Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಪತ್ರಿಕಾಗೋಷ್ಠಿ : ಶಕ್ತಿ ಕೋಚಿಂಗ್ ಅಕಾಡೆಮಿ

ಮಂಗಳೂರು: ನಗರದ ಬಿಕರ್ನಕಟ್ಟೆಯ ಕ್ಲಾಸಿಕ್ ಪ್ರೈಡ್ ಕಟ್ಟಡದಲ್ಲಿ ಶಕ್ತಿ ಕೋಚಿಂಗ್ ಅಕಾಡೆಮಿಯ ಉದ್ಘಾಟನೆಯು ದಿನಾಂಕ 11-2-2019 ರಂದು ಪೂರ್ವಾಹ್ನ 10 ಗಂಟೆಗೆ ನಡೆಯಲಿದೆ. ಮಂಗಳೂರಿನ ಶಾರದಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಎಂ.ಬಿ ಪುರಾಣಿಕ್ ಅಕಾಡೆಮಿಯನ್ನು ಉದ್ಘಾಟಿಸಲಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕ ಶ್ರೀ ಕೆ.ಸಿ. ನಾೖಕ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸಮಾರಂಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀ ಭಾಸ್ಕರ್ ಕೆ. ಮನಪಾ ಸದಸ್ಯೆ ಶ್ರೀಮತಿ ಸಬಿತಾ ಮಿಸ್ಕಿತ್ ಹಾಗೂ ದ.ಕ ಪಿ.ಯು ಕಾಲೇಜು ಪ್ರಾಚಾರ್ಯರ ಸಂಘದ ಅಧ್ಯಕ್ಷ ಶ್ರೀ ಕೆ.ಕೆ ಉಪಾಧ್ಯಾಯ ಉಪಸ್ಥಿತರಿರುವರೆಂದು ಅವರು ತಿಳಿಸಿದರು.

ಶಕ್ತಿ ಕೋಚಿಂಗ್ ಅಕಾಡೆಮಿಯು ಅನುಭವಿ ಶಿಕ್ಷಕರನ್ನು ಹೊಂದಿದ್ದು ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ (ರಾಜ್ಯ ಹಾಗೂ ಕೇಂದ್ರ ಪಠ್ಯಕ್ರಮ) ವಿದ್ಯಾರ್ಥಿಗಳಿಗೆ ರಜಾ ಕಾಲದಲ್ಲಿ ವಿಶೇಷ ಕೋಚಿಂಗ್ ಹಾಗೂ ನಿರಂತರ ಕೋಚಿಂಗ್ ತರಗತಿಗಳನ್ನು ನಡೆಸಲಾಗುವುದು ಮಾತ್ರವಲ್ಲ ಸಿ.ಇ.ಟಿ ಮತ್ತು ನೀಟ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ವಿಶೇಷ ಗಮನ ನೀಡಿ ಪಾಠ ಮಾಡಲಾಗುವುದು ಎಂದವರು ತಿಳಿಸಿದರು. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣವನ್ನೇ ಗುರಿಯಾಗಿಟ್ಟುಕೊಂಡು ವೈಯಕ್ತಿಕ ಗಮನ ನೀಡಿ ಬೋಧನೆ ನಡೆಸುವುದೇ ತಮ್ಮ ಆಶಯ ಎಂಬುದಾಗಿ ಶ್ರೀ ನಾೖಕ್‌ ತಿಳಿಸಿದರು.

ಈ ತರಗತಿಗಳು ಬಿಕರ್ನಕಟ್ಟೆಯ ಕ್ಲಾಸಿಕ್ ಪ್ರೈಡ್ ಕಟ್ಟಡದಲ್ಲಿರುವ ಶಕ್ತಿ ಕೋಚಿಂಗ್ ಅಕಾಡೆಮಿಯಲ್ಲಿ ಇನ್ನು ಮುಂದಕ್ಕೆ ನಿರಂತರವಾಗಿ ನಡೆಯಲಿವೆ. ಮುಂದೆ ಕೆಎಎಸ್, ಐ.ಎ.ಎಸ್, ಐ.ಪಿ.ಎಸ್, ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ನಮ್ಮ ಉದ್ದೇಶ. ಕಡಿಮೆ ಪೀಸಿನಲ್ಲಿ ಅತ್ಯುತ್ತಮ ಬೋಧನೆ ಶಕ್ತಿ ಕೋಚಿಂಗ್ ಅಕಾಡೆಮಿ ವೈಶಿಷ್ಯ ಎಂದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.