Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಸ್ವಚ್ಛತಾ ಅಭಿಯಾನದ ಸಮಾರೋಪ ಸಮಾರಂಭ

ಶಕ್ತಿ ಎಜ್ಯುಕೇಶನ್‌ಟ್ರಸ್ಟ್‌ನ ಆಡಳಿತಕ್ಕೊಳಪಟ್ಟ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪ. ಪೂ. ಕಾಲೇಜಿನ ವತಿಯಿಂದ ಗಾಂಧೀಜಿಯ 150 ನೇ ವರ್ಷಾಚರಣೆಯ ಕಾರ್ಯಕ್ರಮವನ್ನು ದಿನಾಂಕ 2-10-2019 ರಂದು ಸ್ವಚ್ಛತಾ ಅಭಿಯಾನದ ಮೂಲಕ ಉದ್ಘಾಟಿಸಲಾಗಿದೆ. ನಿರಂತರವಾಗಿ ಒಂದು ತಿಂಗಳ ಕಾರ್ಯಕ್ರಮವನ್ನು ವಿವಿಧ ಆಯಾಮಗಳ ಮೂಲಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದರಾದ ಶ್ರೀ ನಳಿನ್ ಕುಮಾರ್‌ಕಟೀಲ್, ಶಾಸಕರಾದ ಶ್ರೀ ವೇದವ್ಯಾಸಕಾಮತ್‌ ಹಾಗೂ ಶ್ರೀ ಕಿಶೋರ್ ಆಳ್ವ, ಯುಪಿಸಿಎಲ್ ಪಡುಬಿದ್ರಿಯ ಕಾರ್ಯನಿರ್ವಾಹಕ ನಿರ್ದೇಶಕ ಉಪಸ್ಥಿತರಿರುತ್ತಾರೆ. ರಾಮಕೃಷ್ಣ ಆಶ್ರಮದ ಸ್ವಾಮೀಜಿ ಏಕಗಮ್ಯಾನಂದರವರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಿರುವರು. ಈ ಕಾರ್ಯಕ್ರಮವು ಪೂರ್ವ ನಿಗದಿಯಂತೆ ದಿನಾಂಕ 2-11-2019 ರಂದು ನಡೆಯಲಿದೆ.

ಶಕ್ತಿನಗರದ ಶಕ್ತಿ ಶಾಲೆಯ ಆವರಣದಲ್ಲಿ ಬೆಳಗ್ಗೆ 9.30 ಕ್ಕೆ ಸಮಾರೋಪಗೊಳ್ಳಲಿದೆ. ಆನಂತರ ಗಾಂಧೀಜಿಯ ವಿಚಾರಗಳೊಂದಿಗೆ ಜಾಥಾವನ್ನು ಆಯೋಜಿಸಲಾಗಿದೆ. ಈ ಜಾಥವು ಶಕ್ತಿ ಶಾಲೆಯಿಂದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ರಸ್ತೆಯ ಮೂಲಕ ನಾಲ್ಯಪದವು ಸರ್ಕಾರಿ ಶಾಲೆಯ ಮೈದಾನದ ತನಕ ತೆರಳಲಿದೆ. ಸುಮಾರು 300 ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಾರ್ವಜನಿಕರು ಈ ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ.