Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ನೇತ್ರದಾನದ ಮಹತ್ವ ಕುರಿತು ಕಾರ್‍ಯಕ್ರಮ

ನಮ್ಮ ಮರಣದ ನಂತರವೂ ನಮ್ಮ ಕಣ್ಣುಗಳು ಜೀವಂತವಾಗಿ ಇನ್ನೊಬ್ಬರ ಬದುಕಿಗೆ ಬೆಳಕಾಗಬಲ್ಲವು. ಹಾಗಾದರೆ, ನಾವೇಕೆ ಇಂದೇ ನಮ್ಮ ನೇತ್ರಗಳನ್ನು ದಾನ ಮಾಡುವುದಾಗಿ ಪ್ರತಿಜ್ಞೆ ಮಾಡಬಾರದು? ದಿನದಿಂದ ದಿನಕ್ಕೆ ಕಾರ್ನಿಯಾದ ಅವಶ್ಯಕತೆಯಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ನೇತ್ರದಾನ ಮಾಡುವವರ ಸಂಖ್ಯೆ ಈ ದಿನಗಳಲ್ಲಿ ಹೆಚ್ಚುತ್ತಿದ್ದರೂ ನಮ್ಮ ದೇಶದಲ್ಲಿನ ಬೇಡಿಕೆಯನ್ನು ಪೂರೈಸಲು ಅದು ವಿಫಲವಾಗಿದೆ. ಆದ್ದರಿಂದ ನೇತ್ರದಾನ ಮಾಡಿ ಕುರುಡುತನದಿಂದ ಬಳಲುವ ಜೀವಗಳಿಗೆ ದೃಷ್ಟಿ ನೀಡಬೇಕು ಎಂದು ವಿಶೇಷ ಚೇತನರ ಏಳಿಗೆಗಾಗಿ ದುಡಿಯುವ ’ಸಕ್ಷಮ’ ಸಂಸ್ಥೆಯ ರಾಜ್ಯ ಸಂಘಟನಾ ಕಾರ್‍ಯದರ್ಶಿ ಶ್ರೀಯುತ ಜಯರಾಂ ಬೊಳ್ಳಾಜೆ ಹೇಳಿದರು.

ಶಕ್ತಿನಗರದ ಶಕ್ತಿ ಪದವಿ ಪೂರ್ವಕಾಲೇಜಿನಲ್ಲಿ ನೇತ್ರದಾನದ ಮಹತ್ವವನ್ನು ಕುರಿತು ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಕ್ತಿ ಆಡಳಿತ ಮಂಡಳಿ ಸದಸ್ಯರು ಹಾಗೂ ಸಕ್ಷಮ ಸಂಸ್ಥೆಯ ಜಿಲ್ಲಾ ಅಧ್ಯಕ್ಷರು ಡಾ. ಮುರಳೀಧರ ನಾೖಕ್‌ ಅವರು ಮಾತನಾಡಿ, ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಏಕೈಕ ಮಾರ್ಗ ನೇತ್ರದಾನಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಶ್ರೀ ಪ್ರಭಾಕರ ಜಿ.ಎಸ್ ಸಕ್ಷಮ ಸಂಸ್ಥೆಯ ಉಪ ಕಾರ್ಯದರ್ಶಿ ಶ್ರೀ ಸುರೇಶ್ ಪ್ರಭು ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಎಂ.ಎಸ್‌.ಡಬ್ಲ್ಯು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಂಸ್ಕೃತ ಪ್ರಾಧ್ಯಾಪಕ ಶ್ರೀನಿಧಿ ಅಭ್ಯಂಕರ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಶಿಲ್ಪ ವಂದಿಸಿದರು.