Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

Faculty Development Programme At Shakthi

“Teaching should happen in School. The teaching will be effective only when the teacher and the learner are together. The child’s inter-personal communication skills and the peer group influence could be experienced not at home but in school alone. No doubt the child is glued to the technology today, but online teaching doesn’t mean online learning. This has affected the physical, mental, social and psychological health of a child. Children should come back to school and the best way of welcoming them is by following COVID appropriate behaviour” said Dr. B. Unnikrishnan Additional Dean and Professor Department of Community Medicine, KMC, Mangaluru inaugurating a 3 days Teacher Effective Training programme to the faculty of Shakthiand briefed on the strategies to be deployed post pandemic in School.

“We need to wear mask not to protect ourselves but others, we take vaccines not to protect us but the people around us. Vaccine does not prevent the occurrence of a disease but controls the severity. Getting a vaccine reduces the chances of hospitalisation. Children get infected but may not show any symptom but they are likely to infect the elderly people in the family. Child to Parent education is to be adopted. Teach the child the appropriate behaviour and in turn the parent get educated through the child” he concluded.

Prof. T.Rajaram Rao in his Presidential Address stated that “The teacher training is something which is necessary to refresh ourselves. The teacher as a friend, guide, mentor and sometimes as a parent has lots of responsibilities to deliver correct information for which one has to upgrade himself. The training of teachers must go on from time to time in between their jobs, to initiate them in newer technologies so that they can model that out for the students. Training sessions are needed to help the teachers learn or create new teaching strategies which will bring back the interest of their students in the classrooms and encourage learning.

Dr. Shikaripura Krishnamurthy, Director, Abhiyanam, Organisation for Research and Training in HRD, Mangaluru and his team involving Sri Parameshwara Hegde, Sri Pushparaj and Smt. Veena Sreenivas are the Resource people.
Dr.K.C.Naik, Administrator, Ramesh K, Chief Advisor, Vidya Kamath G, Principal Shakthi Residential School, Neema Saxena, Co-ordinator Shakthi Pre-School were present on this occasion along with 40 trainees of Shakthi Group of institutions.

Prakyath Rai, Institute Development Officer proposed the welcome address and Harshitha, Lecturer in English compered the show and proposed the vote of thanks.

ಶಕ್ತಿ ವಿದ್ಯಾ ಸಂಸ್ಥೆಯ ಅಧ್ಯಾಪಕರಿಗೆ ಆಯೋಜಿಸಲಾದ 3 ದಿನಗಳ ಬೋಧನಾ ಕಾರ್ಯಾಗಾರದ ಉದ್ಘಾಟನೆ

ಶಾಲೆಯಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳು ಒಟ್ಟಿಗೆ ಇದ್ದಾಗ ಮಾತ್ರ ಬೋಧನೆ ಪರಿಣಾಮಕಾರಿ – ಡಾ. ಬಿ. ಉನ್ನಿಕೃಷ್ಣನ್

