Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಶಕ್ತಿ ಕ್ಯಾನ್ ಕ್ರಿಯೇಟ್ – 2019 ಬೇಸಿಗೆ ಶಿಬಿರದಲ್ಲಿ ಯೋಗ

ಮಂಗಳೂರು : ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ನಡೆಯುತ್ತಿರುವ ಶಕ್ತಿ ಕ್ಯಾನ್ ಕ್ರಿಯೇಟ್ – 2019 ರ ಬೇಸಿಗೆ ಶಿಬರದಲ್ಲಿ ಯೋಗ ರತ್ನ ಗೋಪಾಲಕೃಷ್ಣ ದೇಲಂಪಾಡಿಯವರಿಂದ ಯೋಗ ನಡೆಯಿತು.

ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ಯೋಗಾಸನ ನಡೆಯುತ್ತದೆ. ಯೋಗಾಸನದಲ್ಲಿ ವಿದ್ಯಾರ್ಥಿಗಳು ನೆನಪಿನ ಶಕ್ತಿಯನ್ನು ಹೆಚ್ಚಿಸುವ ಚಿನ್ ಮುದ್ರ, ಪ್ರಾಣ ಮುದ್ರ, ಜ್ಞಾನ ಮುದ್ರ, ಬುದ್ಧಿ ಮುದ್ರ ಸೇರಿದಂತೆ ಅನೇಕ ತರಹದ ಮುದ್ರೆಯನ್ನು ಅಭ್ಯಾಸ ಮಾಡುತ್ತಾರೆ. ಯೋಗವು ಸಣ್ಣ ಪ್ರಾಯದಲ್ಲಿ ಶಿಸ್ತನ್ನು ಕಲಿಸಿ ಕೊಡುತ್ತದೆ ಎಂದು ಗೋಪಾಲಕೃಷ್ಣ ದೇಲಂಪಾಡಿ ಹೇಳಿದರು. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಇದನ್ನು ರೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಪೋಷಕರು ಯೋಗದ ಕಡೆ ವಿದ್ಯಾರ್ಥಿಗಳನ್ನು ಆಕರ್ಷಿಸಿಸುವ ವಿಧಾನವನ್ನು ತಿಳಿಸಿಕೊಡಬೇಕೆಂದರು. ಈ ನಿಟ್ಟಿನಲ್ಲಿ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಶಿಬಿರದಲ್ಲಿ ಯೋಗವನ್ನು ಜೋಡಿಸಿರುವುದು ತುಂಬಾ ಸಂತೋಷವನ್ನು ಕೊಡುತ್ತದೆ. ಯೋಗವು ಆರೋಗ್ಯವನ್ನು ವೃದ್ಧಿಸುತ್ತದೆ ಎಂದು ಹೇಳಿದರು.

ಈ ಶಿಬಿರದಲ್ಲಿ ಒಟ್ಟು 130 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಶಿಬಿರದಲ್ಲಿ ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ಶಕ್ತಿ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ವಿದ್ಯಾ ಜಿ. ಕಾಮತ್ ಶಿಬಿರಾಧಿಕಾರಿಗಳಾದ ಪೂರ್ಣಿಮ, ಪೂರ್ಣೇ, ಪ್ರಿಯಾಂಕ ರೈ ಉಪಸ್ಥಿತರಿದ್ದರು.