ ಸಂಪರ್ಕಿಸಲು ಕೋರಲಾಗಿದೆ.