ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಶಕ್ತಿನಗರ, ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪಪೂ ಕಾಲೇಜು ವತಿಯಿಂದ ಜಿಲ್ಲಾ ಮಟ್ಟದ ಕೃಷ್ಟಮಯ – 2023 ಕೃಷ್ಣ ವೇಷ ಸ್ಪರ್ಧೆಯನ್ನು ದಿನಾಂಕ 2-9-2023 ರ ಶನಿವಾರ ಪೂರ್ವಾಹ್ನ 9 ಕ್ಕೆ ಶಕ್ತಿ ವಸತಿ ಶಾಲೆ ಶಕ್ತಿನಗರದಲ್ಲಿ ಆಯೋಜಿಸಲಾಗಿದೆ. ಸ್ಪರ್ಧೆಗಳ ವಿವರ ಈ ಕೆಳಗಿನಂತಿದೆ.
ವಿಭಾಗ 1 ರಲ್ಲಿ 3 ವರ್ಷ ತನಕದ ಮಕ್ಕಳಿಗೆ ಮುದ್ದುಕೃಷ್ಣ, 4 ರಿಂದ 5 ವರ್ಷ ತನಕದ ಮಕ್ಕಳಿಗೆ ಬೆಣ್ಣೆ ಕೃಷ್ಣ, 1 ರಿಂದ 4 ನೇ ತರಗತಿಯ ಮಕ್ಕಳಿಗೆ ಯಶೋದ ಕೃಷ್ಣ, 5 ರಿಂದ 7ನೇ ತರಗತಿಯ ಮಕ್ಕಳಿಗೆ ದಾಸರ ಕೀರ್ತನೆಗಳು, 8 ರಿಂದ 10 ನೇ ತರಗತಿಯ ಮಕ್ಕಳಿಗೆ ಗೋಪಿಕಾ ಕೃಷ್ಣ. ಗೀತಾ ಕಂಠಪಾಠ ಸ್ಪರ್ಧೆಯಲ್ಲಿ, 1-5 ನೇ ತರಗತಿಯ ಮಕ್ಕಳಿಗೆ ಧ್ಯಾನ ಶ್ಲೋಕ 1-8, 6 ರಿಂದ 7 ನೇ ತರಗತಿಯ ಮಕ್ಕಳಿಗೆ ಅಧ್ಯಾಯ – 12 (1-10 ನೇ ಶ್ಲೋಕ) 8 ರಿಂದ 10 ನೇ ತರಗತಿಯ ಮಕ್ಕಳಿಗೆ ಅಧ್ಯಾಯ – 15, 1-10 ನೇ ಶ್ಲೋಕ. ಚಿತ್ರಕಲಾ ಸ್ಪರ್ಧೆ 8 ರಿಂದ 10 ಶ್ರೀ ಕೃಷ್ಣನ ಲೀಲೆಗಳು. ಕುಣಿತ ಭಜನೆ 6 ರಿಂದ 10 ತರಗತಿ ಶ್ರೀ ಕೃಷ್ಣನ ಭಜನೆಗಳು 10 ಜನರ ತಂಡಕ್ಕೆ 4 ನಿಮಿಷ ಅವಕಾಶ ನೀಡಲಾಗಿದೆ. ಒಂದು ಶಾಲೆಯಿಂದ ಎಷ್ಟು ತಂಡಗಳಿಗೂ ಭಾಗವಹಿಸುವ ಅವಕಾಶವಿದೆ. ವೆಬ್ಸೈಟ್ ನೋಂದಣಿಗೆ ಹಾಗೂ ಹೆಚ್ಚಿನ ಮಾಹಿತಿಗೋಸ್ಕರ Shakthi.edu.in ಮತ್ತು ದೂರವಾಣಿ ಸಂಖ್ಯೆ 0824-2231452/8431247433 ಗೆ ಸಂಪರ್ಕಿಸಲು ಕೋರಲಾಗಿದೆ.

