Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಸೌತ್ ಕೊರಿಯಾದಲ್ಲಿ ನಡೆಯಲಿರುವ 25 ನೇ ವಿಶ್ವ ಜಾಂಬೂರಿಗೆ ಕುಮಾರಿ ಆದ್ಯ ಸುಲೋಚನ ಆಯ್ಕೆ

ಸೌತ್ ಕೊರಿಯಾದಲ್ಲಿ ನಡೆಯಲಿರುವ 25 ನೇ ವಿಶ್ವ ಜಾಂಬೂರಿಗೆ ಶಕ್ತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಆದ್ಯ ಸುಲೋಚನ ಆಯ್ಕೆ

ಮಂಗಳೂರು ಜು 28 : 4 ವರ್ಷಗಳಿಗೊಮ್ಮೆ ನಡೆಯುವಂತಹ ಅಂತರಾಷ್ಟ್ರೀಯ ಮಟ್ಟದ 25 ನೇ ವಿಶ್ವ ಜಾಂಬೂರಿಯು ಸೌತ್ ಕೊರಿಯಾದಲ್ಲಿ ದಿನಾಂಕ 1-8-2023 ರಿಂದ 12-8-2023 ರವರೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಭಾರತ ದೇಶವನ್ನು ಪ್ರತಿನಿಧಿಸುತ್ತಿರುವ ಒಟ್ಟು 58 ವಿದ್ಯಾರ್ಥಿಗಳು ದಳನಾಯಕರುಗಳಲ್ಲಿ ಶಕ್ತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ಆದ್ಯ ಸುಲೋಚನ ಮುಳಿಯ ಆಯ್ಕೆಯಾಗಿ ಅಲ್ಲಿಗೆ ತೆರಳುತ್ತಿದ್ದಾರೆ.

ಈ ಸಂದರ್ಭದಲ್ಲಿ ಶಕ್ತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಂಜಿತ್ ನಾೖಕ್‌, ಆಡಳಿತಾಧಿಕಾರಿ ಡಾ. ಕೆ.ಸಿ ನಾೖಕ್‌, ಪ್ರಧಾನ ಸಲಹೆಗಾರ ರಮೇಶ ಕೆ, ಶಕ್ತಿ ಪಪೂ ಪ್ರಭಾರ ಪ್ರಾಂಶುಪಾಲೆಯಾದ ದಿವ್ಯಜ್ಯೋತಿ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲ ರವಿಶಂಕರ್ ಹೆಗಡೆ ಅಭಿನಂದಿಸಿರುತ್ತಾರೆ.