ಮಂಗಳೂರು ಜು. 27 : ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯ ರೇಷ್ಮಾ ಮೆಮೋರಿಯಲ್ ಆಡಿಟೋರಿಯಮ್‌ನಲ್ಲಿ 3 ದಿನಗಳ ಕಾಲ ಶಕ್ತಿ ವಿದ್ಯಾ ಸಂಸ್ಥೆಯ ಅಧ್ಯಾಪಕರಿಗೆ ಆಯೋಜಿಸಲಾದ 3 ದಿನಗಳ ಬೋಧನಾ ಕಾರ್ಯಗಾರವನ್ನು ಮಂಗಳೂರಿನ ಕೆಎಂಸಿ ವೈದ್ಯಕೀಯ ಕಾಲೇಜಿನ ಹೆಚ್ಚುವರಿ ಡೀನ್ ಹಾಗೂ ಸಮುದಾಯ ಔಷಧ ವಿಭಾಗದ ಪ್ರಾಧ್ಯಾಪಕರಾದ ಡಾ. ಬಿ ಉನ್ನಿಕೃಷ್ಣನ್ ದೀಪ ಬೆಳಗಿಸುವುದರ ಮೂಲಕ ಇಂದು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಶಾಲೆಯು ಪ್ರಾರಂಭವಾಗಬೇಕು. ಅಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿ ಒಟ್ಟಿಗೆ ಇದ್ದಾಗ ಮಾತ್ರ ಬೋಧನೆ ಪರಿಣಾಮಕಾರಿಯಾಗಲು ಸಾಧ್ಯ. ಮಗು ವೈಯಕ್ತಿಕ ಸಂವಹನ ಕೌಶಲ್ಯ ಮತ್ತು ಲವಲವಿಕೆಯನ್ನು ಮನೆಯಲ್ಲಿ ಅನುಭವಿಸಲು ಸಾಧ್ಯವಿಲ್ಲ ಅದು ಶಾಲೆಯಲ್ಲಿ ಮಾತ್ರ ಅನುಭವಿಸಲು ಸಾಧ್ಯವಿದೆ. ಇಂದು ಮಗುವನ್ನು ತಂತ್ರಜ್ಞಾನಕ್ಕೆ ಅಂಟಿಸಲಾಗಿದೆ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ಆನ್‌ಲೈನ್ ಬೋಧನೆಯು ಕೇವಲ ಆನ್‌ಲೈನ್‌ಗೆ ಮಾತ್ರ ಸೀಮಿತವಾಗಿದೆ. ಇದರಿಂದ ಮಗುವಿನ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು.

