Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

Annual Sports Day 2024

ಮಂಗಳೂರು: ಶಕ್ತಿ ವಸತಿ ಶಾಲೆ, ಶಕ್ತಿನಗರ ಮಂಗಳೂರು ಇಲ್ಲಿ ನವೆಂಬರ್ 22 ರಂದು ಶಕ್ತಿ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ವಾರ್ಷಿಕ ಕ್ರೀಡಾಕೂಟವು ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಮತಿ ರಾಜಲಕ್ಷ್ಮಿ ಕೆ., ಪ್ರಾಂಶುಪಾಲರು ಹಾಗೂ ಜಿಲ್ಲಾ ಉಪನಿರ್ದೇಶಕರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಗಳೂರು ಇವರು ಶಾಂತಿ ಮತ್ತು ಪ್ರೀತಿಯ ಸಂಕೇತವಾದ ಪಾರಿವಾಳಗಳನ್ನು ಹಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇವರೊಂದಿಗೆ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ಶ್ರೀ ರಮೇಶ್ ಕೆ, ಶಕ್ತಿ ವಸತಿಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಬಬಿತಾ ಸೂರಜ್ ಹಾಗೂ ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಂಯೋಜಕಿ ಶ್ರೀಮತಿ ಸುಷ್ಮಾ ಸತೀಶ್ ಜೊತೆಗೂಡಿದರು.

ಬಳಿಕ ಮಾತನಾಡಿದ ಶ್ರೀಮತಿ ರಾಜಲಕ್ಷ್ಮಿ ಕೆ. ಇವರು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಹಿತ ದೃಷ್ಟಿಯಲ್ಲಿ ಕ್ರೀಡೆಯ ಪಾತ್ರವು ಮಹತ್ತರವಾದದ್ದು, ಹಾಗಾಗಿ ದಿನದಲ್ಲಿ ಕಿಂಚಿತ್ತು ಸಮಯವನ್ನಾದರೂ ಆಟಕ್ಕೋಸ್ಕರ ಮೀಸಲಿಡಬೇಕು ಎಂದು ಹೇಳಿದರು. ಶಕ್ತಿ ಶಾಲೆಯ ವಿದಾರ್ಥಿಗಳನ್ನು ಮುಂದೊಂದು ದಿನ ಒಲಿಂಪಿಕ್ ಕ್ರೀಡಾಕೂಟದಲ್ಲಿ ನೋಡುವಂತಾಗಲಿ ಎಂದು ಇವರು ಶುಭ ಹಾರೈಸಿದರು.

ಶಕ್ತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಬಬಿತಾ ಸೂರಜ್ ಅವರು ತಮ್ಮ ಹಿತನುಡಿಗಳನ್ನಾಡಿ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು. ಬಳಿಕ ಆರಂಭಗೊಂಡ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಶಿಸ್ತು ಬದ್ಧ ಪದ್ರರ್ಶನ, ನಡಿಗೆ ಹಾಗೂ ಕವಾಯತು ಆಕರ್ಷಣೀಯವಾಗಿತ್ತು. ಗೋಣಿಚೀಲ ಓಟ, ಕಪ್ಪೆಜಿಗಿತ, ಲಿಂಬೆ ಚಮಚ, ಓಟ ಸ್ಪರ್ಧೆ ಹೀಗೆ ಹಲವಾರು ಆಟೋಟಗಳು ಈ ಕ್ರೀಡಾಕೂಟದಲ್ಲಿ ವೀಕ್ಷಕರ ಗಮನಸೆಳೆದವು.

ಶಾಲಾ ಶಿಕ್ಷಕಿ ಶ್ರೀಮತಿ ಶರ್ವಾನಿ ಕಾರ್ಯಕ್ರಮ ನಿರೂಪಿಸಿದರು. 1 ಹಾಗೂ 2 ನೇ ತರಗತಿಯ ಸಂಯೋಜಕಿ ಶ್ರೀಮತಿ ಪ್ರಿಯದರ್ಶಿನಿ ವಂದಿಸಿದರು. ಶಾಲೆಯ 3, 4 ಹಾಗೂ 5 ನೇ ತರಗತಿಯ ಸಂಯೋಜಕಿ ಶ್ರೀಮತಿ ಅನ್ನೆಟ್ ಸಹಕರಿಸಿದರು.