Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಸಾಂಪ್ರದಾಯಿಕ ದಿನಾಚರಣೆ

ಶಕ್ತಿ ಪ. ಪೂ. ಕಾಲೇಜಿನಲ್ಲಿ ಸಾಂಪ್ರದಾಯಿಕ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಕಾಲೇಜಿನ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ವಿವಿಧ ರಾಜ್ಯಗಳ ಉಡುಪನ್ನು ತೊಟ್ಟು ಭಾರತೀಯ ಸಂಸ್ಕೃತಿಯನ್ನು ಬಿಂಬಿಸಿದರು. ನಂತರ ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ರಂಗೋಲಿ, ಕಸದಿಂದ ರಸ, ಸಂಗೀತ ಸ್ಪರ್ಧೆ, ಕೊಲಾಜ್, ಬೆಂಕಿ ರಹಿತ ಅಡುಗೆ ಈ ಎಲ್ಲಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಅತಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ ಜಿ.ಎಸ್, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ದರ್ಶನ್‌ ರಾಜ್, ಗಣಿತ ಶಾಸ್ತ್ರದ ವಿಭಾಗದ ಮುಖ್ಯಸ್ಥರಾದ ಸುಧೀರ್, ಭೌತ ಶಾಸ್ತ್ರ ಪ್ರಾಧ್ಯಾಪಕರಾದ ಗಿರೀಶ್, ಜೀವಶಾಸ್ತ್ರ ಉಪನ್ಯಾಸಕರಾದ ರೇಖಾ ಬೈಕಾಡಿ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥೆ ಶ್ರೀಲೇಖ, ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶಿಲ್ಪ, ಪ್ರೀತಿಕೀಕನ್, ದಿವ್ಯಜ್ಯೋತಿ, ಭಾಷಾ ವಿಷಯಗಳ ಉಪನ್ಯಾಸಕರಾದ ಶ್ರೀನಿಧಿ ಅಭ್ಯಂಕರ್, ಹರ್ಷಿತ, ಶಶಿಕಲಾ ಎಂ.ಎನ್, ಸುಪ್ರಿಯ ಮಾರ್ಗದರ್ಶನ ನೀಡಿದರು.