The State Committee meeting of the Unaided Pre-University College Managements Association (KUPMA) was held recently at Shakti PU College in Shaktinagar, under the leadership of Honorary President Dr. K.C. Naik, President Dr. Mohan Alva, and General Secretary Shri Narendra Nayak.
The meeting discussed the one-day KUPMA District Committee coordinators’ workshop to be held on March 25 at Alvas College, Moodbidri. It was decided that approximately 75 coordinators from various districts of the state would participate in the event.
A one-day workshop will be held on March 25, 2025, from 10:00 AM to 2:00 PM at Alvas College, Moodbidri, to discuss measures to expand KUPMA in their respective districts. Dr. Mohan Alva suggested that accommodation and meals for the participating district coordinators will be arranged at Alvas College.
The schedule for the event is as follows:
• 9:00 AM – 10:00 AM: Registration and Breakfast
• 10:00 AM – 11:00 AM: Inauguration of the Workshop
• 11:00 AM – 11:15 AM: Tea Break
• 11:15 AM – 12:15 PM: First Session – Formation of KUPMA District Committees by Dr. Sudhakar Shetty, Vice-President, KUPMA State Committee
• 12:15 PM – 1:15 PM: Second Session – Q&A Session/Discussion with State KUPMA Committee Members by Shri Vishwanath Sheshachal, Joint Secretary, KUPMA State Committee
• 1:15 PM: Closing Remarks by Shri Narendra L. Nayak, General Secretary, KUPMA State Committee
• 1:45 PM: Lunch and Conclusion
The objective of this workshop is to form district-level KUPMA committees and recruit new members for the KUPMA State Committee by the end of June, with a structure that includes Honorary Presidents (1), Presidents (1), Vice-Presidents (4), General Secretaries (1), Assistant General Secretaries (2), and Treasurer (1).
It was resolved that all members of the KUPMA State Committee, along with district coordinators from across the state, must attend the workshop at Alvas College, Moodbidri.
