Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ವಿದ್ಯಾಭಾರತಿ ಜಿಲ್ಲಾ ಮಟ್ಟದ ಈಜು ಹಾಗೂ ಟೇಬಲ್ ಟೆನ್ನಿಸ್ ಸ್ಪರ್ಧಾ ಕೂಟದ ಉದ್ಘಾಟನೆ

ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ವಿದ್ಯಾ ಸಂಸ್ಥೆಯಲ್ಲಿನ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ವಿದ್ಯಾಭಾರತಿ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಹಾಗೂ ಈಜು ಸ್ಪರ್ಧೆಗಳ ಸ್ಪರ್ಧಾ ಕೂಟ ಉದ್ಘಾಟನೆಗೊಂಡಿತು.

ಈ ಸ್ಪರ್ಧಾಕೂಟದ ಉದ್ಘಾಟಕರಾಗಿ ಆಗಮಿಸಿದ್ದ ಗೃಹ ಲಕ್ಷ್ಮಿ ಹೌಸಿಂಗ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಇದರ ಅಧ್ಯಕ್ಷರಾಗಿರುವ ಶ್ರೀ ಬಾಲಕೃಷ್ಣ ಶರ್ಮ ಏನ್., ವಕೀಲರು ದೀಪ ಬೆಳಗಿಸುವ ಮೂಲಕ ಸ್ಪರ್ಧಾಕೂಟವನ್ನು ಉದ್ಘಾಟಿಸಿದರು. ನಂತರ ಟೇಬಲ್ ಟೆನ್ನಿಸ್ ಅಂಕಣದಲ್ಲಿ ಆಟ ಆಡುವ ಮೂಲಕ ಮತ್ತು ಮಂಗಳೂರಿನ ಪವಿತ್ರ ಕ್ಷೇತ್ರವಾದ ಕದ್ರಿ ಮಂಜುನಾಥ ದೇವಸ್ಥಾನದಿಂದ ತಂದಿದ್ದ ಪವಿತ್ರ ತೀರ್ಥ ಜಲವನ್ನು ಸಂಸ್ಥೆಯ ಸರೋಶ್ ಈಜು ಕೊಳದಲ್ಲಿ ಪ್ರೊಕ್ಷಣೆ ಮಾಡುವ ಮೂಲಕ ಸ್ಪರ್ಧಾ ಕೂಟಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು “ಶಕ್ತಿ ವಿದ್ಯಾ ಸಂಸ್ಥೆಯ ಪ್ರಾರ್ಥನೆ ಮತ್ತು ಶಿಸ್ತನ್ನು ನೋಡಿದ ಮೇಲೆ ನನಗೆ ದೇವಸ್ಥಾನಕ್ಕೆ ಬಂದ ಅನುಭವ ಉಂಟಾಯಿತು. ಆಧುನಿಕ ಕಾಲಮಾನಕ್ಕೆ ತಕ್ಕಂತೆ ಮಕ್ಕಳ ವಿದ್ಯಾರ್ಜನೆಗಾಗಿ ಬೇಕಾದ ಸಕಲ ಸೌಲಭ್ಯಗಳೊಂದಿಗೆ ಶಕ್ತಿ ವಿದ್ಯಾ ಸಂಸ್ಥೆಯನ್ನು ನಿರ್ಮಾಣ ಮಾಡಿರುವುದಕ್ಕೆ ಕೆ. ಸಿ. ನಾೖಕ್‌ ಅವರನ್ನು ನಾನು ಅಭಿನಂದಿಸುತ್ತೇನೆ. ಈಜು ಸ್ಪರ್ಧೆ ಕೇವಲ ಸ್ಪರ್ಧೆ ಅಲ್ಲ ಅದು ಜೀವನಕ್ಕೆ ಪಾಠ ಕಲಿಸುತ್ತದೆ ನೀರನ್ನು ಹೇಗೆ ಸೀಳಿಕೊಂಡು ನಾವು ಮುಂದೆ ಹೋಗುತ್ತೇವೆಯೋ ಹಾಗೆ ಜೀವನದಲ್ಲಿ ಹಲವು ಸಮಸ್ಯೆಗಳು ಬರುತ್ತದೆ. ಆವಾಗ ನಾವು ಅದೆಲ್ಲ ಸಮಸ್ಯೆಗಳನ್ನು ಎದುರಿಸುವುದನ್ನು ಕಲಿಯಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ಒಂದಲ್ಲ ಒಂದು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಬೇಕು. ದೈಹಿಕ ದೃಢತೆಯೊಂದಿಗೆ ವಿದ್ಯಾರ್ಥಿಗಳಲ್ಲಿ ಒಗ್ಗಟ್ಟನ್ನು ಬೆಳೆಸುತ್ತದೆ. ಸೋಲು ಗೆಲುವುಗಳಿಗಿಂತ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಬಹಳ ಮುಖ್ಯ. ಹಾಗಾಗಿ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಒಂದು ಅನುಭವವನ್ನು ಪಡೆದುಕೊಳ್ಳಿ ಎಂದು ಹೇಳುತ್ತಾ ಮಕ್ಕಳಿಗೆ ಶುಭಹಾರೈಸಿದರು.”

ನಂತರ ಮಾತನಾಡಿದ ಶಕ್ತಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಸಂಜೀತ್ ನಾೖಕ್‌ ಅವರು “ಸ್ಪರ್ದೆಯು ಮಕ್ಕಳಲ್ಲಿ ಉತ್ಸಾಹವನ್ನು ಹೆಚ್ಚಿಸುತ್ತದೆ. ಒಗ್ಗಟ್ಟನ್ನು ಬೆಳೆಸುತ್ತದೆ. ಶಿಕ್ಷಣದ ಜೊತೆಜೊತೆಗೆ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಾಗ ಮಾತ್ರ ಮಕ್ಕಳ ಸವಾಂಗೀಣ ಪ್ರಗತಿ ಆಗುತ್ತದೆ. ಬೇರೆ ಬೇರೆ ಶಾಲೆಗಳಿಂದ ಆಗಮಿಸಿದ ಶಿಕ್ಷಕರು, ವಿದ್ಯಾರ್ಥಿಗಳಿಗೆ ಶುಭವಾಗಲಿ” ಎಂದು ಶುಭ ಹಾರೈಸಿದರು.

ನಂತರ ಶ್ರೀಯುತ ಬಾಲಕೃಷ್ಣ ಶರ್ಮ ಏನ್ ವಕೀಲರು ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡುವ ಮೂಲಕ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ, ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಶಕ್ತಿ ವಸತಿ ಶಾಲಾ ಪ್ರಾಂಶುಪಾಲೆ ಶ್ರೀಮತಿ ಸುರೇಖಾ ಆರ್ ಭಟ್ ಉಪಸ್ಥಿತರಿದ್ದರು. ವಿದ್ಯಾ ಭಾರತಿ ಜಿಲ್ಹಾ ಕಾರ್ಯದರ್ಶಿಗಳಾದ ರಮೇಶ್ ಸ್ವಾಗತಿಸಿದರು. ಶಿಕ್ಷಕ ಶರಣಪ್ಪ ನಿರೂಪಿಸಿ, ವಂದಿಸಿದರು.