Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಆಮಂತ್ರಣ : ಶಕ್ತಿ ರಿಸರ್ಚ್ & ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನ ಉದ್ಘಾಟನಾ ಸಮಾರಂಭ

ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಶಕ್ತಿ ರಿಸರ್ಚ್ & ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನ ಉದ್ಘಾಟನಾ ಸಮಾರಂಭವು ಹೆಚ್‌ಪಿಸಿಎಲ್‌ನ ಸಿಎಸ್‌ಆರ್‌ನ ಸಹಯೋಗದೊಂದಿಗೆ ದಿನಾಂಕ 19-9-2026  ರಂದು ಬೆಳಿಗ್ಗೆ11.30 ಕ್ಕೆ ಉದ್ಘಾಟನೆಗೊಳ್ಳಲಿದೆ.

ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ತರಬೇತಿ, ಸಂಶೋಧನೆ ಹಾಗೂ ನವೀನ ಕಲಿಕಾ ವಿಧಾನಗಳನ್ನು ಉತ್ತೇಜಿಸುವ ಉದ್ದೇಶದಿಂದ ಸ್ಥಾಪಿಸಲಾದ ಶಕ್ತಿ ರಿಸರ್ಚ್ & ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನ ಕಟ್ಟಡದ ಉದ್ಘಾಟನೆಯನ್ನು ಕ್ಯಾ. ಬ್ರಿಜೇಶ್ ಚೌಟ ಮಾನ್ಯ ಸಂಸದರು ನೆರವೇರಿಸಲಿದ್ದಾರೆ. ಇದೇ ಕಟ್ಟಡದ ಕಂಪ್ಯೂಟರ್ ಪ್ರಯೋಗಾಲಯವನ್ನು ಶ್ರೀ ನಳಿನ್ ಕುಮಾರ್ ಕಟೀಲ್ ಮಾಜಿ ಸಂಸದರು ನೆರವೇರಿಸಲಿದ್ದಾರೆ. ಶ್ರೀ ಡಿ ವೇದವ್ಯಾಸ್ ಕಾಮತ್ ಮಾನ್ಯ ಶಾಸಕರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಹೆಚ್‌ಪಿಸಿಎಲ್ ನಿರ್ದೇಶಕರು – ಹೆಚ್‌ಆರ್ ಶ್ರೀ ಕೆ.ಎಸ್ ಶೆಟ್ಟಿಯವರು ಶಕ್ತಿ ರಿಸರ್ಚ್ ಮತ್ತು ಟ್ರೈನಿಂಗ್ ಇನ್‌ಸ್ಟಿಟ್ಯೂಟನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಕ್ತಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಡಾ. ಕೆ.ಸಿ. ನಾೖಕ್‌ ವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸಂಜಿತ್ ನಾೖಕ್‌, ಪ್ರಧಾನ ಸಲಹೆಗಾರ ರಮೇಶ್ ಕೆ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಮತ್ತು ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ಸುರೇಖ ಆರ್ ಭಟ್ ಉಪಸ್ಥಿರಿರುತ್ತಾರೆ.