Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಶಕ್ತಿ ಪುಸ್ತಕ ಮೇಳ

ಮಂಗಳೂರು : ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಪ್ರಯುಕ್ತ ಶಕ್ತಿ ವಸತಿ ಶಾಲೆ ಮತ್ತು ಕಾಲೇಜು ಗ್ರಂಥಾಲಯದಲ್ಲಿ ಪುಸ್ತಕ ಮೇಳ ಮತ್ತು ಪುಸ್ತಕ ಪ್ರದರ್ಶನವನ್ನು ದಿನಾಂಕ 21 ಮತ್ತು 22 ನೇ ನವೆಂಬರ್ 2024 ರಂದು ಹಮ್ಮಿಕೊಳ್ಳಲಾಯಿತು.

ಪುಸ್ತಕ ಮೇಳದಲ್ಲಿ ಸುಮಾರು 4000 ಪುಸ್ತಕಗಳು ಪ್ರದರ್ಶನಗೊಂಡು, ರೂ.2,50,000/- ಮೌಲ್ಯದ ಪುಸ್ತಕಗಳು ಮಾರಾಟಗೊಂಡವು. ಈ ಪುಸ್ತಕ ಮೇಳವು ಮಕ್ಕಳಿಗೆ ಉಪಯುಕ್ತವಾದ ಆಂಗ್ಲ, ಕನ್ನಡ, ಸಂಸ್ಕೃತ, ಹಿಂದಿ ಭಾಷೆಗಳ ಪುಸ್ತಕಗಳನ್ನೊಳಗೊಂಡಿದ್ದು, ಧಾರ್ಮಿಕ ಗ್ರಂಥಗಳು, ವೀರಯೋಧರ ಚರಿತ್ರಾ ಪುಸ್ತಕಗಳು, ಮಕ್ಕಳ ಕಥೆ ಪುಸ್ತಕಗಳು, ಕಾದಂಬರಿಗಳು, ಮಕ್ಕಳಿಗೆ ಪ್ರಿಯವಾದ ಚಿತ್ರಕಲಾ ಪುಸ್ತಕಗಳು ಲಭ್ಯವಿದ್ದವು.

ಪುಸ್ತಕ ಮೇಳವನ್ನು ಶಕ್ತಿ ಸಂಸ್ಥೆಯ ಆಡಳಿತಾಧಿಕಾರಿಯಾದ ಡಾ.ಕೆ.ಸಿ.ನಾೖಕ್‌ರವರು ಉದ್ಘಾಟಿಸಿದರು. ಪ್ರಧಾನ ಸಲಹೆಗಾರರಾದ ರಮೇಶ್ ಕೆ. ಹಾಗೂ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆಯಾದ ಶ್ರೀಮತಿ ಬಬಿತಾ ಸೂರಜ್ ಮತ್ತು ಶಕ್ತಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ವೆಂಕಟೇಶ್ ಮೂರ್ತಿರವರು ಉಪಸ್ಥಿತರಿದ್ದರು. ಗ್ರಂಥಪಾಲಕಿಯರಾದ ಶ್ರೀಮತಿ ಲಕ್ಷ್ಮೀ ಡಿ ರೈ ಮತ್ತು ಲತಾ ಶ್ರೀಧರ್ ನಾೖಕ್‌ ರವರು ಕಾರ್ಯಕ್ರಮವನ್ನು ಆಯೋಜಿಸಿದರು.