Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಆಯುಧಪೂಜಾ ಕಾರ್ಯಕ್ರಮ

ಮಂಗಳೂರು ಅ. 23 : ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಯಲ್ಲಿ ಇಂದು ಆಯುಧಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿತು. ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ವೆಂಕಟರಮಣ ಭಟ್ ನೇತೃತ್ವದಲ್ಲಿ ಆಯುಧ ಪೂಜಾ ಕಾರ್ಯಕ್ರಮವು ನೆರವೇರಿತು.

ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೖಕ್‌ ಮಾತನಾಡಿ ನಾವು ಈಗಾಗಲೇ 11 ಶಾಲಾ ವಾಹನಗಳನ್ನು ಹೊಂದಿದ್ದು ಇವುಗಳಿಗೆ ಯಾವುದೇ ತೊಂದರೆಗಳು ಬರಬಾರದು ಹಾಗೂ ಇಲ್ಲಿ ಓದುವ ವಿದ್ಯಾರ್ಥಿಗಳಿಗೆ ಕೆಲಸ ಮಾಡುವ ಆಧ್ಯಾಪಕರಿಗೆ ಇತರೆ ಎಲ್ಲ ಉದ್ಯೋಗಿಗಳಿಗೆ ಈ ದಸರಾ ಹಬ್ಬ ಶುಭವನ್ನು ಪ್ರಾಪ್ತಿ ಮಾಡಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ., ಉಪ ಪ್ರಾಂಶುಪಾಲ ದೀಪಕ್ ಕುಡ್ವ ಸೇರಿದಂತೆ ಅನೇಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.