Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಶಕ್ತಿ ವಿದ್ಯಾಸಂಸ್ಥೆಯಿಂದ ಜೆ.ಇ.ಇ. ಮೈನ್ಸ್ (JEE Mains) 2025 ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಸಾಧನೆ

2025 ನೇ ಸಾಲಿನ ಜೆ.ಇ.ಇ.ಮೈನ್ಸ್ (JEE Mains) ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಲ್ಲಿ, ಶಕ್ತಿ ಪದವಿ ಪೂರ್ವ ಕಾಲೇಜ್ ಶಕ್ತಿನಗರ, ಮಂಗಳೂರು ಇದರ 8 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್‌ಗೆ ಅರ್ಹತೆಯನ್ನು ಪಡೆದಿರುತ್ತಾರೆ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ನಡೆಸಿದ ರಾಷ್ಟ್ರೀಯ ಮಟ್ಟದ ಜೆಇಇ ಮೈನ್ಸ್ ಬಿ.ಇ ಮತ್ತು ಬಿ.ಟೆಕ್ ಪ್ರವೇಶಾತಿ ಪರೀಕ್ಷೆಯಲ್ಲಿ ಶಕ್ತಿ ವಿದ್ಯಾಸಂಸ್ಥೆಯ ವಿಜ್ಞಾನ ವಿಭಾಗದಲ್ಲಿ ಕಲಿಯುವ ಅನುರಾಗ್ ಆರ್ ನಾೖಕ್‌ (General) ಶೇಕಡಾ 97.8826415 ಪರ್ಸೆಂಟೈಲ್ ಗಳಿಸಿರುತ್ತಾನೆ.

ಕ್ರಮವಾಗಿ ಕಿಶನ್ ಗೌಡ(OBC) – 95.5154873 ಪರ್ಸೆಂಟೈಲ್, ತನುಜ್ ಹಳ್ಟಿ (General) – 93.6494031 ಪರ್ಸೆಂಟೈಲ್, ಶಿವಾಂಶು (SC) – 83.9888911 ಪರ್ಸೆಂಟೈಲ್, ಟಿ ಮೋಹಿತ್(ST)- 82.7499595 ಪರ್ಸೆಂಟೈಲ್, ಹರ್ಷೇಂದ್ರ ಡಿ ನಾಯಕ್ (OBC) – 80.2859252 ಪರ್ಸೆಂಟೈಲ್, ಮೋನಿಷ್‌ದೇವ್ ಬಿ.ಎಂ. (SC) – 78.466483 ಪರ್ಸೆಂಟೈಲ್, ವರ್ಷಿಣಿ ಡಿ ಎನ್ (OBC) – 79.9209737 ಪರ್ಸೆಂಟೈಲ್ ಗಳಿಸುವುದರ ಮೂಲಕ ಜೆಇಇ ಅಡ್ವಾನ್ಸ್‌ಗೆ ಅರ್ಹತೆಯನ್ನು ಪಡೆದಿರುತ್ತಾರೆ.

ಈ ಸಂದರ್ಭದಲ್ಲಿ ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಕೆ.ಸಿ. ನಾೖಕ್‌, ಕಾರ್ಯದರ್ಶಿ ಸಂಜಿತ್ ನಾೖಕ್‌, ಪ್ರಧಾನ ಸಲಹೆಗಾರರಾದ ರಮೇಶ ಕೆ, ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವೆಂಕಟೇಶ್ ಮೂರ್ತಿ ಎಚ್, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲರಾದ ಬಬಿತ ಸೂರಜ್, ಎಲ್ಲಾ ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.