Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಶಕ್ತಿ ಪದವಿ ಪೂರ್ವ ಮತ್ತು ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಟೈಕ್ವಾಂಡೊದಲ್ಲಿ ಪದಕ

ಮಂಗಳೂರು ಜೂ. 30 : ಶಕ್ತಿ ಪದವಿ ಪೂರ್ವ ಮತ್ತು ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳು ದಿನಾಂಕ 25-06-2023 ರಂದು ಬೆಂಗಳೂರಿನಲ್ಲಿ ನಡೆದ 40ನೇ ರಾಜ್ಯಮಟ್ಟದ ಟೈಕ್ವಾಂಡೊ ಚಾಂಪಿಯನ್‌ಶಿಪ್‌ನಲ್ಲಿ ಶಕ್ತಿ ಪದವಿಪೂರ್ವ ಕಾಲೇಜಿನ ಮತ್ತು ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪದಕಗಳನ್ನು ಗೆದ್ದಿರುತ್ತಾರೆ.

ರಿಜ್ವಿತ್ ಜಗದೀಶ್ ಪ್ರಥಮ ಪಿಯುಸಿ ಫೈಟಿಂಗ್ ಮತ್ತು ಪೊಮ್ಸೆಯಲ್ಲಿ ಚಿನ್ನದ ಪದಕ, ಚಿನ್ಮಯ್ ಗೌಡ ದ್ವಿತೀಯ ಪಿಯುಸಿ  ಫೈಟಿಂಗ್ ನಲ್ಲಿ ಚಿನ್ನದ ಪದಕ ಮತ್ತು ಪೊಮ್ಸೆಯಲ್ಲಿ ಕಂಚಿನಪದಕ, ಎಚ್ ಪಿ ಶ್ರೀನಿವಾಸ್ ರೆಡ್ಡಿ ಹತ್ತನೇ ತರಗತಿ ಫೈಟಿಂಗ್ ಮತ್ತು ಪೊಮ್ಸೆಯಲ್ಲಿ ಚಿನ್ನದ ಪದಕ. ಇಶಾನ್ ರೈ ಹತ್ತನೇ ತರಗತಿ ಫೈಟಿಂಗ್ ಮತ್ತು ಪೊಮ್ಸೆಯಲ್ಲಿ ಚಿನ್ನದ ಪದಕ, ಅಖಿಲ್ ಹೆಗ್ಗಡೆ ಹತ್ತನೇ ತರಗತಿ ಫೈಟಿಂಗ್‌ನಲ್ಲಿ ಚಿನ್ನದ ಪದಕ  ಮತ್ತು ಪೊಮ್ಸೆಯಲ್ಲಿ ಬೆಳ್ಳಿಯ ಪದಕ, ನೇಮಿತ್ ಪಿ.ಸಿ. ಒಂಭತ್ತನೇ ತರಗತಿ ಫೈಟಿಂಗ್ ಮತ್ತು ಪೊಂಮ್ಸೆಯಲ್ಲಿ ಚಿನ್ನದ ಪದಕಗಳಿಸಿರುತ್ತಾರೆ.

ಈ ಸಂದರ್ಭದಲ್ಲಿ ಶಕ್ತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಂಜಿತ್ ನಾೖಕ್‌, ಆಡಳಿತಾಧಿಕಾರಿ ಡಾ. ಕೆ. ಸಿ. ನಾೖಕ್‌, ಪ್ರಧಾನ ಸಲಹೆಗಾರ ರಮೇಶ ಕೆ, ಶಕ್ತಿ ಪಪೂ ಪ್ರಾಂಶುಪಾಲರಾದ ಪೃಥ್ವಿರಾಜ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲರಾದ ರವಿಶಂಕರ್ ಹೆಗಡೆ ಅಭಿನಂದಿಸಿರುತ್ತಾರೆ.