Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

Hindi Diwas Celebration in Shakthi College

ನಗರದ ಶಕ್ತಿ ಪದವಿ ಪೂರ್ವಕಾಲೇಜಿನಲ್ಲಿ 23-09-2019 ರಂದು ’ಹಿಂದಿ ದಿವಸ’ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನುದ್ದೇಶಿಸಿ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಹಿಂದಿ ವಿಭಾಗ ಮುಖ್ಯಸ್ಥೆ ಡಾ. ಸುಮ ಟಿ.ಆರ್‌. ಅವರು ಮಾತನಾಡಿ ಸ್ವಾತಂತ್ರ್ಯ ಸಂಗ್ರಾಮದ ದಿನಗಳಿಂದಲೂ ಹಿಂದಿ ಭಾಷೆಯು ತನ್ನ ಸೇವೆ ಹಾಗೂ ಕೊಡುಗೆ ನೀಡುತ್ತಾ ಬಂದಿದೆ. ವಂದೇ ಮಾತರಂ, ಭಾರತ್ ಮಾತಾಕೀ ಜೈ ನಾನಾ ಸಂದೇಶಗಳು ಹಿಂದಿ ಭಾಷೆಯ ಮೂಲಕವೇ ವ್ಯಕ್ತವಾಗಿವೆ ಎಂದರು.

ಮತ್ತೊಬ್ಬ ಮುಖ್ಯ ಅತಿಥಿ ವಿಶ್ವವಿದ್ಯಾಲಯ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ನಾಗರತ್ನ ರಾವ್‌ ಇವರು ಮಾತನಾಡಿ ಭಾಷೆ ಹರಿಯುವ ನದಿಯಿದ್ದಂತೆ. ನದಿ ಹರಿಯುವಾಗ ಅನೇಕ ಹಳ್ಳಕೊಳ್ಳಗಳನ್ನು ಸೇರಿಸಿಕೊಳ್ಳುವಂತೆ ಅನೇಕ ಭಾಷೆಗಳ ಸತ್ವ ಹೀರಿ ಹಿಂದಿ ಸಮೃದ್ಧ ಭಾಷೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಹಾಗೂ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಮುರಳೀಧರ ನಾೖಕ್‌ ಅವರು ಮಾತನಾಡಿ, ತಾಯಿ ಭಾಷೆಯ ಜೊತೆಗೆ ಎಲ್ಲ ಭಾಷೆಗಳ ಜ್ಞಾನ ಹೊಂದಬೇಕಲ್ಲದೆ ಇತರೆ ಭಾಷೆಗಳನ್ನು ಗೌರವಿಸಬೇಕು ಎಂದು ಹೇಳಿದರು.

ಶಕ್ತಿ ಎಜ್ಯುಕೇಶನ್‌ ಟ್ರಸ್ಟ್‌ನ ಅಧ್ಯಕ್ಷ ಶ್ರೀ ಕೆ.ಸಿ ನಾೖಕ್‌ ಅಧ್ಯಕ್ಷತೆ ವಹಿಸಿ ಎಲ್ಲಾ ಭಾಷೆಗಳಿಗೂ ಸಮಾನ ಮಹತ್ವ ನೀಡಬೇಕೆಂದು ತಿಳಿಸಿದರು. ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಭಾಕರ ಜಿ.ಎಸ್ ಸ್ವಾಗತಿಸಿದರು. ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ನಸೀಮ್ ಬಾನು, ಆಡಳಿತ ಅಧಿಕಾರಿ ಬೈಕಾಡಿ ಜನಾರ್ದನ ಆಚಾರ್, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ವಿದ್ಯಾಕಾಮತ್ ಜಿ. ಮಂಗಳೂರಿನ ವಿದ್ಯಾ ಇಲಾಖೆಯ ಕ್ಲಸ್ಟರ್ ಸಂಪನ್ಮೂಲ ಅಧಿಕಾರಿಗಳಾದ ಶ್ರೀಮತಿ ಕುಸುಮ ಮತ್ತು ಶ್ರೀಮತಿ ಗೀತ ಉಪಸ್ಥಿತರಿದ್ದರು. ವಿದ್ಯಾರ್ಥಿ ಅಭಿಮಾನ್ ವಂದಿಸಿ, ವಿದ್ಯಾರ್ಥಿನಿ ಅಲ್ಮಾಸ್‌ ಕಾರ್ಯಕ್ರಮ ನಿರೂಪಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.