ಮಂಗಳೂರು : ಶಕ್ತಿನಗರದಲ್ಲಿರುವ ಶಕ್ತಿ ವಿದ್ಯಾ ಸಂಸ್ಥೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ನಡೆದ ಕೃಷ್ಣಮಯ ಜಿಲ್ಲಾ ಮಟ್ಟದ ಕೃಷ್ಣ ವೇಷ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್, ಕೊಡಿಯಾಲ್ ಬೈಲ್ ಶಾಖೆ ಇಲ್ಲಿಯ ಪ್ರಧಾನ ವ್ಯವಸ್ಥಾಪಕರಾದ ನಾರಾಯಣ ರಾವ್ ಅವರು ಮಾತನಾಡಿ ವಿದ್ಯಾ ದದಾತಿ ವಿನಯಮ್ ಎಂಬ ಮಾತಿನಂತೆ ನಾವು ವಿದ್ಯೆಯಿಂದ ವಿನಯವನ್ನು ಕಲಿಯುತ್ತೇವೆ. ಅಂತಹ ವಿದ್ಯೆ ಮತ್ತು ವಿನಯದಿಂದ ನಾವು ಸಮಾಜದಿಂದ ಏನನ್ನು ಗಳಿಸಿಕೊಂಡೆ ಅನ್ನುವುದಕ್ಕಿಂತ ಸಮಾಜಕ್ಕೆ ನಾನು ಏನನ್ನು ಅರ್ಪಿಸುತ್ತೇನೆ ಎಂಬುದು ಮುಖ್ಯವಾಗುತ್ತದೆ. ನಾವು ಜೀವನದಲ್ಲಿ ಪರೋಪಕಾರವನ್ನು ಬೆಳೆಸಿಕೊಂಡಾಗ ಮಾತ್ರವೇ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿ ಮಕ್ಕಳಿಗೆ ಶುಭ ಹಾರೈಸಿದರು.
ನಂತರ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ಕೃಷ್ಣಮಯ ಜಿಲ್ಲಾ ಮಟ್ಟದ ಕೃಷ್ಣ ವೇಷ-ಗೀತಾ ಗಾಯನ ಒಳಗೊಂಡು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರಶಸ್ತಿ ಪತ್ರ, ನಗದು ಮತ್ತು ಫಲಕವನ್ನು ನೀಡಿ ಗೌರವಿಸಲಾಯಿತು. ಈ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಈ ಕೆಳಗಿನಂತಿದ್ದಾರೆ.
ಬೆಣ್ಣೆ ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ತನೀಶ್ ಎಮ್ ಕುಲಾಲ್, ದ್ವಿತೀಯ ಸ್ಥಾನವನ್ನು ಇಶಾನ್ವಿ ಜೆ.ಕೆ., ತೃತೀಯ ಸ್ಥಾನವನ್ನು ಶ್ರೀನಿಕಾ.
ಬಾಲಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಶಾರ್‍ವಾರಿ ಸಚಿತ್ , ದ್ವಿತೀಯ ಸ್ಥಾನವನ್ನು ಸಕ್ಷಮ್ ಆರ್, ಪ್ರಿಯದರ್ಶಿಣಿ ಶಾಲೆ, ತೃತೀಯ ಸ್ಥಾನವನ್ನು ಶೌರ್ಯ ನಿತಿನ್ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ.
ಯಶೋದ ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಆಶಾ ಮತ್ತು ನಕ್ಷತ್ರ, ದ್ವಿತೀಯ ಸ್ಥಾನವನ್ನು ದೀಪಿಕಾ ಮತ್ತು ಸ್ಮಯ, ತೃತೀಯ ಸ್ಥಾನವನ್ನು ಅಕ್ಷತಾ ಭಟ್ ಮತ್ತು ತನ್ವಿ.
ದಾಸರ ಕೀರ್ತನೆಗಳು ಪ್ರಥಮ ಸ್ಥಾನವನ್ನು ವಸುದಾ ಮಲ್ಯ ಮತ್ತು ತಂಡ ಶಾರದ ವಿದ್ಯಾಲಯ ಶಾಲೆ, ದ್ವಿತೀಯ ಸ್ಥಾನವನ್ನು ಲಕ್ಷ್ಮಣ್ ಪ್ರಭು ಮತ್ತು ತಂಡ ಕೆನರ ಸಿಬಿಎಸ್‌ಇ ಶಾಲೆ, ತೃತೀಯ ಸ್ಥಾನವನ್ನು ಹಂಸಿನಿ ಮತ್ತು ತಂಡ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಪಡೆದಿರುತ್ತಾರೆ.
ಗೋಪಿಕಾ ಕೃಷ್ಣ ಸ್ಪರ್ದೆಯಲ್ಲಿ ಪ್ರಥಮ ಸ್ಥಾನವನ್ನು ದ್ವಿತೀಯ ಮತ್ತು ತಂಡ ಕೆನರಾ ಸಿಬಿಎಸ್‌ಇ ಶಾಲೆ, ದ್ವಿತೀಯ ಸ್ಥಾನವನ್ನು ಚಿನ್ಮಾಯಿ ಎಸ್ ಮತ್ತು ತಂಡ, ಶಾರದ ವಿದ್ಯಾಲಯ, ತೃತೀಯ ಸ್ಥಾನವನ್ನು ಅಪೇಕ್ಷಾ ಕಾಮತ್ ಮತ್ತು ತಂಡ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ.