ಮಕ್ಕಳು ಮತ್ತೆ ಶಾಲೆಗೆ ಬರಬೇಕು ಮತ್ತು ಅವರನ್ನು ಸ್ವಾಗತಿಸುವ ಅತ್ಯುತ್ತಮ ಮಾರ್ಗವೆಂದರೆ ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸುವುದು. ಶಕ್ತಿ ವಿದ್ಯಾಸಂಸ್ಥೆಯಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಅಳವಡಿಸುವ ಕುರಿತಂತೆ ಶಿಕ್ಷಕರಿಗೆ ಹಾಗೂ ಆಡಳಿತ ಮಂಡಳಿಗೆ ಹೆಚ್ಚಿನ ಮಾರ್ಗದರ್ಶನವನ್ನು ನೀಡಿದರು.
ನಾವು ಮಾಸ್ಕ್ ಧರಿಸುವುದರಿಂದ ನಮ್ಮನ್ನು ರಕ್ಷಣೆ ಮಾಡುವುದರ ಜೊತೆಗೆ ಇತರರನ್ನು ರಕ್ಷಿಸಬಹುದು, ಲಸಿಕೆಯನ್ನು ಪಡೆಯುವುದು ಸಹ ಇತರರನ್ನು ರಕ್ಷಿಸಲು ಅನುಕೂಲವಾಗುತ್ತದೆ. ಲಸಿಕೆ ಪಡೆಯುವುದರಿಂದ ಕೋವಿಡ್ ಬರುವುದನ್ನು ತಡೆಯಲಾಗದಿದ್ದರೂ, ಅದರ ತೀವ್ರತೆಯನ್ನು ನಿಯಂತ್ರಿಸುವುದರ ಜೊತೆಗೆ ಆಸ್ಪತ್ರೆಗೆ ದಾಖಲಾಗುವುದನ್ನು ತಡೆಯಬಹುದು. ಮಕ್ಕಳಿಗೆ ಸೋಂಕು ತಗಲಿದ್ದರೂ ಯಾವುದೇ ರೋಗ ಲಕ್ಷಣಗಳು ಕಾಣದಿರಬಹುದು. ಆದ್ದರಿಂದ ಶಾಲೆಯಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಇದರಿಂದ ಭೌತಿಕ ತರಗತಿಗೆ ಸರಕಾರ ಅನುಮತಿ ನೀಡಿದಾಗ ನಾವು ಶಾಲೆಯನ್ನು ಯಶಸ್ವಿಯಾಗಿ ನಡೆಸಬಹುದು. ಈ ಹಿನ್ನಲೆಯಲ್ಲಿ ಶಿಕ್ಷಕರು ಕೋವಿಡ್ ಮಾರ್ಗ ಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದಾಗ, ಮಗು ಅದನ್ನು ಪಾಲನೆ ಮಾಡುವುದರ ಜೊತೆಗೆ ಮನೆಯಲ್ಲಿ ಪೋಷಕರು ಪಾಲನೆ ಮಾಡುವ ಹಾಗೆ ಮಾಡುತ್ತದೆ. ಆದ್ದರಿಂದ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಕ್ತಿ ಪ ಪೂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಟಿ. ರಾಜರಾಮ್ ರಾವ್ ಅವರು ಶಿಕ್ಷಕರ ತರಭೇತಿಯು ಶಿಕ್ಷಕರನ್ನು ಹೊಸ ವಿಧಾನಕ್ಕೆ ಕರೆದು ಹೋಗುವ ಉತ್ತಮ ವಿಧಾನವಾಗಿದೆ. ಶಿಕ್ಷಕನು ಸ್ನೇಹಿತನಾಗಿ, ಮಾರ್ಗದರ್ಶಕನಾಗಿ ಮತ್ತು ಕೆಲವೊಮ್ಮೆ ಪೋಷಕನಾಗಿ ತಮ್ಮ ಜವಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಇದಕ್ಕಾಗಿ ನಾವು ನಮ್ಮನ್ನು ಯಾವಾಗಲೂ ಉನ್ನತೀಕರಿಸುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು. ಕಾಲ ಕಾಲಕ್ಕೆ ನಾವು ಹೊಸತನವನ್ನು ತಂತ್ರಜ್ಞಾನ ಮಾಹಿತಿಯೊಂದಿಗೆ ವಿದ್ಯಾರ್ಥಿಗಳಿಗೆ ನೀಡಬೇಕು. ವಿದ್ಯಾರ್ಥಿಗಳ ಆಸಕ್ತಿಯನ್ನು ಮರಳಿ ತರುವುದು ಹಾಗೂ ಕಲಿಕೆಯನ್ನು ಉತ್ತೇಜಿಸುವ ಹೊಸ ಬೋಧನಾ ತಂತ್ರವನ್ನು ಕಲಿಸಲು ಇಂತಹ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಈ ಬೋಧನಾ ಕಾರ್ಯಗಾರವನ್ನು ಅಭಿಯಾನಂ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಸಂಸ್ಥೆಯ ನಿರ್ದೇಶಕ ಡಾ| ಶಿಕಾರಿಪುರ ಕೃಷ್ಣಮೂರ್ತಿ, ಶ್ರೀ ಪರಮೇಶ್ವರ ಹೆಗ್ಡೆ, ಶ್ರೀ ಪುಷ್ಪರಾಜ್ ಮತ್ತು ಶ್ರೀಮತಿ ವೀಣಾ ಶ್ರೀನಿವಾಸ ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಅಭಿಯಾನಂ ನಿರ್ದೇಶಕ ಡಾ| ಶಿಕಾರಿಪುರ ಕೃಷ್ಣಮೂರ್ತಿ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಡಾ| ಕೆ.ಸಿ ನಾೖಕ್‌, ಪ್ರಧಾನ ಸಲಹೆಗಾರ ರಮೇಶ್ ಕೆ. ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಂಚಾಲಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು.

ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ ಸ್ವಾಗತಿಸಿ, ಆಂಗ್ಲ ಉಪನ್ಯಾಸಕಿ ಕು. ಹರ್ಷಿತ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದರು.