Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

Lecture on LAW-ENTRANCE

ಶಕ್ತಿನಗರದ ಶಕ್ತಿ ಪದವಿ ಪೂರ್ವಕಾಲೇಜಿನಲ್ಲಿ ದಿನಾಂಕ 18-09-2019 ರಂದು ಎಂ.ಪಿ.ಎಲ್.ಎಂ ಸಂಸ್ಥೆಯು CLAT ಹಾಗೂ LAW-ENTRANCE ಕುರಿತು ವಿದ್ಯಾರ್ಥಿಗಳಿಗಾಗಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪನಿಯಾಲ ಲಾ ಅಸೋಸಿಯೇಟ್ಸ್‌ನ ಶ್ರೀ ಕೃಷ್ಣ ಪ್ರಸಾದ್ ನಾದ್‌ಸರ್ ಮಾತನಾಡಿ ವಿದ್ಯಾರ್ಥಿಗಳು ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುವುದರ ಜೊತೆಗೆ, ಸಮಾಜ, ದೇಶ ಹಾಗೂ ಕಾನೂನು ಸುವ್ಯವಸ್ಥೆಯನ್ನು ಸಬಲಿಕರಣಗೊಳಿಸಲು ಬದ್ಧರಾಗಿರಬೇಕು. ಆದ್ದರಿಂದ ಕಾನೂನಿನ ಜ್ಞಾನ ಅತ್ಯವಶ್ಯಕ. ಸಮಾಜ ಮತ್ತು ದೇಶದ ಸಬಲೀಕರಣಕ್ಕೆ ನೆರವಾಗುವ ಮನೋಭಾವವನ್ನು ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅಂಜನಾ ಪ್ರಭು ಅವರು ಮಾತನಾಡಿ, ಜಗತ್ತು ಅವಕಾಶಗಳ ಸಮುದ್ರವಾಗಿದೆ. ವಿದ್ಯಾರ್ಥಿಗಳು ನಿಪುಣರಾಗಿ ವ್ಯವಹರಿಸುವ ಮತ್ತು ಬದುಕುವ ಕಲೆಯನ್ನು ಕಲಿಯಬೇಕು. ಕಾನೂನು ವಿಭಾಗದಲ್ಲಿ ಸಾಕಷ್ಟು ಅವಕಾಶಗಳಿದ್ದು ಈ ಅವಕಾಶಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗುತ್ತದೆ. ವೃತ್ತಿಯನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು ಎಂದರು.

ಕಾಲೇಜಿನ ಆಡಳಿತ ಮಂಡಳಿ, ಬೋಧಕ ವರ್ಗದವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಭಾಕರ ಜಿ.ಎಸ್ ವಂದಿಸಿದರು. ಅಧ್ಯಾಪಕಿ ಶಿಲ್ಪ ಕಾರ್ಯಕ್ರಮ ನಿರೂಪಿಸಿದರು.