ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಹಾಗೂ ಶಕ್ತಿ ಪ ಪೂ ಕಾಲೇಜಿನ ವಾರ್ಷಿಕೋತ್ಸವದ ನಿಮಿತ್ತದ ಕಾರ್ಯಕ್ರಮ
ದಿನಾಂಕ 16-12-2022 ರಂದು ಬೆಳಿಗ್ಗೆ 9.30 ಕ್ಕೆ ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ, 16-12-2022 ರ ಮಧ್ಯಾಹ್ನ 2.30 ಕ್ಕೆ ಶಕ್ತಿ ವಸತಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಮತ್ತು 17-12-2022 ರಂದು ಶಕ್ತಿ ಪದವಿ ಪೂರ್ವ ಕಾಲೇಜಿನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಮಧ್ಯಾಹ್ನ 3 ಕ್ಕೆ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಸಿಎ ನಂದಗೋಪಾಲ್ ಶೆಣೈ, ಅಧ್ಯಕ್ಷರು, ವಿಶ್ವ ಕೊಂಕಣಿ ಕೇಂದ್ರ, ಮಂಗಳೂರು, ಶ್ರೀ ಯುವರಾಜ್ ಜೈನ್ ಚೇರ್ಮೆನ್, ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು, ಮೂಡಬಿದ್ರಿ ಹಾಗೂ ಎಕ್ಸ್ಪರ್ಟ್ ಚಾರಿಟೇಬಲ್ ಫೌಂಡೇಶನ್, ಮಂಗಳೂರು ಇದರ ಚೇರ್ಮೆನ್ ಪ್ರೋ. ನರೇಂದ್ರ ಎಲ್. ನಾಯಕ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಶ್ರೀ ಸಂಜೀತ್ ನಾೖಕ್ ಹಾಗೂ ಡಾ. ಕೆ.ಸಿ ನಾೖಕ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.


