ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಪ್ರೀ ಕೆ.ಜಿ ಯಿಂದ ಯು.ಕೆ.ಜಿ ತನಕದ ಎಲ್ಲಾ ವಿದ್ಯಾರ್ಥಿಗಳ ಪೋಷಕರು ಅವರ ಮನೆಯಲ್ಲಿ ತಯಾರಿಸಿದ ಊಟವನ್ನು ಶಾಲೆಗೆ ತಂದು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಊಟ ಬಡಿಸುವುದರ ಜೊತೆ ಅವರು ಕೂಡ ಊಟ ಮಾಡುವುದರ ಮೂಲಕ ಸಹ ಭೋಜನಾ ಕಾರ್ಯಕ್ರಮವನ್ನು ಆಯೋಜಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ. ಮಾತನಾಡಿ ಶಕ್ತಿ ವಿದ್ಯಾ ಸಂಸ್ಥೆಯು ಭಾರತೀಯ ಕುಟುಂಬ ಪದ್ಧತಿಯಲ್ಲಿದ್ದ ಭೋಜನಾ ವ್ಯವಸ್ಥೆಯನ್ನು ನೆನಪು ಮಾಡುವ ಕೆಲಸವನ್ನು ಮಾಡುತ್ತಿದೆ. ನಾವೆಲ್ಲರೂ ಅನೇಕ ವರ್ಷಗಳ ಹಿಂದೆ ಒಟ್ಟಾಗಿ ಕುಳಿತುಕೊಂಡು ಊಟವನ್ನು ಮಾಡುವ ಪದ್ಧತಿಯನ್ನು ರೂಢಿಸಿಕೊಂಡಿದ್ದೆವು. ಕೂಡು ಕುಟುಂಬದಲ್ಲಿ 40 ರಿಂದ 50 ಜನ ಒಟ್ಟಾಗಿ ಕುಳಿತುಕೊಂಡು ಊಟ ಮಾಡುತ್ತಿದ್ದರು. ಆದರೆ ಇಂದು ನಾವು ಮಕ್ಕಳಿಗೆ ಟಿವಿ ಮುಂದೆ ಕುಳಿತುಕೊಳ್ಳಿಸಿ ಇತರೆ ವಸ್ತುಗಳನ್ನು ಕೈಗೆ ಕೊಟ್ಟು ಊಟ ಮಾಡುವ ಪದ್ಧತಿಯನ್ನು ರೂಢಿಸಿಕೊಂಡಿರುತ್ತೇವೆ. ಇದು ಒಳ್ಳೆಯ ಪದ್ಧತಿ ಅಲ್ಲ. ನಾವು ಊಟ ಮಾಡುವ ಸಮಯದಲ್ಲಿಯು ಬದಲಾವಣೆಯನ್ನು ಮಾಡಿರುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಟಿ.ವಿಯಲ್ಲಿ ಬರುವ ಅನೇಕ ಮನೋರಂಜನೆ ಕಾರ್ಯಕ್ರಮಕ್ಕೋಸ್ಕರ ಊಟದ ಸಮಯವನ್ನು ವ್ಯತ್ಯಾಸ ಮಾಡಿಕೊಂಡಿರುವುದರಿಂದ ನಮ್ಮ ಮಕ್ಕಳ ಜೊತೆ ಕುಳಿತುಕೊಂಡು ಊಟ ಮಾಡದ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಈ ಕಾರ್ಯಕ್ರಮದ ಮೂಲಕ ನಾವುಗಳು ಮನೆಯಲ್ಲಿ ಒಟ್ಟಾಗಿ ಮುಂದಿನ ದಿನಗಳಲ್ಲಿ ಊಟವನ್ನು ಮಾಡುವುದರ ಮೂಲಕ ಬದಲಾವಣೆಯನ್ನು ತರೋಣ ಎಂದು ಈ ಸಹಭೋಜನ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.
ಕಾರ್ಯಕ್ರಮದಲ್ಲಿ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಮಾತನಾಡಿ ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಂಯೋಜಕಿ ಮತ್ತು ಶಿಕ್ಷಕ ವೃಂದದ ಶ್ರಮವನ್ನು ಶ್ರಮಿಸಿದರು. ಈ ಸಂದರ್ಭದಲ್ಲಿ ಭಾಗವಹಿಸಿದ ಪೋಷಕರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿಶೇಷ ಅಭಿನಂದನೆಯನ್ನು ಸಲ್ಲಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶಕ್ತಿ ಪಪೂ ಕಾಲೇಜು ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಹೆಚ್, ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಂಯೋಜಕಿ ಸುಷ್ಮಾ ಸತೀಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಸುಮಾರು 100 ಪೋಷಕರಿಂದ ಸಹಭೋಜನವನ್ನು ಏರ್ಪಡಿಸಲಾಗಿತ್ತು. ಈ ಸಹಭೋಜನವು ಅನೇಕ ಪೋಷಕರಿಗೆ ಪ್ರೇರಣಮಯಿ ಕಾರ್ಯಕ್ರಮವಾಯಿತು.