Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಶಕ್ತಿ ಪ. ಪೂ. ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ವಾಲಿಬಾಲ್ ಪ್ರತಿಭೆಗಳಿಗೆ ಉಚಿತ ಶಿಕ್ಷಣದ ಅವಕಾಶಗಳು 

ಮಂಗಳೂರು ಮೇ 20 : ಶಕ್ತಿನಗರದ ಶಕ್ತಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ 2022-23 ನೇ ಸಾಲಿನಲ್ಲಿ ವಾಲಿಬಾಲ್ ಹುಡುಗರಿಗೆ ಉಚಿತ ಶಿಕ್ಷಣದ ಅವಕಾಶವನ್ನು ಕಲ್ಪಿಸಲಾಗಿದೆ. ದಿನಾಂಕ 26-05-2022 ಮಂಗಳವಾರ ಬೆಳಗ್ಗೆ 9 ಗಂಟೆಗೆ ಶಕ್ತಿ ಕ್ಯಾಂಪಸ್‌ನಲ್ಲಿ ವಾಲಿಬಾಲ್ ನೇರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಹುಡುಗರು 2005 ನಂತರದಲ್ಲಿ ಜನಿಸಿದವರಾಗಿರಬೇಕು. 2021-22 ರ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿರಬೇಕು. ಮಾಸ್ಕ್ ಮತ್ತು ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು. ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ನೀಡಬೇಕು. ಭಾಗವಹಿಸುವ ಆಟಗಾರರು ಜನ್ಮದಿನಾಂಕ ದಾಖಲೆಗಾಗಿ ಅಂಕಪಟ್ಟಿ ಅಥವಾ ಜನ್ಮಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತರಬೇಕು. ಪಾಲ್ಗೊಳ್ಳುವ ಆಟಗಾರರಿಗೆ ಮಾತ್ರವೇ ಕಾಲೇಜು ಆವರಣದ ಒಳಗೆ ಪ್ರವೇಶವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಶಕ್ತಿ ಪ.ಪೂ.ಕಾಲೇಜಿನ ದೈಹಿಕ ಶಿಕ್ಷಕರು/ಎನ್‌ಐಎಸ್ ವಾಲಿಬಾಲ್ ಕೋಚ್ ಆದ ಮನೋಜ್ ಕುಮಾರ್ ಎಸ್ ಇವರ ಮೊಬೈಲ್ ಸಂಖ್ಯೆ: 9743374795 / 9591020367 ಕ್ಕೆ ಸಂಪರ್ಕಿಸುವಂತೆ ಕೋರಲಾಗಿದೆ.