The meeting was attended by several prominent figures, including KUPMA’s Honorary President and Founder of Shakthi PU College, Dr. K.C. Naik; Honorary President and President of Venkataramana Educational Trust, Shri K. Radhakrishna Shenoy; State President and President of Alvas Education Foundation, Dr. Mohan Alva; State General Secretary and President of Expert Educational Foundation, Prof. Narendra Nayak; State Vice Presidents and Presidents of various educational institutions, Dr. Sudhakar Shetty, Dr. Manjunath Rewankar; Joint Secretary Shri Vishwanath Sheshachal; KUPMA State Committee Members B.A. Nazir, Treasurer Ramesh K., and Coordinators Karunakara Balkur.
ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ ರಾಜ್ಯ ಸಮಿತಿ (ಕುಪ್ಮಾ) ಸಭೆ
ಶಕ್ತಿನಗರದ ಶಕ್ತಿ ಪಪೂ ಕಾಲೇಜಿನಲ್ಲಿ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ ರಾಜ್ಯ ಸಮಿತಿ (ಕುಪ್ಮಾ)ದ ಸಭೆಯು ಗೌರವ ಅಧ್ಯಕ್ಷರಾದ ಡಾ.ಕೆ.ಸಿ ನಾೖಕ್, ಅಧ್ಯಕ್ಷರಾದ ಡಾ.ಮೋಹನ್ ಆಳ್ವ ಮತ್ತು ಕಾರ್ಯದಶಿ೯ ಶ್ರೀ ನರೇಂದ್ರ ನಾಯಕ್‌ರ ಮುಂದಾಳತ್ವದಲ್ಲಿ ಇತ್ತೀಚೆಗೆ ನಡೆಯಿತು. ಈ ಸಭೆಯಲ್ಲಿ ಮೂಡುಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಮಾರ್ಚ್ ೨೫ ರಂದು ನಡೆಯಲಿರುವ ಒಂದು ದಿನದ ಕುಪ್ಮಾ ಜಿಲ್ಲಾ ಸಮಿತಿಯ ಸಂಯೋಜಕರ ಕಾರ್ಯಾಗಾರದ ಕುರಿತಂತೆ ಚರ್ಚೆ ನಡೆಯಿತು. ರಾಜ್ಯದ ಬೇರೆ ಬೇರೆ ಜಿಲ್ಲೆಯಿಂದ ಸುಮಾರು ೭೫ ಮಂದಿ ಸಂಯೋಜಕ ಸದಸ್ಯರು ಭಾಗವಹಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈಗಾಗಲೇ ಆಯ್ಕೆ ಆಗಿರುವ ಕುಪ್ಮಾ ಜಿಲ್ಲಾ ಸಂಯೋಜಕರಿಗೆ ಕುಪ್ಮಾವನ್ನು ಅವರ/ಆಯಾಯ ಜಿಲ್ಲೆಗಳಲ್ಲಿ ವಿಸ್ತರಿಸುವುದು ಹೇಗೆ ಎನ್ನುವ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಮಾರ್ಚ್ 25, 2025 ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆಳ್ವಾಸ್ ಕಾಲೇಜು, ಮೂಡುಬಿದಿರೆಯಲ್ಲಿ ನಡೆಸುವ ಬಗ್ಗೆ ವೇಳಾಪಟ್ಟಿಯ ನಿರ್ಣಯವನ್ನು ಕೈಗೊಳ್ಳಲಾಯಿತು. ಈ ಕಾರ್ಯಕ್ರಮವು ಒಂದು ದಿನದ ಕಾರ್ಯಾಗಾರವಾಗಿರುತ್ತದೆ. ಭಾಗವಹಿಸುವ ಜಿಲ್ಲಾ ಸಂಯೋಜಕರಿಗೆ ಸದಸ್ಯರಿಗೆ ವಾಸ್ತವ್ಯ ಹಾಗೂ ಊಟೋಪಚಾರದ ವ್ಯವಸ್ಥೆಯನ್ನು ಆಳ್ವಾಸ್ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಡಾ.ಮೋಹನ್ ಆಳ್ವರವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ವೇಳಾಪಟ್ಟಿ ಈ ಕೆಳಗಿನಂತಿದೆ:
ಬೆಳಿಗ್ಗೆ 9 ರಿಂದ 10 ರ ವರೆಗೆ ನೊಂದಣಿ ಮತ್ತು ಉಪಾಹಾರ
10 ರಿಂದ 11 ರ ವರೆಗೆ ಕಾರ್ಯಾಗಾರದ ಉದ್ಘಾಟನೆ
11 ರಿಂದ 11.15 ರ ವರೆಗೆ ಚಾ ವಿರಾಮ
11.15 ರಿಂದ 12.15 ರವರೆಗೆ ಮೊದಲ ಅವಧಿಯ ಕಾರ್ಯಾಗಾರವನ್ನು ಕುಪ್ಮಾ ಜಿಲ್ಲಾವಾರು ಸಮಿತಿ ರಚನೆಯ ಬಗ್ಗೆ ಡಾ ಸುಧಾಕರ ಶೆಟ್ಟಿ, ಉಪಾಧ್ಯಕ್ಷರು, ರಾಜ್ಯ ಕುಪ್ಮಾ ಸಮಿತಿ ನಡೆಸಿಕೊಡುತ್ತಾರೆ.
12.15 ರಿಂದ 1.15 ರವರೆಗೆ ಎರಡೆಯ ಅವಧಿಯ ಕಾರ್ಯಾಗಾರದಲ್ಲಿ ಪ್ರಶ್ನೋತ್ತರ ಮಾಲಿಕೆಯನ್ನು ಶ್ರೀ ವಿಶ್ವನಾಥ ಶೇ?ಚಲ, ಜೊತೆ ಕಾರ್ಯದರ್ಶಿ, ಕುಪ್ಮಾ ರಾಜ್ಯ ಸಮಿತಿ ಇವರು ನಡೆಸಿಕೊಡುತ್ತಾರೆ.
1.15 ಸಮಾರೋಪ ಸಮಾರಂಭವನ್ನು ಶ್ರೀ ನರೇಂದ್ರ ಎಲ್ ನಾಯಕ್, ಕಾರ್ಯದರ್ಶಿ, ರಾಜ್ಯ ಕುಪ್ಮಾ ಸಮಿತಿ ನಡೆಸಲಿದ್ದಾರೆ.
