Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಉಡುಪಿ ಶ್ರೀ ಕೃಷ್ಣ ಮಠದ ಭಾವಿ ಪರ್ಯಾಯ ಶಿರೂರು ಮಠದ ಶ್ರೀ ಶ್ರೀ ಶ್ರೀ ವೇದ ವರ್ಧನ ತೀರ್ಥ ಸ್ವಾಮೀಜಿಯವರಿಗೆ ಶಕ್ತಿ ವಿದ್ಯಾ ಸಂಸ್ಥೆಯಿಂದ ಅದ್ದೂರಿ ಸ್ವಾಗತ

ಶಕ್ತಿನಗರದ ಶಕ್ತಿ ರೆಸಿಡೆನ್ಸಿಯಲ್ ಶಾಲೆ ಮತ್ತು ಶಕ್ತಿ ಪಪೂ ಕಾಲೇಜಿಗೆ ಇಂದು ಶಿರೂರು ಮಠದ ಶ್ರೀ ಶ್ರೀ ಶ್ರೀ ವೇದ ವರ್ಧನ ತೀರ್ಥ ಸ್ವಾಮೀಜಿಯವರು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯಲ್ಲಿರುವ ಪರ್ಯಾಯದಲ್ಲಿ ಜನವರಿ 18 ರಂದು ಸರ್ವಾಜ್ಞ ಪೀಠಕ್ಕೇರುವ ಸಂದರ್ಭದಲ್ಲಿ ಸಂಸ್ಥೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಆಶಿರ್ವಾಚನವನ್ನು ನೀಡುತ್ತಾ,  ದಾನಗಳಲ್ಲಿ ಅನ್ನದಾನ ಶ್ರೇಷ್ಠ ದಾನ ವಿದ್ಯಾದಾನ ಮಹಾದಾನ ನಾವೆಲ್ಲಾ ಶಾಲೆಗೆ ಬರುವ ಉದ್ದೇಶ ಒಟ್ಟಾಗಿ ಕಲಿಯುವುದಕ್ಕೆ. ನಾವು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪ್ರಾಮಾಣಿಕ ಪ್ರಯತ್ನದ ಜೊತೆ ಆ ಭಗವಂತನಲ್ಲಿ ಪ್ರಾರ್ಥನೆ ಮಾಡಬೇಕು. ರಜಾ ದಿನಗಳಲ್ಲಿ ಪ್ರವಾಸಕ್ಕೆಂದು ಬೇರೆಲ್ಲೋ ಹೋಗುವ ಬದಲು ಉಡುಪಿಯ ಶ್ರೀ ಕೃಷ್ಣನ ಸನ್ನಿಧಾನಕ್ಕೆ ಬಂದು ಕೃಷ್ಣನ ಸೇವೆ ಮಾಡಿ ಭಗವಂತನ ಕೃಪೆಗೆ ಪಾತ್ರರಾಗಿ. ಜನವರಿ 18 ರಂದು ನಡೆಯುವ ಪರ್ಯಾಯೋತ್ಸವದಲ್ಲಿ ತಾವೆಲ್ಲರೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಆಮಂತ್ರಿಸುತ್ತ ಮಕ್ಕಳಿಗೆ ಶುಭ ಕೋರಿದರು.

ಪ್ರಾರಂಭದಲ್ಲಿ ಶಾಲೆಯ ಶಿಕ್ಷಕೀಯರು ಪೂರ್ಣಕುಂಭದ ಸ್ವಾಗತವನ್ನು ಕೋರಿದರು. ಶಾಲೆಗೆ ಆಗಮಿಸಿದ ಶ್ರೀಗಳು ಶ್ರೀಕೃಷ್ಣನಿಗೆ ಪುಪ್ಪರ್ಚನೆ ಮಾಡಿದರು. ತದ ನಂತರ ವಿದ್ಯಾರ್ಥಿಗಳ ಬೆಳಗ್ಗಿನ ಪ್ರಾರ್ಥನೆಯಲ್ಲಿ ಭಾಗವಹಿಸಿದರು. ಸಂಸ್ಥೆಯ ಸಂಸ್ಥಾಪಕರಾದ ಡಾ.ಕೆ.ಸಿ. ನಾೖಕ್‌ ಮತ್ತು ಅವರ ಧರ್ಮಪತ್ನಿ ಸಂಸ್ಥೆಯ ಟ್ರಸ್ಟಿಯಾದ ಶ್ರೀಮತಿ ಸಗುಣ ಸಿ ನಾೖಕ್‌ ಅವರು ಸ್ವಾಮೀಜಿಯವರಿಗೆ ಶಾಲು ಹೊದಿಸಿ ಫಲಪುಷ್ಪವನ್ನು ನೀಡಿದರು. ನಂತರ ಪೂಜ್ಯ ಶ್ರೀಗಳು ಸಂಸ್ಥೆಯ ಪ್ರಮುಖರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಂತ್ರಕ್ಷತೆಯನ್ನು ನೀಡಿ ಆಶಿರ್ವಾದಿಸಿದರು.

ಈ ಸಂದರ್ಭದಲ್ಲಿ ತುಳುನಾಡು ಎಜ್ಯುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿಗಳಾದ ಪ್ರದೀಪ ಕುಮಾರ್ ಕಲ್ಕೂರ, ತುಳುನಾಡು ಎಜುಕೇಷನ್ ಟ್ರಸ್ಟ್‌ನ ಟ್ರಷ್ಟಿ ಸುಧಾಕರ ರಾವ್ ಪೇಜಾವರ, ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಾ ಕೆ. ಸಿ. ನಾೖಕ್‌, ಶಕ್ತಿ ವಿದ್ಯಾ ಸಂಸ್ಥೆಯ ಟ್ರಸ್ಟಿ ಶ್ರೀಮತಿ ಸಗುಣ ಸಿ. ನಾೖಕ್‌, ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ, ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಮೂರ್ತಿ, ಶಕ್ತಿ ವಸತಿ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಬಬಿತಾ ಸೂರಜ್ ಉಪಸ್ಥಿತರಿದ್ದರು. ಶಿಕ್ಷಕ ಶರಣಪ್ಪ ಸ್ವಾಗತಿಸಿದರು.