Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಶಕ್ತಿ ಕ್ಯಾನ್ ಕ್ರಿಯೇಟ್ ಶಿಬಿರದ ಮೂಲಕ ಮಕ್ಕಳು ಸೃಜನಶೀಲರಾಗಲು ಸಾಧ್ಯವಾಗಿದೆ – ಸಂಸದ ನಳಿನ್ ಕುಮಾರ್ ಕಟೀಲ್

ಮಂಗಳೂರು : ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಆಯೋಜಿಸಲಾಗಿರುವ 6 ದಿನದ ಶಕ್ತಿ ಕ್ಯಾನ್ ಕ್ರಿಯೇಟ್ ಶಿಬಿರದ ಸಮಾರೋಪ ಸಮಾರಂಭವು ಇಂದು ಶಕ್ತಿ ವಸತಿ ಶಾಲೆಯ ಮೈದಾನದಲ್ಲಿ ಜರುಗಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ದ.ಕ ಜಿಲ್ಲೆಯ ಸಂಸದರಾದ ಶ್ರೀ ನಳೀನ್ ಕುಮಾರ್ ಕಟೀಲು ಮಾತನಾಡಿ ಮಕ್ಕಳಲ್ಲಿ ಕ್ರಿಯಾತ್ಮಕ ಹಾಗೂ ಸೃಜನಾತ್ಮಕವಾದ ಬದಲಾವಣೆಯಾಗಲು ಶಕ್ತಿ ಕ್ಯಾನ್ ಕ್ರಿಯೇಟ್ ಸಹಾಯಕವಾಗಿದೆ. ಮಕ್ಕಳು ಕ್ರಿಯಾತ್ಮಕವಾಗಿ ತಯಾರು ಮಾಡಿರುವ ವಸ್ತುಗಳ ಪ್ರದರ್ಶನ ನೋಡಿದಾಗ ಶಿಬಿರವು ಯಶಸ್ವಿಯಾಗಿದೆ ಎಂಬುವುದರಲ್ಲಿ ಸಂದೇಹವಿಲ್ಲ. ಅನೇಕ ಶಾಲೆಯ ಮಕ್ಕಳು ಒಂದು ಕಡೆ ಸೇರಿದಾಗ ಅವರು ಸ್ನೇಹಿತರಾಗುತ್ತಾರೆ ಇದು ಅವರ ಬದಲಾವಣೆಗೆ ಮಾರ್ಗದರ್ಶನ ನೀಡುತ್ತದೆ ಎಂದು ಹೇಳಿದರು. ಇಂತಹ ವಿಶಾಲವಾದ ಜಾಗದಲ್ಲಿ ಶಿಬಿರವನ್ನು ಆಯೋಜಿಸಿರುವ ಶಕ್ತಿ ವಸತಿ ಶಾಲೆಯ ಆಡಳಿತ ಮಂಡಳಿಯ ಪ್ರಯತ್ನವನ್ನು ಸಂಸದರು ಅಭಿನಂದಿಸಿದರು.

ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಶ್ರೀ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ ಇಂತಹ ಶಿಬಿರವು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ವೇದಿಕೆಯಾಗಿದೆ. ಪೋಷಕರು ಮಕ್ಕಳ ಜೀವನವನ್ನು ರೂಪಿಸಲು ಇಂತಹ ಶಿಬಿರಕ್ಕೆ ಮಕ್ಕಳನ್ನು ಕಳುಹಿಸುವುದು ಅತಿ ಅವಶ್ಯ ಎಂದು ಹೇಳಿದರು. ಶಕ್ತಿ ಕ್ಯಾನ್ ಕ್ರಿಯೇಟ್ ನಿಜವಾಗಿಯು ಮಕ್ಕಳಲ್ಲಿ ಸೃಜನಾತ್ಮಕ ಬದಲಾವಣೆಯನ್ನು ಮಾಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಹೆಚ್ಚು ದಿನಗಳ ಶಿಬಿರವನ್ನು ಆಯೋಜಿಸಿ ಎಂದು ಕರೆ ನೀಡಿದರು.

ಶಕ್ತಿ ಕ್ಯಾನ್ ಕ್ರಿಯೇಟ್‌ನ ಸಮಾರೋಪ ಭಾಷಣವನ್ನು ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಮಾಡಿದರು. ಅವರು ಸಮಾರೋಪದಲ್ಲಿ ಮಾತನಾಡುತ್ತಾ ವಿದ್ಯಾರ್ಥಿಗಳು ಇಲ್ಲಿ ಕಲಿತಿರುವ ವಿಷಯಗಳನ್ನು ಜೀವನದಲ್ಲಿ ರೂಡಿಸಿಕೊಳ್ಳಬೇಕು. ಆಗ ಈ ಶಿಬಿರ ಯಶಸ್ವಿಯಾಗಿದೆ ಎಂದು ನಾವು ಭಾವಿಸುತ್ತೇವೆ. ಪ್ರತಿಯೊಬ್ಬರಲ್ಲಿಯು ಬದಲಾವಣೆಯಾಗಬೇಕು. ಕಲಿತಿರುವ ವಿಷಯವನ್ನು ನಾವು ಮನವರಿಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಡಳಿತ ಮಂಡಳಿ ಸದಸ್ಯೆ ಶ್ರೀಮತಿ ಸಗುಣ ಸಿ. ನಾಕ್ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿದರು. ೬ ದಿನದ ಶಿಬಿರದ ವರದಿಯನ್ನು ಅಭಿವೃದ್ಧಿ ಅಧಿಕಾರಿ ನಸೀಮ್ ಬಾನು ವಾಚಿಸಿದರು. ವೇದಿಕೆಯಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಕೆ. ಸಿ. ನಾಕ್, ಶಕ್ತಿ ಎಜ್ಯಕೇಶನ್ ಟ್ರಸ್ಟ್‌ನ ಟ್ರಸ್ಟಿ ಡಾ. ಮುರುಳೀಧರ್ ನಾಕ್, ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಶ್ರೀ ಪ್ರಭಾಕರ ಜಿ.ಎಸ್, ಅಭಿವೃದ್ಧಿ ಅಧಿಕಾರಿ ನಸೀಮ್ ಬಾನು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ವೈಷ್ಣವಿ ಕುಲಾಲ್ ಮತ್ತು ಗೌತಮಿ ಎಸ್. ಕುಲಾಲ್ ನಿರೂಪಿಸಿದರು. ಪ್ರಾರ್ಥನೆಯನ್ನು ಭುವನ, ಸ್ವಾಗತವನ್ನು ತಸ್ಸವಿ ಹಾಗೂ ಧನ್ಯವಾದವನ್ನು ಮೇಘನಾ ಮಾಡಿದರು.