ಮಂಗಳೂರು ಎ. 26 : ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆ ಗೋವಾದ ನಿಕಟಪೂರ್ವ ಸಂಸದರು ಹಾಗೂ ಅನಿವಾಸಿ ಭಾರತೀಯ ಆಯುಕ್ತರಾಗಿರುವ ನರೇಂದ್ರ ಕೆ ಸಾವೈಕರ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಂಗಳೂರಿನ ಹಿರಿಯರಾದ ಸಿ.ಪಿ.ಕಾಮತ್, ಸಂಸ್ಥೆಯ ಸಂಸ್ಥಾಪಕರಾದ ಡಾ.ಕೆ.ಸಿ.ನಾಕ್, ಪ್ರಧಾನ ಸಲಹೆಗಾರ ರಮೇಶ.ಕೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲರಾದ ರವಿಶಂಕರ್ ಹೆಗಡೆ ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಅವರನ್ನು ಸಂಸ್ಥೆಗೆ ಬರಮಾಡಿಕೊಂಡರು.


