Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

National Sports Day 2019 Celebration

ರಾಷ್ಟ್ರೀಯ ಕ್ರೀಡಾ ದಿನಾಚರಣೆ

ಕ್ರೀಡೆ ಮನುಷ್ಯನ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವುದು ವಿದ್ಯಾರ್ಥಿಗಳ ಶಾಲಾ ದಿನಗಳಲ್ಲಿಯೇ ಆಟದ ಮೈದಾನ ಹಾಗೂ ಕ್ರೀಡೆಯ ಮಹತ್ವವನ್ನು ತಿಳಿದು ಅದರ ಸದ್ಬಳಕೆ ಮಾಡಿಕೊಂಡು ಕ್ರೀಡೆ ಹಾಗೂ ಶಿಕ್ಷಣ ಎರಡರಲ್ಲೂ ಉನ್ನತ ಸಾಧನೆಯನ್ನು ಮಾಡಬೇಕು ಎಂದು ರಾಷ್ಟ್ರ ಮಟ್ಟದ ಹ್ಯಾಂಡ್ ಬಾಲ್‌ ಕ್ರೀಡಾ ಪಟು ಹಾಗೂ ತರಬೇತಿದಾರ ಎಂ.ಟೆಕ್. ಪದವೀದರ ಸ್ವರೂಪ್‌ ಎಸ್. ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಅಭಿರುಚಿಯ ವಿಷಯಗಳನ್ನು ಆಯ್ಕೆ ಮಾಡಿಕೊಂಡ ಮೇಲೆ ಅದರಲ್ಲಿ ಸಾಧನೆಯನ್ನು ಮಾಡುವ ಛಲ ಹೊಂದಿರಬೇಕು ಎಂದು ಹೇಳಿದರು.

ಶಕ್ತಿ ಶಾಲೆಯ ಪ್ರಾಂಶುಪಾಲರಾದ ವಿದ್ಯಾಕಾಮತ್ ಜಿ. ವಿದ್ಯಾರ್ಥಿಗಳನ್ನುದ್ದೇಶಿಸಿ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳಿಗೆ ಆಟ ಹಾಗೂ ಆಟದ ಮೈದಾನವೆಂದರೆ ಎಲ್ಲಿಲ್ಲದ ಒಲವು ಆದರೆ ಆಟವೊಂದೇ ಜೀವನದ ಗುರಿಯಾಗಬಾರದು ಅಥವಾ ಪಾಠವೊಂದೇ ಜೀವನದ ಸಾಧನೆಯಾಗಬಾರದು. ಆಟ ಪಾಠ ಎರಡರಲ್ಲಿಯೂ ಸಮತೋಲನವನ್ನು ಸಾಧಿಸಿ ಜೀವನದಲ್ಲಿ ಉನ್ನತ ಮಟ್ಟಕ್ಕೇರಬೇಕೆಂದು ಹೇಳಿದರು.

ಭಾರತದ ಶ್ರೇಷ್ಠ ಹಾಕಿ ಕ್ರೀಡಾ ಪಟು ಮೇಜರ್‌ ಧ್ಯಾನ್‌ಚಂದ್‌ಅವರ ಸ್ವರಣಾರ್ಥವಾಗಿ ನಡೆಸಿದ ಕಾರ್ಯಕ್ರಮದಲ್ಲಿ ಅವರ ಬದುಕು ಸಾಧನೆಯ ಬಗ್ಗೆ ಸಾಕ್ಷ್ಯಚಿತ್ರದ ಮೂಲಕ ವಿದ್ಯಾರ್ಥಿಗಳಿಗೆ  ರಾಷ್ಟ್ರೀಯ ಕ್ರೀಡಾ ದಿನದ ಹಾಗೂ ಕ್ರೀಡೆಯ ಮಹತ್ವವನ್ನು ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರು ಶ್ರೀ ಕೆ.ಸಿ ನಾೖಕ್‌, ಶಕ್ತಿ ವಸತಿ ಶಾಲೆ ಪ್ರಾಂಶುಪಾಲೆ ವಿದ್ಯಾಕಾಮತ್ ಜಿ. ಶಕ್ತಿ ಎಜ್ಯುಕೇಶನ್ ಶಕ್ತಿ ಪ. ಪೂ. ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಜಿ.ಎಸ್. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ವಾಗತವನ್ನು ಸಿದ್ಧಾಂತ್, ಕಾರ್ಯಕ್ರಮದ ಮಹತ್ವವನ್ನು ಕುಮಾರಿ ಜಿಶ್ಮಿತ, ನಿರೂಪಣೆಯನ್ನು ಕುಮಾರಿ ರೋಸ್ಮಿ ಮತ್ತು ಮಾರ್ಕ್, ಹಾಗೂ ಧನ್ಯವಾದವನ್ನು ಕುಮಾರಿ ಗ್ಲೋರಿ ನೆರೆವೇರಿಸಿದರು.