As a Principal of Shakthi PU College, along with the deliverance of my responsibility, I was exposed to a lot of new information, met new people and learnt lessons for life through this organisation said Sri Prabhakara G.S. accepting the felicitation and farewell organised for him.
Serving in places like Mysuru and Bengaluru was in line with my birth place Mandya, therefore the excitement was something different, he shared. This place and the people around have influenced me to a greater extent and that inspired me to continue enjoying this profession here he concluded.
Sanjith Naik, the Secretary of Shakthi Group of Institutions said that the farewell is just symbolic and the relationship does not end at this. The contact would remain mutual in future too he anticipated and conveyed good wishes to the outgoing Principal.
Dr. K.C.Naik the Administrator of Shakthi conveyed his blessings and acknowledged the contributions of Prabhakara G.S. in the growth of this new Institution. He encouraged him to strive high and write books in the subject of his interest.
Chief Advisor, Ramesh K. and NeemaSaxena-Coordinator of SGK Pre-school were present along with the teaching fraternity.
Institute Development Officer-PrakyathRai welcomed the gathering and Vidya Kamath G-Principal of Shakthi Residential School proposed the Vote of Thanks. Shilpa, Lecturer in Commerce compered the programme.
ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರಭಾಕರ ಜಿ.ಎಸ್. ಅವರಿಗೆ ಬೀಳ್ಕೊಡುಗೆ
ಶಕ್ತಿನಗರದ ಶಕ್ತಿ ಪಪೂ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯನ್ನು ನೀಡುವುದರ ಜೊತೆಗೆ ಈ ಸಂಸ್ಥೆಯ ಮುಖೇನ ಅಪಾರಜ್ಞಾನ ಸಂಪತ್ತು, ಜೀವನಾನುಭವವನ್ನು ಗಳಿಸಿದ್ದೇನೆ ಎಂದು ಶಕ್ತಿ ವಿದ್ಯಾ ಸಂಸ್ಥೆಯ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ ಜಿ. ಎಸ್. ತಮಗೆ ಸಂಸ್ಥೆಯಲ್ಲಿ ನೇರವೇರಿದ ಬೀಳ್ಕೊಡುಗೆಯ ಸಮಾರಂಭದಲ್ಲಿ ಹೇಳಿದರು. ಬೆಂಗಳೂರು, ಮೈಸೂರುಗಳಲ್ಲಿ ಸೇವೆ ಸಲ್ಲಿಸಿದ ತಾನು ಈ ಮಂಗಳೂರಿನ ಪರಿಸರದಿಂದ, ಜನರಿಂದ ಬಹಳಷ್ಟು ಪ್ರಭಾವಕ್ಕೆ ಒಳಗಾಗಿದ್ದೇನೆ. ಇಲ್ಲಿನ ವಾತಾವರಣ, ವಿದ್ಯಾರ್ಥಿಗಳ ಹುಮ್ಮಸ್ಸು, ಗುಣ-ಸ್ವಭಾವಗಳು ಸಹ ಅಧ್ಯಾಪಕನಿಗೆ ಹೊಸ ವಿಷಯವನ್ನು ಕಲಿಸಲು ಸ್ಫೂರ್ತಿದಾಯಕ ಎಂದರು.
ಕಾರ್ಯಕ್ರಮದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾೖಕ್ ಬೀಳ್ಕೊಡುಗೆ ಸಮಾರಂಭ ಕೇವಲ ಸಾಂಕೇತಿಕವಾಗಿದ್ದು, ಈ ಸಂಬಂಧ ಇಲ್ಲಿಗೆ ಮುಗಿಯುವುದಿಲ್ಲ. ತಮಗೆ ಈ ಸಂಸ್ಥೆಯೊಂದಿಗಿನ ಸಂಬಂಧ, ಸಂಪರ್ಕ ಮುಂದಿಗೂ ನಿರಂತರವಾಗಿ ಸಾಗಬೇಕು. ಅದೇ ರೀತಿ ಇದುವರೆಗೆ ನೀಡಿದ ಸಹಕಾರ, ಪ್ರೊತ್ಸಾಹ ಇನ್ನು ಮುಂದಿಗೂ ಸಿಗುವಂತಾಗಲಿ ಎಂದು ಪ್ರಭಾಕರ ಜಿ. ಎಸ್. ರವರ ಭವಿಷ್ಯದ ಯಶಸ್ಸಿಗೆ ಶುಭ ಹಾರೈಸಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಶಕ್ತಿ ಎಜ್ಯುಕೇಶನ್ ಟ್ರಸ್ಟ್ನ ಆಡಳಿತಾಧಿಕಾರಿ ಡಾ. ಕೆ.ಸಿ. ನಾೖಕ್ ಮಾತನಾಡಿ ಪ್ರಭಾಕರ ಜಿ.ಎಸ್ ಅವರು ಒಳ್ಳೆಯ ವಿಷಯ ಜ್ಞಾನ ಹೊಂದಿರುವ ವ್ಯಕ್ತಿ, ಇವರು ಶಕ್ತಿ ಪಪೂ ಕಾಲೇಜಿನ ಸಂಸ್ಥಾಪಕ ಪ್ರಾಂಶುಪಾಲರಾಗಿ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಇವರನ್ನು ಆಡಳಿತ ಮಂಡಳಿ ಮರೆಯಲಿಕ್ಕೆ ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಟ್ರಸ್ಟಿ ಡಾ. ಮುರಳೀಧರ್ ನಾಕ್, ಪ್ರಧಾನ ಸಲಹೆಗಾರ ರಮೇಶ್ ಕೆ, ಉಪನ್ಯಾಸಕರಾದ ಡಾ. ದರ್ಶನ್ರಾಜ್, ನಯನ ಪ್ರಸಾದ್, ಮತ್ತು ಅಕ್ಷತಾ ಮಾತನಾಡಿದರು. ಸ್ವಾಗತವನ್ನು ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಧನ್ಯವಾದವನ್ನು ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್ ನೆರವೆರಿಸಿದರು. ಉಪನ್ಯಾಸಕಿ ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಗೋಪಾಲಕೃಷ್ಣ ಪ್ರಿ-ಸ್ಕೂಲ್ಸಂಚಾಲಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು.