Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಜೆಇಇ ಮೈನ್ 2025 & ಕೆಸಿಇಟಿ 2025 ರಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ರ್‍ಯಾಂಕ್‌ಗಳೊಂದಿಗೆ ಅಯ್ಕೆ 

ಜೆಇಇ ಮೈನ್ – 2025 ಬಿ.ಆರ್ಕ್ ಮತ್ತು ಕೆಸಿಇಟಿ 2025 ರ ಪರೀಕ್ಷೆಯಲ್ಲಿ ಶಕ್ತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ರ್‍ಯಾಂಕ್‌ಗಳೊಂದಿಗೆ ಅಯ್ಕೆ 

2025 ನೇ ಸಾಲಿನ ಎನ್ ಟಿ ಎ ಅಖಿಲ ಭಾರತ ಮಟ್ಟದಲ್ಲಿ ನಡೆಸಿರುವ ಜೆಇಇ ಮೈನ್ -2025  ಬಿ.ಆರ್ಕ್ ಪರೀಕ್ಷೆಯಲ್ಲಿ ಶಕ್ತಿ ಪದವಿ ಪ ಪೂ ಕಾಲೇಜಿನ ಅಭಿನ್ ಕೃಷ್ಣ ಪಿ.ಎಸ್. 2316 ರ್‍ಯಾಂಕ್ ಮತ್ತು ಹರ್ಷೆಂದ್ರ ದಿಗಂಬರ ನಾೖಕ್‌ 4085 ರ್‍ಯಾಂಕ್ ನೊಂದಿಗೆ ಅತ್ಯುತ್ತಮ ಫಲಿತಾಂಶವನ್ನು ಪಡೆದು ಅಖಿಲ ಭಾರತ ಮಟ್ಟದ ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಆರ್ಕಿಟೆಕ್ಚರ್ ಸೀಟಿಗೆ ಅರ್ಹತೆಯನ್ನು ಪಡೆದಿರುತ್ತಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕೆಸಿಇಟಿ (KCET)-2025 ರ ಪರೀಕ್ಷೆಯಲ್ಲಿ ರಾಜ್ಯದ ಒಟ್ಟು ಪರೀಕ್ಷೆ ಬರೆದಿರುವ 3,11,000 ವಿದ್ಯಾರ್ಥಿಗಳಲ್ಲಿ ಶಕ್ತಿ ಪದವಿ ಪೂರ್ವ ಕಾಲೇಜಿನ 13 ವಿದ್ಯಾರ್ಥಿಗಳು 8900 ಒಳಗಡೆಯ ರ್‍ಯಾಂಕ್‌ನ್ನು ಮತ್ತು 25 ವಿದ್ಯಾರ್ಥಿಗಳು 20000 ಒಳಗಡೆಯ ರ್‍ಯಾಂಕನ್ನು ಪಡೆಯುವುದರ ಮೂಲಕ ಉತ್ತಮ ಸಾಧನೆಯನ್ನು ಮಾಡಿರುತ್ತಾರೆ.

ಶಕ್ತಿ ಪಪೂ ಕಾಲೇಜಿನ ವಿಜ್ಞಾನ ವಿಭಾಗದ ಅನುರಾಗ್ ಆರ್. ನಾೖಕ್‌ ಪಶು ವೈದ್ಯಕೀಯದಲ್ಲಿ ರಾಜ್ಯಕ್ಕೆ 236 ನೇ ರ್‍ಯಾಂಕ್ , ಅಶ್ವಥ್ ಅಜಿತ್ ಪೈ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನದಲ್ಲಿ 1408 ನೇ ರ್‍ಯಾಂಕ್,ಆದಿತ್ಯ ಬಿ.ಫಾರ್ಮ ದಲ್ಲಿ 3352 ನೇ ರ್‍ಯಾಂಕ್, ಸಮುದ್ಯತಾ ಪಶು ವೈದ್ಯಕೀಯದಲ್ಲಿ 3713 ನೇ ರ್‍ಯಾಂಕ್, ತನುಜ್ ಇಂಜಿನಿಯರಿಂಗ್ ವಿಭಾಗದಲ್ಲಿ 4416 ನೇ ರ್‍ಯಾಂಕ್, ಅಭಿಜ್ಞಾ ಬಿ.ಎಸ್ಸಿ. ಕೃಷಿ ವಿಜ್ಞಾನ ವಿಭಾಗದಲ್ಲಿ 4458 ನೇ ರ್‍ಯಾಂಕ್, ಕರುಣ ವಿ ಹಿರೇಗೌಡರ್ ಪಶು ವೈದ್ಯಕೀಯದಲ್ಲಿ 4479 ನೇ ರ್‍ಯಾಂಕ್, ಅರ್ಪಿತಾ ಸಂತೋಷ್ ಕುಬಕಡ್ಡಿ ಬಿ.ಎಸ್ಸಿ. ಕೃಷಿ ವಿಜ್ಞಾನ ವಿಭಾಗದಲ್ಲಿ 4701 ನೇ ರ್‍ಯಾಂಕ್, ಹೃತ್ವಿಕ್ ಗೌಡ ಪಶು ವೈದ್ಯಕೀಯದಲ್ಲಿ 5714 ನೇ ರ್‍ಯಾಂಕ್, ನಾಗಾವರ್ಷಿನಿ ಕೆ.ಆರ್. ಬಿ.ಎಸ್ಸಿ. ಕೃಷಿ ವಿಜ್ಞಾನ ವಿಭಾಗದಲ್ಲಿ 7372 ನೇ ರ್‍ಯಾಂಕ್, ಕಿಶನ್ ಗೌಡ ವಿದ್ಯಾರ್ಥಿಗಳು ರ್‍ಯಾಂಕ್ ಇಂಜಿನಿಯರಿಂಗ್ ವಿಭಾಗದಲ್ಲಿ 7751 ನೇ ರ್‍ಯಾಂಕ್,ಮನ್ವಿತ್ ಕಾಂಚನ್ ಕೃಷಿ ವಿಜ್ಞಾನ ವಿಭಾಗದಲ್ಲಿ 8446 ನೇ ರ್‍ಯಾಂಕ್, ರಕ್ಷಿತಾ ಎಲ್ ಪೈ ಇಂಜಿನಿಯರಿಂಗ್ ವಿಭಾಗದಲ್ಲಿ 8823 ನೇ ರ್‍ಯಾಂಕ್ ಪಡೆದಿರುತ್ತಾರೆ.

ರ್‍ಯಾಂಕ್ ಗಳಿಸಿರುವ ಎಲ್ಲಾ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿಯ ಆಡಳಿತಾಧಿಕಾರಿ ಡಾ.ಕೆ. ಸಿ. ನಾೖಕ್‌, ಕಾರ್ಯದರ್ಶಿ ಸಂಜೀತ್ ನಾೖಕ್‌, ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ಬಬಿತಾ ಸೂರಜ್ ಅಭಿನಂದಿಸಿದ್ದಾರೆ.