Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಿಗೆ ಶಾಲೆಗಳು ಒತ್ತು ಕೊಡಬೇಕು – ಹನುಮಂತರಾಯ

ಮಂಗಳೂರು ಡಿ. 19 :  ಶಕ್ತಿನಗರದ ಶಕ್ತಿ ವಸತಿಯುಕ್ತ ಶಾಲೆ ಮತ್ತು ಶಕ್ತಿ ಪ. ಪೂ. ಕಾಲೇಜಿನಲ್ಲಿ ನಡೆಯುತ್ತಿರುವ ಶಕ್ತಿ ಫೆಸ್ಟ್ – 2018 ರ ಉದ್ಘಾಟನಾ ಕಾರ್ಯಕ್ರಮ ಇಂದು ಬೆಳಿಗ್ಗೆ ಶಕ್ತಿ ಶಾಲಾ ಮೈದಾನದಲ್ಲಿ ಜರುಗಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಮಂಗಳೂರು ನಗರ ಉಪ ಪೋಲೀಸ್ ಆಯುಕ್ತ ಶ್ರೀ ಹನುಮಂತರಾಯ ಉದ್ಘಾಟಿಸಿದರು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಮೌಲ್ಯಯುತ ಶಿಕ್ಷಣದ ಅವಶ್ಯಕತೆ ಹೆಚ್ಚು ಇದೆ. ಇಂದು ಪೋಷಕರು ಮಕ್ಕಳು ಹೆಚ್ಚು ಹೆಚ್ಚು ಅಂಕಗಳಿಸಬೇಕೆಂದು ಅವರ ಮನಸ್ಸಿನಲ್ಲಿ ತುಂಬಿಸುತ್ತಿದ್ದಾರೆ. ಇದು ಮಕ್ಕಳಲ್ಲಿ ಒತ್ತಡವನ್ನು ಹೆಚ್ಚು ಮಾಡುತ್ತಿದೆ. ಪಾಠದ ಜೊತೆ ಪಠ್ಯೇತರ ಚಟುವಟಿಕಗಳಿಗೆ ಒತ್ತು ಕೊಡುವ ಶಿಕ್ಷಣ ಮಕ್ಕಳಿಗೆ ಸಣ್ಣ ಪ್ರಾಯದಲ್ಲಿಯೇ ನೀಡಬೇಕೆಂದು ಹೇಳಿದರು. ಆಟ ಪಠ್ಯೇತರ ಚಟುವಟಿಕೆಗಳು ಮಕ್ಕಳಲ್ಲಿ ಹೆಚ್ಚಿನ ಹೊಸ ಹೊಸ ವಿಷಯಗಳಲ್ಲಿ ಕಲಿಯುವ ಆಸಕ್ತಿಯನ್ನು ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ಅಧ್ಯಾಪಕರು ಮತ್ತು ಪೋಷಕರು ಸಮಾನವಾದ ಪಾತ್ರವನ್ನು ನಿರ್ವಹಿಸಬೇಕೆಂದು ಕರೆ ನೀಡಿದರು. ಮಕ್ಕಳಿಗೆ ಸಮಾಜ ಜ್ಞಾನವನ್ನು ನೀಡಬೇಕು. ಇದರಿಂದ ಮಕ್ಕಳ ಭವಿಷ್ಯ ಮತ್ತು ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಕ್ತಿ ಪ. ಪೂ. ಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ ಜಿ.ಎಸ್. ಅವರು ಮಕ್ಕಳಲ್ಲಿ ನಾಯಕತ್ವದ ಗುಣ, ಒಗ್ಗಟ್ಟಿನ ಭಾವನೆ, ಆತ್ಮ ವಿಶ್ವಾಸ, ವ್ಯಕ್ತಿತ್ವದ ನಿರ್ಮಾಣ ಮಾಡಲಿಕ್ಕೆ ಇಂತಹ ಸ್ಪರ್ಧೆಗಳು ಪ್ರಯೋಜನವಾಗುತ್ತದೆ. ಮಕ್ಕಳ ಪೋಷಕರು ಇಂತಹ ಚಟುವಟಿಕೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಹೇಳಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಶರ ಕೆ.ಸಿ ನಾೖಕ್‌, ಟ್ರಸ್ಟಿ ಸಗುಣ ಸಿ ನಾಕ್, ಶಕ್ತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್, ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ಪ್ರಧಾನ ಸಲಹೆಗಾರ ರಮೇಶ್ ಕೆ. ಮತ್ತು ಅಭಿವೃದ್ಧಿ ಅಧಿಕಾರೆ ನಸೀಮ್ ಬಾನು ಉಪಸ್ಥಿತರಿದ್ದರು. ಸ್ವಾಗತವನ್ನು ಅಧ್ಯಾಪಕಿ ರಾಜೇಶ್ವರಿ, ವಂದನಾರ್ಪಣೆಯನ್ನು ಅಧ್ಯಾಪಕಿ ಸ್ವಾತಿ, ಪರಿಚಯವನ್ನು ಅಧ್ಯಾಪಕಿ ಪೂರ್ಣಿಮ ಅವರು ನಿರ್ವಹಿಸಿದರು. ಅಧ್ಯಾಪಕಿ ಅಕ್ಷತ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದ ನಂತರ 1ನೇ ತರಗತಿಯಿಂದ 4 ನೇ ತರಗತಿಯ ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಹಾಗೂ ಕನ್ನಡ ಹಾಡು, ಹಿಂದಿ ಹಾಡು, ಕತೆ ಹೇಳು (ಇಂಗ್ಲಿಷ್), ಕತೆ ಹೇಳು (ಕನ್ನಡ), ಬಣ್ಣ ಹಾಕುವುದು, ಚಿತ್ರಕಲೆ (ಪ್ರಕೃತಿ ಉಳಿಸಿ) ದೇಶಭಕ್ತಿಗೀತೆ, ಕನ್ನಡ ಭಾವಗಾನ ಶ್ರೇಷ್ಠ ವ್ಯಕ್ತಿಗಳನ್ನು ಗುರುತಿಸುವುದು, ಕಸದಿಂದ ರಸ, ಕೊಲಾಝ್ (ಬಣ್ಣದ ಕಾಗದಗಳಿಂದ ರಾಷ್ಟ್ರೀಯ ಚಿಹ್ನೆ ಮತ್ತು ಸಮಾಚಾರ ಪತ್ರಗಳನ್ನು ಉಪಯೋಗಿಸಿ ಶ್ರೇಷ್ಠ ಕ್ರೀಡಾಳುಗಳು, ಸಮೂಹ ನೃತ್ಯ, ಮುಂತಾದ ವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ದೆಗಳು ನಡೆದವು. ಉಡುಪಿ ಮತ್ತು ದ.ಕ ಜಿಲ್ಲೆಯ ವಿವಿಧ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು.