State-Level Science Exhibition Inaugurated at Shakthi Vidya Institution by the Department of Education, Government of Karnataka
Mangaluru, Nov 23 : The Department of Education, Government of Karnataka, inaugurated the State-Level Science Exhibition for the academic year 2024-25 today at Shakthi Education Trust, Shakthinagara, in collaboration with the Department. The event was held at the Reshma Memorial Auditorium and featured 210 participants, six from each of the 35 educational districts selected for the state-level competition.
The exhibition was inaugurated by Dr. K.V. Rao, Director of the Pilikula Regional Science Center, Mangaluru. In his speech, Dr. Rao discussed the impact of the digital age on various fields, emphasizing the role of computer technology in science and encouraging students to embrace computer languages in their research. He also praised the adaptability of children in using mobile phones and other digital tools effectively.
Dr. K.V Rao urged students to engage in continuous scientific exploration, stating that regular research is crucial for global leadership in science. He commended the government’s initiative in organizing such exhibitions and encouraged students to explore practical science alongside theoretical studies.
Mr. Venkatesh S. Pathegar, Deputy Director (Administration) from the Department of School Education, Mangaluru, Dakshina Kannada, addressed environmental pollution challenges despite technological progress, stressing the importance of forward-thinking for the next generation.
Mr. Hemaraj, Education Assistant from Vishveshvarayya Museum, Bengaluru, spoke about the importance of preparing scientific models and experiments for understanding real-world applications.
The event was presided over by Dr. K.C. Naik, Administrator Shakthi Education Trust, who congratulated the teachers for their dedication in helping students create science models. He emphasized that such student research would play a vital role in India’s global recognition in the future.
Dr. K.V. Rao, the chief guest, was honored during the event. Other distinguished guests included Mr. Ishwar H.R., Block Education Officer for Mangaluru South, Mr. Srinivas Adiga, Lecturer at the District Institute of Education and Training, Mangaluru, Mr. Ramesh K., Chief Advisor of Shakthi Education Trust, Shakthinagara, Mangaluru, and Mr. Venkatesha Murthy, Principal of Shakthi PU College, Shakthinagara, Mangaluru.
Mrs. Rajalakshmi K., Principal and Deputy Director (Development) at the District Institute of Education and Training, Mangaluru, welcomed the guests, while Mrs. Babitha Suraj, Principal of Shakthi Residential School, expressed her gratitude at the conclusion of the event. The program was anchored by teacher Premalatha.
ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ
ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರದ ಪ್ರೌಢ ಶಾಲಾ ವಿಭಾಗದ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಚಾಲನೆ
ಮಂಗಳೂರು ನ. 23 : ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆ ಇದರ ಸಹಯೋಗದಲ್ಲಿ, ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ ಇವರ ವತಿಯಿಂದ ಇಂದು 2024-25 ನೇ ಸಾಲಿನ ಪ್ರೌಢ ಶಾಲಾ ವಿಭಾಗದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭವು ಶಕ್ತಿ ವಿದ್ಯಾ ಸಂಸ್ಥೆಯ ರೇಷ್ಮಾ ಮೆಮೋರಿಯಲ್ ಆಡಿಟೋರಿಯಂನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಜ್ಯದ 35 ಶೈಕ್ಷಣಿಕ ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಪ್ರತಿ ಜಿಲ್ಲೆಯಿಂದ 6 ಮಂದಿಯ ಹಾಗೆ ಒಟ್ಟು 210 ಸ್ಪರ್ಧಿಗಳು ಭಾಗವಹಿಸಿದರು.
ಈ ಕಾರ್ಯಕ್ರಮವನ್ನು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ಮಂಗಳೂರಿನ ನಿರ್ದೇಶಕರಾಗಿರುವ ಡಾ. ಕೆ ವಿ ರಾವ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜಗತ್ತು ಎಲ್ಲಾ ರಂಗದಲ್ಲಿಯು ಆನ್ಲೈನ್ ಯುಗದಲ್ಲಿದೆ. ನಾವು ಅನ್ವೇಷಣೆ ಮಾಡುತ್ತಿದ್ದ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಎಲ್ಲವೂ ಕಂಪ್ಯೂಟರ್ನ ಚಿಪ್ನ ಮೂಲಕ ನಿಯಂತ್ರಿಸಲ್ಪಟ್ಟಿರುವ ಕಾಲಘಟ್ಟವಾಗಿದೆ. ನಾವು ಎಲ್ಲಾ ಅನ್ವೇಷಣೆಯನ್ನು ಮಾಡುವ ಸಂದರ್ಭದಲ್ಲಿ ಕಂಪ್ಯೂಟರಿನ ಭಾಷೆಯನ್ನು ಅರ್ಥಮಾಡಿಕೊಂಡು ಅಳವಡಿಸಿಕೊಳ್ಳಬೇಕಾಗಿದೆ. ಇವತ್ತು ಮಗುವಿಗೆ ಮೊಬೈಲ್ ಕೊಟ್ಟಾಗ ಅದನ್ನು ಅರ್ಥಮಾಡಿಕೊಂಡು ಉಪಯೋಗಿಸುವ ಕಲೆಯನ್ನು ಮಗು ಹೊಂದಿದೆ.
