Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ವೃಕ್ಷಬಂಧನ – ಶಕ್ತಿ ವಿದ್ಯಾಸಂಸ್ಥೆಯಲ್ಲಿ ವಿಶಿಷ್ಟ ಆಚರಣೆ

ಮಂಗಳೂರು ಆ. 31 : ಶಕ್ತಿನಗರದ ಶಕ್ತಿ ವಸತಿಶಾಲೆಯ ಇಕೋ-ಕ್ಲಬ್ ವತಿಯಿಂದ ವಿಶೇಷವಾದ ’ವೃಕ್ಷಬಂಧನ’ ಆಚರಿಸಲಾಯಿತು. ಮರಗಳಿಂದ ಉದುರಿದ ಎಲೆಗಳು ಹಾಗೂ ಹೂವುಗಳನ್ನು ಬಳಸಿ ನೈಸರ್ಗಿಕ ರಾಖಿ ನಿರ್ಮಾಣ ಮಾಡಿ ಮರಗಳಿಗೆ ಕಟ್ಟುವ ಮೂಲಕ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಿದರು.

ಇದೇ ಸಂದರ್ಭದಲ್ಲಿ ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ ಮಾತನಾಡಿ ನಮ್ಮ ಮನೆಯ ಸುತ್ತಮುತ್ತಲೂ ಗಿಡ ನೆಟ್ಟು ಬೆಳೆಸಬೇಕು, ಇದರಿಂದ ಪ್ರಪಂಚದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ನಮ್ಮ ನಡುವೆಯೇ ಅನೇಕ ಮಹನೀಯರು ಪರಿಸರಕ್ಕಾಗಿ ಜೀವನವನ್ನೇ ಸಮರ್ಪಿಸಿದವರಿದ್ದಾರೆ. ಅವರ ತ್ಯಾಗ ಮತ್ತು ಸಂಕಲ್ಪ ಎಲ್ಲರಿಗೂ ಅನುಸರಣಿಯ ಎಂದರು. ಶಾಲೆಯ ಸಮೀಪದಲ್ಲಿ ಔ?ಧೀಯ ಸಸ್ಯವನದ ನಿರ್ಮಾಣ ಹಾಗೂ ಜೈವಿಕ ಗೊಬ್ಬರದ ಘಟಕವನ್ನು ಸ್ಥಾಪಿಸಲು ನಿಶ್ಚಯಿಸಲಾಯಿತು. ವಿದ್ಯಾರ್ಥಿಗಳು ಪರಿಸರ ರಕ್ಷಿಸುತ್ತೇವೆ ಎಂದು ಪ್ರಮಾಣ ವಚನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಶಕ್ತಿ ವಸತಿಶಾಲೆಯ ಪ್ರಾಂಶುಪಾಲ ರವಿಶಂಕರ ಹೆಗಡೆ, ಉಪಪ್ರಾಂಶುಪಾಲ ದೀಪಕ್ ಕುಡ್ವ, ಇಕೋ- ಕ್ಲಬ್‌ನ ನಿರ್ದೇಶಕ ಶಿಕ್ಷಕರಾದ ಅಪೂರ್ವಾ, ಪಂಚಮಿ, ಆಶಾ ಹಾಗೂ ಮಧುರಾ ಉಪಸ್ಥಿತರಿದ್ದರು.