ಗೀತಾ ಕಂಠಪಾಠ (1ನೇ ತರಗತಿಯಿಂದ 5ನೇ ತರಗತಿ) ಪ್ರಥಮ ಸ್ಥಾನವನ್ನು ಪ್ರಾಂಶು ನೊವಾಡ, ಶಾರದಾ ವಿದ್ಯಾಲಯ, ಮಂಗಳೂರು, ದ್ವಿತೀಯ ಸ್ಥಾನವನ್ನು ಸಾರ್ವ ನಾಗೇಕರ್ ಅಮೃತ ವಿದ್ಯಾಲಯಂ, ತೃತೀಯ ಸ್ಥಾನವನ್ನು ದಾತ್ರಿ ಜಿ.ಭಟ್ ಕೆನರಾ ಸಿಬಿಎಸ್‌ಇ ಶಾಲೆ ಮಂಗಳೂರು ಇವರು ಪಡೆದಿರುತ್ತಾರೆ.
ಗೀತಾ ಕಂಠಪಾಠ (6 ನೇ ತರಗತಿಯಿಂದ 7ನೇ ತರಗತಿ ವರೆಗೆ) ಪ್ರಥಮ ಸ್ಥಾನವನ್ನು ಪ್ರೇರಣ ಶರ್ಮ, ಶಾರದಾ ವಿದ್ಯಾಲಯ, ದ್ವಿತೀಯ ಸ್ಥಾನವನ್ನು ದಿವ್ಯ ಭಟ್ ಶಾರದಾ ವಿದ್ಯಾಲಯ, ತೃತೀಯ ಸ್ಥಾನವನ್ನು ಭೃಗು ರಾಘವ್ ರಾಷ್ಟ್ರೋತ್ತಾನ ವಿದ್ಯಾಕೇಂದ್ರ ಪಡೆದಿರುತ್ತಾರೆ.
ಗೀತಾ ಕಂಠಪಾಠ (8ನೇ ತರಗತಿಯಿಂದ 10ನೇ ತರಗತಿ ವರೆಗೆ) ಪ್ರಥಮ ಸ್ಥಾನವನ್ನು ಪ್ರಕೃತಿ ಶರ್ಮ ಶಾರದ ವಿದ್ಯಾಲಯ, ದ್ವಿತೀಯ ಸ್ಥಾನವನ್ನು ಶ್ರಾವಣಿ, ಶಾರದಾ ವಿದ್ಯಾಲಯ, ತೃತೀಯ ಸ್ಥಾನವನ್ನು ಪ್ರಚಿತ ಎಮ್ ಭಟ್ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಇವರು ಪಡೆದಿರುತ್ತಾರೆ.
ಚಿತ್ರಕಲೆ ಸ್ಪರ್ಧೆ ಕೃಷ್ಣ ಬಾಲಲೀಲೆಯ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸಂಜನಾ ಎಸ್ ಭಟ್ ಬಾಲವಿಕಾಸ್, ಇಂಗ್ಲೀಷ್ ಮಿಡಿಯಂ ಶಾಲೆ, ದ್ವಿತೀಯ ಸ್ಥಾನವನ್ನು ತನುಷ್ ಗಟ್ಟಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ತೃತೀಯ ಸ್ಥಾನವನ್ನು ಅನನ್ಯ ಪೈ, ಕೆನರಾ ಸಿಬಿಎಸ್‌ಇ ಶಾಲೆ ಇವರು ಪಡೆದಿರುತ್ತಾರೆ.
ಕುಣಿತ ಭಜನೆಯಲ್ಲಿ ಪ್ರಥಮ ಸ್ಥಾನವನ್ನು ಸೋನಲ್ ಪಿ. ಕೊಟ್ಯಾನ್ ಮತ್ತು ತಂಡ, ಶಾರದಾ ವಿದ್ಯಾಲಯ ಕೊಡಿಯಾಲ್ ಬೈಲು, ದ್ವಿತೀಯ ಸ್ಥಾನವನ್ನು ಗ್ಯಾನ್ ಮತ್ತು ತಂಡ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ತೃತೀಯ ಸ್ಥಾನವನ್ನು ದೀರಜ್ ಮತ್ತು ತಂಡ ಶಕ್ತಿ ರೆಸಿಡೆನ್ಯಿಯಲ್ ಶಾಲೆ, ಶಕ್ತಿನಗರ, ಮಂಗಳೂರು ಇವರು ಪಡೆದಿರುತ್ತಾರೆ.
ಈ ಸಂದರ್ಭದಲ್ಲಿ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಬಬಿತಾ ಸೂರಜ್ ಅವರು ಮಾತನಾಡಿ ಕೃಷ್ಣಮಯ ಜಿಲ್ಲಾ ಮಟ್ಟದ ಕೃಷ್ಣ ವೇಷ ಸ್ಪರ್ಧೆಯು ಯಶಸ್ವಿಯಾಗಿ ನಡೆಯಲು ಸಹಕರಿಸಿದ ಪ್ರತಿಯೊಬ್ಬರಿಗೂ ವಂದನೆಗಳನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ ಕೆ ಮತ್ತು ಗಿರೀಶ್ ಕರ್ನಾಟಕ ಬ್ಯಾಂಕ್‌ನ ಸಿಬ್ಬಂದಿ ಮತ್ತು ಶಾಲಾ ಪ್ರಾಂಶುಪಾಲೆ ಶ್ರೀಮತಿ ಬಬಿತಾ ಸೂರಜ್ ಮತ್ತು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿಕ್ಷಕಿ ಚೇತನ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.