Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಶಕ್ತಿ ವಿದ್ಯಾರ್ಥಿಗಳು SGFI ರಾಷ್ಟ್ರೀಯ ಕ್ರೀಡಾ ಕೂಟಕ್ಕೆ ಅಯ್ಕೆ

ಶಕ್ತಿ ಪದವಿ ಪೂರ್ವ ಕಾಲೇಜಿನ ಲಿಖಿತ್ ಎಸ್ ಸುವರ್ಣ, ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಹಾಗೂ ಶಕ್ತಿ ವಸತಿ ಶಾಲೆಯ ಅಮೋಘ ವರ್ಷ 10ನೇ ತರಗತಿ ವಿದ್ಯಾರ್ಥಿ ಇವರು ಮಧ್ಯಪ್ರದೇಶದ ದಿವಾಸ್‌ನಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿ ಚಿನ್ನದ ಪದಕಗಳನ್ನು ಪಡೆದು ಡಿಸೆಂಬರ್‌ನಲ್ಲಿ ನಡೆಯಲಿರುವ SGFI ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್‌ಗೆ ಅಯ್ಕೆಯಾಗಿರುತ್ತಾರೆ ಹಾಗೂ ಶಕ್ತಿ ವಸತಿ ಶಾಲೆಯ ವಿವನ್ ಸಾಗರ್ ಶೆಟ್ಟಿ ಇವರು ಬೆಳ್ಳಿ ಪದಕ ಜಯಿಸಿಕೊಂಡಿರುತ್ತಾರೆ.

ಈ ಸಂದರ್ಭದಲ್ಲಿ ವಿಜೇತರನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೖಕ್‌, ಕಾರ್ಯದರ್ಶಿ ಶ್ರೀ ಸಂಜಿತ್ ನಾೖಕ್‌. ಪ್ರಧಾನ ಸಲಹೆಗಾರರಾದ ಶ್ರೀ ರಮೇಶ್ ಕೆ. ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಮತ್ತು ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆಯಾದ ಬಬಿತಾ ಸೂರಜ್ ಅಭಿನಂದಿಸಿದ್ದಾರೆ.