Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಸ್ವದೇಶಿ ಜಾಗರಣ ಸೈಕ್ಲಿಂಗ್ ಅಭಿಯಾನ

ಭಾರತೀಯ ಮಾಜಿ ಸೇನಾಧಿಕಾರಿಗಳಿಂದ ಹಮ್ಮಿಕೊಂಡಿದ್ದ ಸ್ವದೇಶಿ ಜಾಗರಣ ಸೈಕ್ಲಿಂಗ್ ಅಭಿಯಾನ ಪ್ರಾರಂಭಗೊಂಡಿದ್ದು ಅವರಿಗೆ ಮಂಗಳೂರಿನ ಪ್ರತಿಷ್ಠಿತ ಶಕ್ತಿ ಶಿಕ್ಷಣ ವಿದ್ಯಾಸಂಸ್ಥೆಯಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.

ಶಾಲೆಯ ಆವರಣದಲ್ಲಿ ಅಭಿಯಾನದಲ್ಲಿ ಪಾಲ್ಗೊಂಡ ಹಿರಿಯರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಸ್ವದೇಶಿ ಬಳಸಿ ದೇಶ ಬೆಳೆಸಿ ಎಂಬ ಘೋಷವಾಕ್ಯದ ಉದ್ದೇಶವನ್ನು ತಿಳಿಸುತ್ತಾ ಇದು ’ಭಾರತದ ಉದಯಕ್ಕಾಗಿ ಸವಾರಿ’ ನಾವೆಲ್ಲರೂ ಸ್ವದೇಶಿ ವಸ್ತುಗಳ ಬಳಕೆ ಮಾಡುವುದರೊಂದಿಗೆ ದೇಶದ ಅಭಿವೃದ್ಧಿಗೆ ಸಹಕರಿಸಬೇಕು, ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯದ ಹಾಗೂ ಮುಂದಿನ ಪೀಳಿಗೆಗಾಗಿ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಸಕ್ರಿಯ ಪಾತ್ರ ವಹಿಸಬೇಕೆಂಬ ಸಂದೇಶವನ್ನು ಬ್ರಿಗೇಡಿಯರ್ ಶ್ರೀ ರವಿ ಮುನಿಸ್ವಾಮಿ ಅವರು ತಿಳಿಸಿದರು.

ವಿದ್ಯಾರ್ಥಿಗಳ ಪ್ರಶ್ನೆಯಾದ ಸೈಕ್ಲಿಂಗ್ ಅಭಿಯಾನ ಯಾಕೆ ಎಂಬುದಕ್ಕೆ ಉತ್ತರಿಸುತ್ತ ಭಾರತೀಯರಾದ ನಾವು ಸ್ವಾವಲಂಬನೆ ಜೀವನ ನಡೆಸಬೇಕು, ಇದರಿಂದ ದೇಶದ ಆರ್ಥಿಕ ಸ್ಥಿತಿ ಹಾಗೂ ದೇಶದ ಅಭಿವೃದ್ಧಿಯಾಗುತ್ತದೆ ಎಂದರು, ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಶಕ್ತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಡಾ.ಕೆ.ಸಿ. ನಾೖಕ್‌ ಅವರು, ಶಕ್ತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಶ್ರೀ.ವೆಂಕಟೇಶ್ ಮೂರ್ತಿ, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಬಬಿತಾ ಸೂರಜ್, ಮಂಗಳೂರು ಕ್ರೀಡಾ ಭಾರತೀಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಕರಿಯಪ್ಪ ರೈ, ಪ್ರಾಂತ್ಯ ಉಪಾಧ್ಯಕ್ಷರಾದ ಶ್ರೀ ಬೊಜಣ್ಣ, ಜಿಲ್ಲಾಧ್ಯಕ್ಷರಾದ ಶ್ರೀ ಎ.ಪಿ.ಪ್ರಭು, ಜಿಲ್ಲಾ ಕಾರ್ಯಕಾರಿಣಿ ಶ್ರೀಮತಿ ಆಶಾ ಶಿವಾನಂದ ಮತ್ತಿತರ ಗಣ್ಯರು ಹಾಗೂ ಶಕ್ತಿ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.