Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

Mass Surya Namaskara at Shakthi

Shakthi Education Trust in collaboration with the Kreeda Bharathi, Mangaluru organised a mass Surya namaskara for all the students and the staff today.

Lord Surya is considered as the giver of Health and Wealth. So worshipping Him in the early morning when the sun rays are fresh will rejuvenate one’s energy, and purify the mind and body. Moreover, even scientifically it is proven that there are many benefits of getting exposed to the early morning sun said Sri Gajanana Pai, Resource person on the auspicious occasion of RathaSapthami.

Rathasapthami is a symbol of the change of season to spring and the start of the harvesting season. It is said that this day marks the birth of Surya hence known as Surya Jayanthi or MaghaSapthami. Under the able guidance of the Yoga Instructor Sri Yogish and Smt.Lekhana chanting the Surya Mantra, all students and staff performed 21 Surya namaskara each.

The President Sri KariappaRai, Secretary Krishna Shetty Taremar, Co-ordinator Bhoja Raj Kalladka, Mahila Pramukh Hema Prabha Laila were present on this occasion. Dr.K.C.Naik, Administrator, Ramesh K, Chief Advisor, Prakyath Rai-Institute Development Officer, Sudheer M.K. Principal in-charge of Shakthi PU College, Vidya Kamath G, Principal Shakthi Residential School and Neema Saxena, Co-ordinator Shakthi Pre-School all teaching and non-teaching staff along with the students of Shakthi group of institutions took the benefit of this concept.

Sevanthi, ex Mahila Pramukh and Sharanappa, Kannada teacher compered the event.

ಕ್ರೀಡಾ ಭಾರತೀಯ ಸಹಯೋಗದೊಂದಿಗೆ ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ರಥಸಪ್ತಮಿ ನಿಮಿತ್ತ ಸಾಮೂಹಿಕ ಸೂರ್ಯ ನಮಸ್ಕಾರ

ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆ, ಶಕ್ತಿ ಪಪೂ ಕಾಲೇಜು ಮತ್ತು ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯು ಕ್ರೀಡಾ ಭಾರತಿ ಮಂಗಳೂರು ವಿಭಾಗದ ಸಹಯೋಗದೊಂದಿಗೆ ರಥಸಪ್ತಮಿ ನಿಮಿತ್ತ ಸಾಮೂಹಿಕ ಸೂರ್ಯನಮಸ್ಕಾರ ಯಜ್ಞ ಕಾರ್ಯಕ್ರಮವನ್ನು ಸಂಸ್ಥಾಪಕರು ಹಾಗೂ ಆಡಳಿತಾಧಿಕಾರಿಯಾದ ಡಾ. ಕೆ. ಸಿ. ನಾೖಕ್ ಉದ್ಘಾಟಿಸಿ ಮಾತನಾಡಿ ಸೂರ್ಯ ನಮಸ್ಕಾರವು ನಮ್ಮ ದೈನಂದಿನ ಚಟುವಟಿಕೆಗೆ ಪೂರಕವಾದ ಯೋಗ ಎಂದು ಅಭಿಪ್ರಾಯ ಪಟ್ಟರು. ನಾವೆಲ್ಲರೂ ಶಿಸ್ತು ಬದ್ಧವಾದ ಜೀವನ ನಡೆಸಲು ಇದು ಸಹಕಾರಿಯಾಗುತ್ತದೆ ಎಂದು ಹೇಳಿದರು.

ರಥಸಪ್ತಮಿ ಸೂರ್ಯ ನಮಸ್ಕಾರದ ಕುರಿತಂತೆ ಕುಟುಂಬ ಪ್ರಭೋದನ್ ಮಂಗಳೂರು ವಿಭಾಗ ಪ್ರಮುಖರಾದ ಶ್ರೀ ಗಜಾನನ ಪೈ ಮುಖ್ಯ ವಕ್ತಾರರಾಗಿ ಆಗಮಿಸಿ ಮಾತನಾಡಿ ಭಗವಾನ್ ಸೂರ್ಯನು ಆರೋಗ್ಯ ಮತ್ತು ಸಂಪತ್ತನ್ನು ನೀಡುವನೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಸೂರ್ಯ ಉದಯಿಸುವಾಗ ಮುಂಜಾನೆ ಅವನ ಕಿರಣಗಳಿಗೆ ಹೆಚ್ಚು ಶಕ್ತಿ ಇರುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ನಾವು ಸೂರ್ಯ ನಮಸ್ಕಾರ ಯೋಗವನ್ನು ಮಾಡಿದಾಗ ನಮ್ಮ ದೇಹಕ್ಕೆ ಹಾಗೂ ಶರೀರಕ್ಕೆ ಅನೇಕ ಪ್ರಯೋಜನಗಳು ಲಭಿಸುತ್ತದೆ ಎಂಬುವುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಅವರು ಹೇಳಿದರು. ರಥಸಪ್ತಮಿಯನ್ನು ಸೂರ್ಯ ಜಯಂತಿ ಅಥವಾ ಮಾಘ ಸಪ್ತಮಿ ಎಂದು ಕರೆಯುತ್ತಾರೆ. ಇದು ವಸಂತಕಾಲದ ಬದಲಾವಣೆಯ ಸಂಕೇತವಾಗಿದೆ. ನಾವು ಸೂರ್ಯ ನಮಸ್ಕಾರ ಮಾಡುವುದರಿಂದ ನಮ್ಮಲ್ಲಿ ಒಳ್ಳೆಯತನ, ಆರೋಗ್ಯ, ಬುದ್ಧಿಶಕ್ತಿ ಹಾಗೂ ಆಯುರಾರೋಗ್ಯ ಲಭಿಸುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಕ್ರೀಡಾ ಭಾರತೀಯ ಅಧ್ಯಕ್ಷರಾದ ಶ್ರೀ ಕಾರಿಯಪ್ಪ ರೈ, ಕ್ರೀಡಾ ಭಾರತೀಯ ಸಂಯೋಜಕರಾದ ಭೋಜರಾಜ್ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿ ಕೃಷ್ಣ ಶೆಟ್ಟಿ ತಾರೆಮಾರು, ಮಹಿಳಾ ಪ್ರಮುಖರಾದ ಹೇಮಪ್ರಭಾ ಲೈಲಾ, ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪ ಪೂ ಕಾಲೇಜಿನ ಪ್ರಾಂಶುಪಾಲ ಸುಧೀರ್ ಎಂ.ಕೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್, ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಂಯೋಜಕಿ ನೀಮಾ ಸಕ್ಸೇನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಸೇವಂತಿ, ಸ್ವಾಗತ ಹಾಗೂ ವಂದನಾರ್ಪಣೆಯನ್ನು ಅಧ್ಯಾಪಕರಾದ ಶರಣಪ್ಪ ನೆರವೇರಿಸಿದರು. ಸಭಾ ಕಾರ್ಯಕ್ರಮದ ನಂತರ ಯೋಗ ಭೋದಕ ಶ್ರೀ ಯೊಗೀಶ ಮತ್ತು ಶ್ರೀಮತಿ ಲೇಖನಾ ಸೂರ್ಯ ನಮಸ್ಕಾರವನ್ನು ವಿದ್ಯಾರ್ಥಿ, ಅಧ್ಯಾಪಕರು ಹಾಗೂ ಭೋದಕೇತರ ಸಿಬ್ಬಂದಿಗಳ ಜೊತೆ ಮಾಡಿದರು.