ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ. ಬಬಿತಾ ಸೂರಜ್‌ರವರು ಡೈನಾಮಿಕ್ ಸ್ಕೂಲ್ ಅವಾರ್ಡ್ 2024 ನ್ನು ದಿನಾಂಕ 10-12-2024 ರಂದು ಬೆಂಗಳೂರಿನ ದಿ ತಾಜ್‌ನಲ್ಲಿ ಎಜ್ಯುಕೇಶನ್ ಟುಡೇ ಆಯೋಜಿಸಿದ್ದ ಕೆ 12 ಲೀಡರ್‌ಶಿಪ್ ಮತ್ತು ಇಂಡಿಯಾ ಸ್ಕೂಲ್ ಮೆರಿಟ್ ಅವಾರ್ಡ್ಸ್ ಸಮಾರಂಭದಲ್ಲಿ ಸ್ವೀಕರಿಸಿದರು.
ಶಾಲೆಯ ಸಮಗ್ರ ಅಭಿವೃದ್ಧಿಯಲ್ಲಿನ ಶ್ರೇಷ್ಠತೆಗಾಗಿ ಕೆ 12 ಲೀಡರ್‌ಶಿಪ್ ಮತ್ತು ಇಂಡಿಯಾ ಸ್ಕೂಲ್ ಮೆರಿಟ್ ಅವಾರ್ಡ್ಸ್‌ನ 12 ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಶಕ್ತಿ ವಸತಿ ಶಾಲೆಗೆ ” ಡೈನಾಮಿಕ್ ಸ್ಕೂಲ್ ಅವಾರ್ಡ್ 2024″ ಎಂಬ ಪ್ರತಿಷ್ಠಿತ ಮಾನ್ಯತೆ ಪ್ರಶಸ್ತಿ ದೊರೆತಿದೆ. ಈ ಸಮ್ಮೇಳನದಲ್ಲಿ ಭಾರತದಾದ್ಯಂತ ಮುನ್ನೂರಕ್ಕೂ ಹೆಚ್ಚು ಪ್ರಾಂಶುಪಾಲರು, ನಿರ್ದೇಶಕರು ಹಾಗೂ ಖ್ಯಾತ ಶಿಕ್ಷಣತಜ್ಞರು ಭಾಗವಹಿಸಿದ್ದರು. ಶ್ರೀಮತಿ ಬಬಿತಾ ಸೂರಜ್ ಅವರು ವಿವಿಧ ಶಿಕ್ಷಣ ಕ್ಷೇತ್ರಗಳ ಜನಪ್ರಿಯ ಶಿಕ್ಷಣತಜ್ಞರು ಪ್ರಾರಂಭಿಸಿದ ಪ್ಯಾನೆಲ್ ಚರ್ಚೆಗಳಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೖಕ್, ಕಾರ್ಯದರ್ಶಿ ಶ್ರೀ ಸಂಜಿತ್ ನಾೖಕ್. ಪ್ರಧಾನ ಸಲಹೆಗಾರರಾದ ಶ್ರೀ ರಮೇಶ್ ಕೆ. ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಹೆಚ್ ಮತ್ತು ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿದರು.