Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಶಕ್ತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಚೆಸ್ ಪಂದ್ಯಾಟದಲ್ಲಿ ಪದಕ

ಮಂಗಳೂರು ಆ. 11 : ವಿದ್ಯಾಭಾರತಿ ಕರ್ನಾಟಕ ಆಯೋಜಿಸಿದ ಜಿಲ್ಲಾಮಟ್ಟದ ಚೆಸ್ ಸ್ಪರ್ಧೆಯಲ್ಲಿ ಶಕ್ತಿನಗರದ ಶಕ್ತಿ ವಸತಿ ಶಾಲೆಯ 14 ರ ವಯೋಮಿತಿಯ ವೈಯಕ್ತಿಕ ಬಾಲಕರ ಪಂದ್ಯಾಟದಲ್ಲಿ ಸುಶಾಂತ್‌ಗೆ ಪ್ರಥಮ ಸ್ಥಾನ, 17 ರ ವಯೋಮಿತಿಯ ಪಂದ್ಯಾಟದಲ್ಲಿ ಹೇಮಂತ್ ಕುಮಾರ್ ಆಚಾರ್ಯಗೆ  ಮೂರನೇ ಸ್ಥಾನ ಹಾಗೂ ಶಕ್ತಿ ಪದವಿ ಪೂರ್ವ ಕಾಲೇಜಿನ 19 ರ ವಯೋಮಿತಿಯ ಬಾಲಕರ ಪಂದ್ಯಾಟದಲ್ಲಿ ರೋಷನ್ ನಾಲ್ಕನೇ ಸ್ಥಾನ ಮತ್ತು 19 ರ ವಯೋಮಿತಿಯ ಬಾಲಕಿಯರ ಪಂದ್ಯಾಟದಲ್ಲಿ ಸ್ನೇಹ ನಾಲ್ಕನೇ ಸ್ಥಾನ ಪಡೆದಿರುತ್ತಾರೆ. ಸಮೂಹ ಚೆಸ್ ಸ್ಪರ್ಧೆಯಲ್ಲಿ ಶಕ್ತಿ ವಸತಿ ಶಾಲೆಯ 14 ರ ವಯೋಮಿತಿಯ ಬಾಲಕರು  ದ್ವಿತೀಯ ಸ್ಥಾನ ಹಾಗೂ ಶಕ್ತಿ ಪದವಿ ಪೂರ್ವ ಕಾಲೇಜಿನ 19 ರ ವಯೋಮಿತಿಯ ಬಾಲಕರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ಈ ಸಂದರ್ಭದಲ್ಲಿ ಶಕ್ತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಂಜಿತ್ ನಾೖಕ್‌, ಆಡಳಿತಾಧಿಕಾರಿ ಡಾ. ಕೆ.ಸಿ ನಾೖಕ್‌, ಪ್ರಧಾನ ಸಲಹೆಗಾರ ರಮೇಶ ಕೆ, ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಮೂರ್ತಿ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲರಾದ ರವಿಶಂಕರ್ ಹೆಗಡೆ ಅಭಿನಂದಿಸಿರುತ್ತಾರೆ.