Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಲಕ್ಷ ತುಳಸಿ ಅರ್ಚನೆ

ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸೆಪ್ಟೆಂಬರ್ 4 ಮತ್ತು 5 ರಂದು ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಲಕ್ಷ ತುಳಸಿ ಅರ್ಚನೆ ಕಾರ್ಯಕ್ರಮ ಸಂಪನ್ನಗೊಂಡಿತು.

ಸೆಪ್ಟೆಂಬರ್ 4 ರಂದು ಪ್ರಾತಃಕಾಲ 6 ರಿಂದ ಶ್ರೀ ದೇವರಿಗೆ ಪಂಚಾಮೃತಾಭಿಷೇಕ, ಬೆಳಿಗ್ಗೆ 7.30 ಕ್ಕೆ ಶ್ರೀಗಣಪತಿ ಹವನ ನಂತರ ಮಹಾಪೂಜೆ ಜರುಗಿತು. ನಂತರ ನಗರದ ವಿವಿಧ ಭಜನಾ ತಂಡಗಳಿಂದ ಭಜನಾ ನಾಮ ಸಂಕೀರ್ತನೆ ಹಾಗೂ ಮಧ್ಯಾಹ್ನ 12.30 ಕ್ಕೆ ಸರಿಯಾಗಿ ಮಹಾಪೂಜೆ ನಡೆಯಿತು. ಅಂದು ಸಂಜೆ 5 ಗಂಟೆಯಿಂದ ೮ರವರೆಗೆ ಶ್ರೀ ಸುಧಾಕರ್ ಕೋಟೆ ಕುಂಜತ್ತಾಯ ಕಾಸರಗೋಡು ಇವರ ತಂಡದಿಂದ ಭಕ್ತ ಸುಧಾಮ ಎಂಬ ಹರಿಕಥಾ ಸತ್ಸಂಗ ನಡೆಯಿತು. ರಾತ್ರಿ 8 ಗಂಟೆಯಿಂದ 11.30 ರ ತನಕ ನಗರದ ವಿವಿಧ ಭಜನಾ ತಂಡಗಳಿಂದ ಭಜನಾ ನಾಮ ಸಂಕೀರ್ತನೆ ರಾತ್ರಿ 11.30 ಕ್ಕೆ ವಿಶೇಷ ಆಲಂಕಾರ ಪೂಜೆ ನೆರವೇರಿತು. ಶ್ರೀಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ಶ್ರೀ ಗೋಪಾಲಕೃಷ್ಣ ದೇವರಿಗೆ ಅರ್ಘ್ಯ ಪ್ರಧಾನ ನೆರವೇರಿತು. ಈ ಸಂದರ್ಭದಲ್ಲಿ ನಗರದ ಅನೇಕ ಭಕ್ತಾದಿಗಳು ಈ ಅರ್ಘ್ಯಪ್ರಧಾನ ಸೇವೆಯಲ್ಲಿ ಭಾಗವಹಿಸಿದರು.

ಸೆಪ್ಟೆಂಬರ್ 5 ರಂದು ಪ್ರಾತಃಕಾಲ 6 ಗಂಟೆಗೆ ಶ್ರೀದೇವರಿಗೆ ಪಂಚಾಮೃತಾಭಿಷೇಕ, ಬೆಳಿಗ್ಗೆ 7.30 ಕ್ಕೆ ಗಣಪತಿ ಹವನ ನಡೆದು ಬೆಳಗ್ಗೆ 8.30ರಿಂದ ನಿರಂತರ ಲಕ್ಷ ತುಳಸಿ ಅರ್ಚನೆಯು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅವರ ಮಾರ್ಗದರ್ಶನದಲ್ಲಿ ಸಂಪನ್ನಗೊಂಡಿತು. ಮಧ್ಯಾಹ್ನ 12.30 ಕ್ಕೆ ಶ್ರೀ ದೇವರ ಮಹಾಪೂಜೆಯ ನಂತರ ಅನ್ನಸಂತರ್ಪಣೆ ಜರುಗಿತು. ಊರ ಪರವೂರ ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿವಿಧ ಗಣ್ಯರು ದೇವಸ್ಥಾನಕ್ಕೆ ಆಗಮಿಸಿ ಪ್ರಸಾದವನ್ನು ಸ್ವೀಕರಿಸಿದರು. ದೇವಾಲಯದ ಆಡಳಿತ ಮೊಕ್ತೇಸರರಾದ ಡಾ. ಕೆ. ಸಿ. ನಾೖಕ್‌, ಮೊಕ್ತೇಸರರಾದ ಶ್ರೀಮತಿ ಸಗುಣಾ ಸಿ. ನಾೖಕ್‌, ಸಂಜೀತ್ ನಾೖಕ್‌, ಅಂಜು ಆಳ್ವ ನಾೖಕ್‌, ಗೌರವ ಸಲಹೆಗಾರರಾದ ಅನಂತಕೃಷ್ಣ ಭಟ್‌ರವರು ಸೇರಿದಂತೆ ಅನೇಕ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು.