Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಕೆಸಿಇಟಿ 2024 ರ ಪರೀಕ್ಷೆಯಲ್ಲಿ ಶಕ್ತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ರೋಹಿತ್ ಕಲ್ಲುರಾಯಗೆ 194 ನೇ ರ್‍ಯಾಂಕ್

ಮಂಗಳೂರು : 2024 ನೇ ಸಾಲಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕೆಸಿಇಟಿ (KCET) ಪರೀಕ್ಷೆಯಲ್ಲಿ, ಶಕ್ತಿ ವಿದ್ಯಾಸಂಸ್ಥೆ ಶಕ್ತಿನಗರ, ಮಂಗಳೂರು ಇದರ 3 ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿರುತ್ತಾರೆ.

ಶಕ್ತಿ ವಿದ್ಯಾಸಂಸ್ಥೆಯ ವಿಜ್ಞಾನ ವಿಭಾಗದಲ್ಲಿ ಕಲಿಯುವ ರೋಹಿತ್ ಕಲ್ಲುರಾಯ ಇಂಜಿನಿಯರಿಂಗ್‌ನಲ್ಲಿ 194 ನೇ ರ್‍ಯಾಂಕ್ ಗಳಿಸಿರುತ್ತಾರೆ ಹಾಗೂ ಬಿ ಫಾರ್ಮ ಮತ್ತು ಡಿ ಫಾರ್ಮದಲ್ಲಿ 735 ನೇ ರ್‍ಯಾಂಕ್ ಬಂದಿರುತ್ತದೆ.

ಕ್ರಮವಾಗಿ ಎನ್ ಹಿತೇಶ್ ಕುಮಾರ್ ಇಂಜಿನಿಯರಿಂಗ್‌ನಲ್ಲಿ 1656  ರ್‍ಯಾಂಕ್ ಮತ್ತು ಪ್ರತೀಕ್ಷಾ ಬಿ.ಪಿ. 1694  ನೇ ರ್‍ಯಾಂಕ್ ಪಡೆದಿರುತ್ತಾರೆ. ಇದು ಮಾತ್ರವಲ್ಲದೆ 2000 ದಿಂದ 4000 ದ ಒಳಗಡೆ 5 ವಿದ್ಯಾರ್ಥಿಗಳು ರ್‍ಯಾಂಕ್ ಪಡೆದಿರುತ್ತಾರೆ.

ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕರು ಮತ್ತು ಆಡಳಿತಾಧಿಕಾರಿಗಳಾದ ಡಾ.ಕೆ.ಸಿ.ನಾೖಕ್‌ ಅವರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಅಭಿನಂದಿಸಿದರು. ಅತೀ ಕಡಿಮೆ ವರ್ಷದಲ್ಲಿ ಅತೀ ಹೆಚ್ಚು ಸಾಧನೆ ಮಾಡಲು ಶ್ರಮಿಸಿದ ಸಂಸ್ಥೆಯ ಉಪನ್ಯಾಸಕ ಮತ್ತು ಇತರ ಸಿಬ್ಬಂದಿ ವರ್ಗಕ್ಕೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಪ್ರಧಾನ ಸಲಹೆಗಾರರಾದ ರಮೇಶ ಕೆ, ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವೆಂಕಟೇಶ್ ಮೂರ್ತಿ ಹೆಚ್, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲರಾದ ಬಬಿತ ಸೂರಜ್, ಎಲ್ಲಾ ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.