1.45 ರಿಂದ ಊಟದೊಂದಿಗೆ ಮುಕ್ತಾಯ
ಜೂನ್ ಅಂತ್ಯದೊಳಗೆ ರಾಜ್ಯವಾರು ಎಲ್ಲಾ ಜಿಲ್ಲೆಗಳಲ್ಲಿ ಕುಪ್ಮಾ ಸಮಿತಿಗೆ ಸದಸ್ಯರನ್ನು ಸೇರ್ಪಡೆಗೊಳಿಸುವುದರ ಜತೆಯಲ್ಲಿ ಜಿಲ್ಲಾವಾರು ಕುಪ್ಮಾ ಸಮಿತಿಗಳನ್ನು ರಚನೆ ಮಾಡಿ ಗೌರವ ಅಧ್ಯಕ್ಷರು 1 / ಅಧ್ಯಕ್ಷರು 1 / ಉಪಾಧ್ಯಕ್ಷರು 4/ ಕಾರ್ಯದರ್ಶಿಗಳು 1 / ಸಹಕಾರ್ಯದರ್ಶಿ 2/ ಖಚಾಂಚಿ 1 ಸೇರಿದಂತೆ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಿ ಸಮಿತಿಯನ್ನು ರಚಿಸಿ ಕಾರ್ಯನಿರ್ವಹಿಸುವುದು ಇದರ ಉದ್ದೇಶವಾಗಿದೆ.
ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ನಡೆಯುವ ಈ ಕಾರ್ಯಾಗಾರದಲ್ಲಿ ರಾಜ್ಯ ಕುಪ್ಮಾ ಸಮಿತಿಯ ಸದಸ್ಯರು ಸೇರಿದಂತೆ ರಾಜ್ಯದ ಜಿಲ್ಲಾ ಸಂಯೋಜಕರು ತಪ್ಪದೇ ಭಾಗವಹಿಸಬೇಕೆಂದು ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ಕುಪ್ಮಾದ ರಾಜ್ಯದ ಗೌರವ ಅಧ್ಯಕ್ಷರು ಹಾಗೂ ಶಕ್ತಿ ಪ. ಪೂ. ಕಾಲೇಜಿನ ಸಂಸ್ಥಾಪಕರಾದ ಡಾ.ಕೆ.ಸಿ. ನಾೖಕ್, ಇನ್ನೊರ್ವ ಗೌರವ ಅಧ್ಯಕ್ಷರು ಹಾಗೂ ವೆಂಕಟರಮಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕೆ. ರಾಧಕೃಷ್ಣ ಶೆಣೈ, ರಾಜ್ಯ ಅಧ್ಯಕ್ಷರು ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಮೋಹನ್ ಆಳ್ವ, ರಾಜ್ಯ ಕಾರ್‍ಯದರ್ಶಿ ಹಾಗೂ ಎಕ್ಸಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ನರೇಂದ್ರ ನಾಯಕ್, ರಾಜ್ಯ ಉಪಾಧ್ಯಕ್ಷರು ಹಾಗೂ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿ, ರಾಜ್ಯ ಉಪಾಧ್ಯಕ್ಷರು ಹಾಗೂ ಸೂರಜ್ ಇಂಟರ್ ನ್ಯಾಷನಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಮಂಜುನಾಥ್ ರೇವಣ್‌ಕರ್,ಜೊತೆ ಕಾರ್‍ಯದರ್ಶಿ ಶ್ರೀ ವಿಶ್ವನಾಥ್ ಶೇಷಾಚಲ, ಕುಪ್ಮಾ ರಾಜ್ಯ ಸಮಿತಿ ಸದಸ್ಯರಾದ ಬಿ.ಎ.ನಾಝೀರ್, ಕೋಶಾಧಿಕಾರಿ ರಮೇಶ್ ಕೆ., ಸಂಯೋಜಕರಾದ ಕರುಣಾಕರ್ ಬಲ್ಕೂರ್ ಉಪಸ್ಥಿತರಿದ್ದರು.