Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವೈಭವದ ಕೃಷ್ಣ ಜನ್ಮಾಷ್ಟಮಿ ಹಾಗೂ ಲಕ್ಷ ತುಳಸಿ ಅರ್ಚನೆ 

ದಿನಾಂಕ 26-08-2024 ರಂದು ಪ್ರಾತಃಕಾಲದಿಂದ ಧಾರ್ಮಿಕ ಕಾರ್ಯಕ್ರಮ, ಗಣಪತಿ ಹೋಮ ಹಾಗೂ ಮಹಾಪೂಜೆ ಜರುಗಿತು. ವಿವಿಧ ಭಜನಾ ತಂಡಗಳಿಂದ ನಾಮಸಂಕೀರ್ತನೆ, ಮದ್ಯಾಹ್ನ ಅಪಾರ ಸಂಖ್ಯೆಯ ಭಕ್ತಾದಿಗಳು ನೆರೆದು ಅನ್ನ ಸಂತರ್ಪಣೆ ಜರುಗಿತು.

ಶಂಕರಪುರದ ದ್ವಾರಕಾಮಯಿ ಮಠದ ಸ್ವಾಮೀಜಿಗಳಾದ ಪರಮ ಪೂಜ್ಯ ಶ್ರೀ ಸಾಯಿ ಈಶ್ವರ್ ಗುರೂಜಿ ಆಗಮಿಸಿ ಪ್ರಸಾದ ಸ್ವೀಕರಿಸಿದರು. ಸಂಜೆ ಶ್ರೀ ಗೋಪಾಲಕೃಷ್ಣ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ರಾಕೇಶ್ ರೈ ಅಡ್ಕ ರವರ ನಿರ್ದೇಶನದಲ್ಲಿ ಶ್ರೀಮತಿ ರಮ್ಯ ಆಚಾರ್ಯ ರವರ ಸಂಯೋಜನೆಯಲ್ಲಿ ಶ್ರೀ ಕೃಷ್ಣ ಲೀಲಾಮೃತ ಎಂಬ ಯಕ್ಷಗಾನ ಪ್ರಸಂಗವನ್ನು ಅಮೋಘವಾಗಿ ಪ್ರದರ್ಶಿಸಿದರು. ರಾತ್ರಿ 11.30 ಕ್ಕೆ ಮಹಾಪೂಜೆ ಜರುಗಿ ಶ್ರೀ ಕೃಷ್ಣನಿಗೆ ಅರ್ಘ್ಯಪ್ರದಾನ ನೆರವೇರಿತು. ಸೇರಿದ ಎಲ್ಲಾ ಭಕ್ತಾದಿಗಳಿಗೆ ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡುವ ಅವಕಾಶ ಲಭ್ಯವಾಯಿತು.

ದಿನಾಂಕ 27-08-2024 ರಂದು ಮುಂಜಾನೆಯಿಂದ ವಿಶೇಷವಾದ ಲಕ್ಷ ತುಳಸೀ ಅರ್ಚನೆ ಆರಂಭಗೊಂಡಿತು. ಮದ್ಯಾಹ್ನ ಮಹಾಪೂಜೆ ಜರುಗಿ ಮಹಾ ಅನ್ನಸಂತರ್ಪಣೆ ನಡೆಯಿತು. ಅನೇಕ ಸಂಖ್ಯೆಯಲ್ಲಿ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸಿದರು. ಕ್ರೋಧಿ ನಾಮ ಸಂವತ್ಸರದ ಕೃಷ್ಣ ಜನ್ಮಾಷ್ಟಮಿ ವೈಭವದಿಂದ, ಶ್ರಧ್ದಾ ಭಕ್ತಿಯಿಂದ ಸಂಪನ್ನ ಗೊಂಡಿತು. ಇದೇ ಸಂದರ್ಭದಲ್ಲಿ ಅನೇಕ ಗಣ್ಯರು ಕ್ಷೇತ್ರಕ್ಕೆ ಆಗಮಿಸಿ ಶ್ರೀದೇವರ ದರ್ಶನ ಪಡೆದರು ಕ್ಷೇತ್ರದ ಆಡಳಿತ ಮೊಕ್ತೇಸರರಾದ ಡಾ.ಕೆ.ಸಿ ನಾೖಕ್‌, ಮೊಕ್ತೇಸರರಾದ ಸಗುಣ ಸಿ ನಾೖಕ್‌, ಸಂಜಿತ್ ನಾೖಕ್‌ ಉಪಸ್ಥಿತರಿದ್ದರು.