Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಕೃಷ್ಣಮಯ – 2024 ಉದ್ಘಾಟನೆ

ಮಂಗಳೂರು : ಶಕ್ತಿನಗರದಲ್ಲಿರುವ ಶಕ್ತಿ ವಸತಿ ಶಾಲೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಶನಿವಾರದಂದು ಜಿಲ್ಲಾ ಮಟ್ಟದ ಕೃಷ್ಣ ವೇಷ ಸ್ಪರ್ಧೆ ಕೃಷ್ಣಮಯದ ಉದ್ಘಾಟನಾ ಸಮಾರಂಭ ಜರುಗಿತು.

ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಶಕ್ತಿನಗರ ಮತ್ತು ಶಕ್ತಿ ವಿದ್ಯಾಸಂಸ್ಥೆ ಶಕ್ತಿನಗರ ಇದರ ಸಹಯೋಗದಲ್ಲಿ ನಡೆದ ’ಕೃಷ್ಣಮಯ’ ಜಿಲ್ಲಾ ಮಟ್ಟದ ಕೃಷ್ಣ ವೇಷ ಸ್ಪರ್ಧಾ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಮತ್ತು ಭಂಡಾರಿ ಫೌಂಡೇಷನ್‌ನ ಸ್ಥಾಪಕರೂ ಆಗಿರುವ ಡಾ. ಮಂಜುನಾಥ್ ಭಂಡಾರಿ ಅವರು ’ಮಕ್ಕಳು 4 ಗೋಡೆಯ ಒಳಗೆ ಕಲಿಯುವ ವಿಷಯಕ್ಕಿಂತ ಹೆಚ್ಚಾಗಿ ಸಹಪಾಠಿಗಳಿಂದ ಕಲಿಯುತ್ತಾರೆ ಅದರ ಮಹತ್ವವು ಭವಿ?ದಲ್ಲಿ ಅವರಿಗೆ ಅರಿವಾಗುತ್ತದೆ. ಭಗವದ್ಗೀತೆಯ ಪ್ರತಿಯೊಂದು ಸಾಲು ಮನುಷ್ಯನ ಗತಿಯನ್ನು ಬದಲಿಸುತ್ತದೆ. ಗೀತೆಯ ಮೌಲ್ಯಗಳನ್ನು ನಾವು ನಮ್ಮ ಜೀವನದಲ್ಲಿ ರೂಢಿಸಿಕೊಂಡು ನಡೆಯಬೇಕು ಎಂದು ಮಕ್ಕಳಿಗೆ ಕಿವಿಮಾತನ್ನು ಹೇಳಿದರು.

ಕಾರ್ಯಕ್ರಮದ ಮತ್ತೊರ್ವ ಅತಿಥಿಗಳಾಗಿದ್ದ ಶ್ರೀ ರವೀಂದ್ರ ರೈ, ಅಧ್ಯಕ್ಷರು ವಿವೇಕಾನಂದ ಪದವಿ ಪೂರ್ವ ಕಾಲೇಜು, ಪುತ್ತೂರು ಅವರು ಮಾತನಾಡಿ ಶಾಲೆಗಳು ಶಿಕ್ಷಣ ಕ್ಷೇತ್ರದ ದೇಗುಲವಿದ್ದಂತೆ ಶಿಕ್ಷಣ ಕ್ಷೇತ್ರದಿಂದ ಮಾತ್ರವೇ ಸಮಾಜದ ಬದಲಾವಣೆ ಸಾಧ್ಯ. ಜಗತ್ತಿನಲ್ಲಿ ಇಲ್ಲದ ಸಂಸ್ಕಾರ ಮೌಲ್ಯಗಳು ನಮ್ಮ ಭಾರತದ ನೆಲದಲ್ಲಿದೆ ಇಂತಹ ಭಾರತೀಯ ಸಂಸ್ಕಾರ ಮತ್ತು ಮೌಲ್ಯಗಳನ್ನು ಜಗತ್ತಿಗೆ ನೀಡುವುದೇ ನಿಜವಾದ ಶಿಕ್ಷಣದ ಉದ್ದೇಶವಾಗಬೇಕು. ಸ್ವಂತ ಸುಖವನ್ನು ತ್ಯಜಿಸಿ ದೇಶದ ಸುಖ ಬಯಸುವ ಶಿಕ್ಷಣವನ್ನು ನಮ್ಮ ಶಾಲೆಗಳು ಮಕ್ಕಳಿಗೆ ನೀಡಬೇಕಾಗಿದೆ. ಶಿಕ್ಷಣವು ಒಬ್ಬ ಮನುಷ್ಯನಲ್ಲಿ ರಾಕ್ಷಸತ್ವವನ್ನು ಹೋಗಲಾಡಿಸಿ ದ್ವೇಷ ಮುಕ್ತ ಸಮಾಜ ನಿರ್ಮಾಣ, ತಾರಾತಮ್ಯ ಮುಕ್ತ ಸಮಾಜ ನಿರ್ಮಾಣ ಮಾಡಬೇಕು. ಸ್ಪರ್ಧೆಗಳಲ್ಲಿ ಸೋತಾಗ ಕುಸಿಯಾದೆ ಶಕ್ತಿಶಾಲಿಯಾಗಿ ನಿಲ್ಲಬೇಕು ಎಂಬುವುದನ್ನು ಶ್ರೀಮದ್ ಭಗವದ್ಗೀತೆಯ ಮೂಲಕ ನಾವು ಕಲಿತುಕೊಳ್ಳಬೇಕು ಅದರಂತೆ ಬಾಳಿನಲ್ಲಿ ಮನೋ ದೌರ್ಬಲ್ಯಗಳನ್ನು ಬಿಟ್ಟು ಬದುಕಬೇಕು ಎಂದು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಾ ಕೆ ಸಿ ನಾೖಕ್‌ ಅವರು ಮಾತನಾಡಿ ಕೃ?ಮಯ ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ನೆರೆದಿದ್ದ ಎಲ್ಲ ಸ್ಪರ್ಧಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಮೂರ್ತಿ ಹೆಚ್ ಹಾಗೂ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಬಬಿತಾ ಸೂರಜ್ ಉಪಸ್ಥಿತರಿದ್ದರು.

ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕನ್ನಡ ಶಿಕ್ಷಕ ಶರಣಪ್ಪ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.