“ವಿಶ್ವದಲ್ಲಿ ನಾವು ಮೊದಲಿಗರಾಗಬೇಕಾದರೆ ವಿಜ್ಞಾನದಲ್ಲಿ ಪ್ರತಿದಿನವೂ ಅನ್ವೇಷಣೆಯನ್ನು ಮಾಡಬೇಕು. ಇದಕ್ಕೋಸ್ಕರ ಸರ್ಕಾರ ಇಂತಹ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯನ್ನು ರಾಜ್ಯ ಮಟ್ಟದಲ್ಲಿ ಆಯೋಜಿಸುತ್ತಿದೆ. ಶಾಲೆಯ ಒಳಗಡೆ ಪಠ್ಯ ಕ್ರಮದ ಮೂಲಕ ಅಂಕ ಪಡೆಯುವುದರ ಜೊತೆಗೆ ಇಂತಹ ವಿಜ್ಞಾನದ ಪ್ರಯೋಗವನ್ನು ಸಹ ಕಲಿಯಬೇಕು ಎಂದು ಕರೆನೀಡಿದರು.
ವೇದಿಕೆಯಲ್ಲಿದ್ದ ಇನ್ನೋರ್ವ ಅತಿಥಿ ಶ್ರೀ ವೆಂಕಟೇಶ್ ಎಸ್. ಪಟೇಗಾರ್ ಉಪನಿರ್ದೇಶಕರು (ಆಡಳಿತ), ಶಾಲಾ ಶಿಕ್ಷಣ ಇಲಾಖೆ ಮಂಗಳೂರು ದಕ್ಷಿಣ ಕನ್ನಡ ಇವರು ಮಾತನಾಡಿ ವಿಜ್ಞಾನ ಎಷ್ಟು ಮುಂದುವರಿದರೂ ನಮ್ಮ ಸುತ್ತಮುತ್ತಲಿನ ಪರಿಸರ ಮಾಲಿನ್ಯ ಇನ್ನೂ ಕಡಿಮೆಯಾಗಿಲ್ಲ, ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆ ಯೋಚನೆ ಮಾಡಲೇಬೇಕಾಗಿದೆ ಎಂದು ಹೇಳಿದರು. ನಂತರ ಮಾತನಾಡಿದ ಶ್ರೀ ಹೇಮರಾಜ್ ಶಿಕ್ಷಣ ಸಹಾಯಕರು, ವಿಶ್ವೇಶ್ವರಯ್ಯ ಮ್ಯೂಸಿಯಂ ಬೆಂಗಳೂರು ಇವರು ಬಂದಿರುವ ಎಲ್ಲಾ ಸ್ಪರ್ಧಾಳುಗಳಿಗೆ ವಿಜ್ಞಾನದ ಮಾದರಿಯ ತಯಾರಿಯ ಉಪಯುಕ್ತತೆಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿಯಾಗಿರುವ ಡಾ. ಕೆ. ಸಿ. ನಾೖಕ್ ಮಾತನಾಡಿ ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳಿಂದ ವಿದ್ಯಾರ್ಥಿಗಳನ್ನು ವಿಜ್ಞಾನ ಮಾದರಿ ತಯಾರಿಸಲು ಶ್ರಮಿಸಿರುವ ಶಿಕ್ಷಕರಿಗೆ ಅಭಿನಂದನೆಯನ್ನು ಸಲ್ಲಿಸಿದರು. ನಮ್ಮ ದೇಶ ಮುಂದಿನ ದಿನಗಳಲ್ಲಿ ಜಗತ್ತಿನಲ್ಲಿ ಗುರುತಿಸಿಕೊಳ್ಳಲು ನಿಮ್ಮಂತಹ ವಿದ್ಯಾರ್ಥಿಗಳ ಸಂಶೋಧನೆ ಅಗತ್ಯವಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಕೆ. ವಿ. ರಾವ್ ಅವರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು.
ವೇದಿಕೆಯಲ್ಲಿ ಶ್ರೀ ಈಶ್ವರ್ ಹೆಚ್. ಆರ್., ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಂಗಳೂರು ದಕ್ಷಿಣ ವಲಯ, ಶ್ರೀ ಶ್ರೀನಿವಾಸ್ ಅಡಿಗ ಉಪನ್ಯಾಸಕರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಂಗಳೂರು, ಶ್ರೀ ರಮೇಶ್ ಕೆ. ಪ್ರಧಾನ ಸಲಹೆಗಾರರು ಶಕ್ತಿ ವಿದ್ಯಾ ಸಂಸ್ಥೆ ಶಕ್ತಿನಗರ ಮಂಗಳೂರು, ಶ್ರೀ ವೆಂಕಟೇಶ್ ಮೂರ್ತಿ ಪ್ರಾಂಶುಪಾಲರು ಶಕ್ತಿ ಪದವಿ ಪೂರ್ವ ಕಾಲೇಜು ಶಕ್ತಿನಗರ ಮಂಗಳೂರು ಮತ್ತಿತರರು ಉಪಸ್ಥಿತರಿದ್ದರು.
ಶ್ರೀಮತಿ ರಾಜಲಕ್ಷ್ಮಿ ಕೆ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕಿ(ಅಬಿವೃದ್ಧಿ), ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಂಗಳೂರು, ಇವರು ಅತಿಥಿಗಳನ್ನು ಸ್ವಾಗತಿಸಿದರು. ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾಗಿರುವ ಶ್ರೀಮತಿ ಬಬಿತಾ ಸೂರಜ್ ಧನ್ಯವಾದ ಸಮರ್ಪಿಸಿದರು.
ಶಾಲೆಯ ಶಿಕ್ಷಕಿ ಪ್ರೇಮಲತಾ ಕಾರ್ಯಕ್ರಮವನ್ನು ನಿರೂಪಿಸಿದರು.