Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಶಕ್ತಿ ವಿದ್ಯಾಸಂಸ್ಥೆಯ 4 ವಿದ್ಯಾರ್ಥಿಗಳು ರಾಜ್ಯಮಟ್ಟದಿಂದ ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಅಯ್ಕೆ

ಆಗಸ್ಟ್ 23 ರಂದು ರಾಷ್ಟ್ರೋತ್ಥನ ವಿದ್ಯಾಕೇಂದ್ರ ಬನಶಂಕರಿಯಲ್ಲಿ ನಡೆದ ರಾಜ್ಯಮಟ್ಟದ ವಿದ್ಯಾಭಾರತಿ ಈಜು ಸ್ಪರ್ಧೆಯಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ 17 ವಿದ್ಯಾರ್ಥಿಗಳು ಭಾಗವಹಿಸಿ ಅದರಲ್ಲಿ 4 ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಅಯ್ಕೆ.

ವಿದ್ಯಾ ಭಾರತಿ ರಾಜ್ಯ ಮಟ್ಟದ ಈಜು ಸ್ಪರ್ಧೆಯ ಫಲಿತಾಂಶ :

19 ರ ವಯೋಮಾನದ ಬಾಲಕರು -ಅದಿತ್ ಎರಡು ಚಿನ್ನ ಎರಡು ಬೆಳ್ಳಿ ,ಸಾಗರ್ ಒಂದು ಬೆಳ್ಳಿ ಒಂದು ಕಂಚು , ಶ್ರೀ ವಿ? ಒಂದು ಚಿನ್ನ ಎರಡು ಬೆಳ್ಳಿ, ಕುಶಾಲ್ ಒಂದು ಬೆಳ್ಳಿ, ಆರ್ ನವ ಒಂದು ಕಂಚು.

19 ರ ವಯೋಮಾನದ ಬಾಲಕಿಯರು -ಇಂಚರ ಒಂದು ಬೆಳ್ಳಿ ಒಂದು ಕಂಚು, ದೇಹಿಕ ಒಂದು ಬೆಳ್ಳಿ ಮೂರು ಕಂಚು ,ವೃಂದ ಎರಡು ಬೆಳ್ಳಿ , ಮೋಹನ ಒಂದು ಬೆಳ್ಳಿ ಒಂದು ಕಂಚು

17 ರ ವಯೋಮಾನದ ಬಾಲಕರು -ನೀವಾನ್ ಅಶೋಕ್ ಒಂದು ಕಂಚು.

14 ರ ವಯೋಮಾನದ ಬಾಲಕರು -ನಿಹಾನ್ ವರದರಾಜ್ ಎರಡು ಬೆಳ್ಳಿ ಎರಡು ಕಂಚು

14 ರ ವಯೋಮಾನದ ಬಾಲಕಿಯರು -ಕೀರ್ತನ ಬೇಕಲ್ ಎರಡು ಚಿನ್ನ ಎರಡು ಬೆಳ್ಳಿ. ಹೃತಿಕಾ ಒಂದು ಬೆಳ್ಳಿ, ಆಶಿ ಒಂದು ಬೆಳ್ಳಿ ಎರಡು ಕಂಚು

14 ವರ್ಷ ವಯೋಮನ ಬಾಲಕಿಯರ ವಿಭಾಗದಲ್ಲಿ ಕಿರ್ತನಾ ಎಸ್. ಬೇಕಲ್, ೧೯ ರ ಬಾಲಕರ ವಿಭಾಗದಲ್ಲಿ ಆದಿತ್,ಶ್ರೀ ವಿಷ್ಣು, ಕುಶಾಲ್ ಇವರು ನವೆಂಬರ್‌ನಲ್ಲಿ ಮಧ್ಯ ಪ್ರದೇಶದ ಕಾಂಡ್ವದಲ್ಲಿ ನಡೆಯಲಿರುವ ವಿದ್ಯಾಭಾರತಿ ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಅಯ್ಕೆಯಾಗಿರುತ್ತಾರೆ.

ಈ ಸಂದರ್ಭದಲ್ಲಿ ವಿಜೇತರನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೖಕ್‌, ಕಾರ್ಯದರ್ಶಿ ಶ್ರೀ ಸಂಜಿತ್ ನಾೖಕ್‌. ಪ್ರಧಾನ ಸಲಹೆಗಾರರಾದ ಶ್ರೀ ರಮೇಶ್ ಕೆ. ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಮತ್ತು ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆಯಾದ ಬಬಿತಾ ಸೂರಜ್ ಅಭಿನಂದಿಸಿದ್ದಾರೆ.